ಕೃಷಿ ಸಬ್ಸಿಡಿಗಳು ಕುರಿತು ಸಂಶೋಧನೆ: ಶಿಲ್ಪಾ ಶ್ರೀ.ಆರ್ ಅವರಿಗೆ ಪಿ.ಎಚ್.ಡಿ ಪ್ರಧಾನ.

Share and Enjoy !

Shares
Listen to this article

ಬಳ್ಳಾರಿ :ಹೈದರಾಬಾದ್ ಕರ್ನಾಟಕದ ವಲಯದಲ್ಲಿ ರೈತರಗೆ ಸಿಗುತ್ತಿರುವ ಕೃಷಿ ಸಬ್ಸಿಡಿಗಳು ಕುರಿತು ಮತ್ತು ರೈತರು ಸಬ್ಸಿಡಿಗಳು ಪಡೆಯುವಾಗ ಎದುರಿಸುತ್ತಿರುವ  ಸಮಸ್ಯೆಗಳ ಕುರಿತು ಸಂಶೋಧನೆ ಮಾಡಿದಕ್ಕೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಶಿಲ್ಪಾ ಶ್ರೀ.ಆರ್ ಅವರಿಗೆ ಪಿ.ಎಚ್.ಡಿ ನೀಡಿದೆ.

ಬಳ್ಳಾರಿ ನಗರದ ಪ್ರಾಥಮಿಕ ಶಾಲಾ ಶಿಕ್ಷಕ ತಂದೆ ಎಲ್. ರಾಮನಾಯ್ಕ್ ಹಾಗೂ ತಾಯಿ ಲಕ್ಷ್ಮೀ ದಂಪತಿಯ ಪುತ್ರಿ ಡಾ.ಶಿಲ್ಪಾ ಶ್ರೀ. ಆರ್ ಆಗಿದ್ದಾರೆ. ಬಳ್ಳಾರಿ ನಗರದ ಬೆಳಗಲ್ ಕ್ರಾಸ್ ಹತ್ತಿರ ರಾಮಾಂಜಿನೇಯ ದೇವಸ್ಥಾನದ ಹಿಂದೆ ಇರುವ ನಂದಿಶ್ರೀ ಕ್ಲಿನಿಕ್ ಬಿಲ್ಡಿಂಗ್‌ ನಲ್ಲಿಯ ನಿವಾಸಿಯಾಗಿದ್ದಾರೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮೆದಾವಿನಿ ಎಸ್.ಕಟ್ಟಿ ಅವರು ಮಾರ್ಗದರ್ಶಕರಾಗಿದ್ದಾರೆ.

ಹಾಗೇಯೆ ವಿಶ್ವವಿದ್ಯಾಲಯ ಡಾ.ಸಂತೋಷ ಜಿ.ಕೆ, ಡಾ.ಪಿ.ಎಸ್ ಶಶಿಧರ್, ಮರ್ಚೇಡ್ ಮಲ್ಲಿಕಾರ್ಜುನ, ಪ್ರೊ.ಜಗದೀಶ್, ಪ್ರೊ.ತಳಸಿಮಾಲಾ, ಡಾ.ವೈದ್ಯ, ಡಾ.ಸುಷ್ಮ ಜೋಗನ್  ಈ ಮಹಾಪ್ರಬಂಧದ ಸಂಶೋಧನೆ ಮಾಡಲು ಸಹಕಾರ, ಸಲಹೆ ಸೂಚನೆ ನೀಡಿದ್ದಾರೆ. ತಂದೆ, ತಾಯಿ ಮತ್ತು ಕುಟುಂಬದ ಸದಸ್ಯ ಅವರಿಗೆ ಡಾ.ಶಿಲ್ಪಾ ಶ್ರೀ. ಆರ್  ಧನ್ಯವಾದಗಳನ್ನು ತಿಳಿಸಿದರು.‌

ಕೃಷಿ ಸಬ್ಸಿಡಿಗಳ ಕುರಿತು ಪಿ.ಎಚ್.ಡಿ ಮಹಾಪ್ರಬಂಧ :

ಈ ಸಮಯದಲ್ಲಿ ಮಾತನಾಡಿದ ಡಾ. ಶಿಲ್ಪಾ ಶ್ರೀ.ಆರ್ ಅವರು  ಪ್ರಬಂಧವು ಮುಖ್ಯವಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಮೇಧಾವಿನಿ ಕಟ್ಟಿ ಅವರ ಮಾರ್ಗದರ್ಶನದಲ್ಲಿ ” ಎನ್  ಎಕನಾಮಿಕ್ ಅನಾಲಿಸಿಸ್ ಆಪ್ ಅಗ್ರಿಕಲ್ಚರಲ್ ಸಬ್ಸಿಡೀಸ್ ಇನ್ ಕರ್ನಾಟಕ ವಿಥ್ ಸ್ಪೆಷಿಯಲ್  ರೆಫೆರೆನ್ಸ್ ಟು ಹೈದ್ರಾಬಾದ್ ಕರ್ನಾಟಕ ರೀಜನ್” ಮಹಾಪ್ರಬಂಧ ಮಂಡಣೆ ಮಾಡಿದ್ದಾರೆ.

ಕರ್ನಾಟಕ ವಲಯದಲ್ಲಿ ರೈತರಿಗೆ ಸಿಗುತ್ತಿರುವ ಕೃಷಿ ಸಬ್ಸಿಡಿಯನ್ನು ಕುರಿತು ಮತ್ತು ರೈತರು ಸಬ್ಸಿಡಿಯನ್ನು ಪಡೆಯುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಹೇಗೆ ? ಬಗೆಹರಿಸಬೇಕೆಂದು ಎನ್ನುವ ವಿಷಯ ಒಳಗೊಂಡಿದೆ.  ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳುವ  ಮುಖಾಂತರ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ತಲುಪಿಸಬಹುದು ಎಂದು  ಸಲಹೆಗಳನ್ನು ಈ ಮಹಾಪ್ರಬಂಧದಲ್ಲಿ

ಒಳಗೊಂಡಿದೆ ಎಂದರು. ರೈತರ ಆರ್ಥಿಕ ಪರಿಸ್ಥಿತಿ ಯನ್ನು ಸಬ್ಸಿಡಿ ಮುಖಾಂತರ ಹೇಗೆ ? ಸುಧಾರಿಸಬೇಕೆಂದು ಎಂಬ ಸಲಹೆಯನ್ನು ನೀಡಿದ್ದಾರೆ.

Share and Enjoy !

Shares