ಕೊಟ್ಟೂರು ತರಳುಬಾಳು ಶಾಲೆ ವಾಹನ ಆಕಸ್ಮಿಕ ಬೆಂಕಿ ಹವಗಡ ಅದೃಷ್ಟವಶಾತ್ ದಿಂದ ಪಾರಾದ ಮಕ್ಕಳು…

Share and Enjoy !

Shares
Listen to this article

ಕೊಟ್ಟೂರು: (ಜೂನ್ 15) ಇಂದು ಬೆಳಿಗ್ಗೆ 9 ಗಂಟೆಯ  ಸಮಯದಲ್ಲಿ ಶ್ರೀ ತರಳುಬಾಳು ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರುಕಲಾಗಿದ ಘಟನೆ ನಡೆದಿದೆ..

ಪ್ರತಿ ದಿನದಂತೆ ಈ ದಿನವು ಕೂಡ ಶಾಲಾ ವಾಹನ ಚಾಲಕರ ಶಾಲೆ ವಾಹನದಲ್ಲಿ ಮಕ್ಕಳು ಹಾಗೂ ಶಿಕ್ಷಕಿಯರು ಕರೆದುಕೊಂಡು ಶಾಲೆಗೆ ಹೋಗುವ ಬಸ್ಸುನಲ್ಲಿ ಆಕಸ್ಮಿಕವಾಗಿ ಸ್ವಲ್ಪ ತೊಂದರೆ ಕಂಡು ಬಂದು ಬಸ್ಸಿನ ಇಂಜಿನ್ ನಲ್ಲಿ  ಹೊಗೆ ಬರಲು ಪ್ರಾರಂಭಿಸಿತು, ಇದನ್ನು ಗಮನಿಸಿದ ವಾಹನ ಚಾಲಕ ಜಾಗೃತಿಗೊಂಡು ಮಕ್ಕಳನ್ನು ಹಾಗೂ ಶಿಕ್ಷಕರನ್ನು ತಕ್ಷಣವೇ ಕೆಳಗಿಳಿಸಿದರು,  ಮಕ್ಕಳು ಕೆಳಗಿಳಿದ ಕೆಲವೇ ಕ್ಷಣದಲ್ಲಿ ಶಾಲೆ  ವಾಹನವು ಬೆಂಕಿಗೆ  ಅನಾಹುತವಾಗಿದೆ..

ಈ ಸಂದರ್ಭದಲ್ಲಿ ಶಾಲೆಯ ವಾಹನ ಚಾಲಕ ಹಾಗೂ ಶಿಕ್ಷಕಿಯರು ಮತ್ತು  ಜನರು ಸಹ ಈ ಸ್ಥಳದಲ್ಲಿ ಇದ್ದರು.

Share and Enjoy !

Shares