ಅವಲೋಕನ, ವಿಮರ್ಶೆ, ಟೀಕೆ ಪತ್ರಕರ್ತರಲ್ಲಿ ಇರಬೇಕಾದ ಲಕ್ಷಣ: ಕುಂ.ಕ ಮೂರ್ತಿ.

Share and Enjoy !

Shares
Listen to this article

ಬಳ್ಳಾರಿ :ಪತ್ರಕರ್ತರು ಭಾಷೆಯನ್ನು ಹಿಂಸೆಗೆ ಬಳಸಿಕೊಳ್ಳಬಾರದು, ಬದಲಿಗೆ ಅವಲೋಕನ, ವಿಮರ್ಶೆ, ಟೀಕೆಗೆ ಅತಿ ಮುಖ್ಯವಾದ ಲಕ್ಷಣಗಳನ್ನು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತರಾದ ಕುಂ.ಕ ಮೂರ್ತಿ ಪತ್ರಕರ್ತರ ಕಾರ್ಯಾಗಾರದಲ್ಲಿ ತಿಳಿಸಿದರು.

ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಪತ್ರಿಕಾ ಭವನದಲ್ಲಿ  ಬುಧವಾರ ಬೆಳಿಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಳ್ಳಾರಿ ಜಿಲ್ಲಾ ಘಟಕದಿಂದ “ಮಾಧ್ಯಮ ಕಾರ್ಯಾಗಾರ” ಕ್ಕೆ  ಎಡಿಸಿ ಮಂಜುನಾಥ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ  ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದ ಅವರು ವೃತ್ತಿಯಿಂದ ಹೋದರೆ ಗೌರವ, ಹಣ, ಜನರ ಸಂಪರ್ಕ, ಸಂಘಟನೆಯಿಂದ ಬೆಳೆಯಲು ಸಾಧ್ಯವಾಗುತ್ತದೆ ಹಾಗೇ ಹಣದ ಹಿಂದೆ ಹೋದರೆ ಯಾವುದನ್ನು ಸಾಧನೆ ಮಾಡಲು ಸಾಧ್ಯ ಇಲ್ಲ ಎಂದು ತಿಳಿಸಿದರು.ಪತ್ರಕರ್ತರಿಗೆ ಸಂಘಟನೆ ಪರಸ್ಪರ ಪಾಲಗೊಳ್ಳುವಿಕೆಯಿಂದ ಆತ್ಮಬಲ ಬರುತ್ತದೆ. ಸ್ವಾರ್ಥಕ್ಕಾಗಿ ಪತ್ರಕರ್ತರಾಗಬಾರದು

ಹಿರಿಯ ಕುಂ.ಕ ಮೂರ್ತಿ ಮಾತನಾಡಿದ ಅವರು ಭಾಷೆಯನ್ನು ಹಿಂಸೆಗೆ ಬಳಸಬಾರದು, ಟೀಕೆ,ಅವಲೋಕನ, ವಿಮರ್ಶೆ ಮಾಡುವುದು ಪತ್ರಕರ್ತರ ಅತಿ ಮುಖ್ಯ ಲಕ್ಷಣಗಳು ಇರಬೇಕು ಎಂದರು.

ವೇದಿಕೆಯ ಮೇಲೆ ಕ.ನಿ.ಪಾ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಆ್ಯಂಕರ್ ಗೌರೀಶ್ ಅಕ್ಕಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಯಾಳ್ಪಿ ವಲಿಭಾಷ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.

ಶ್ರೀಮತಿ ಸರಳದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಳ್ಳಾರಿಯ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಗಿರೀಶ್ ಕುಮಾರ್ ಗೌಡ ಮತ್ತು ವಿದ್ಯಾರ್ಥಿಗಳಾದ ಜರ್ನಾದನ, ವಿಜಯ ಆಕಾಶ, ಮಹೇಶ್, ರವಿ ಒಂದು ದಿನದ ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Share and Enjoy !

Shares