ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರಿ-ಕೋಳಿ, ಮೇಕೆಗಳಿಗೆ ಭಾರಿ ಡಿಮ್ಯಾಂಡ್

Share and Enjoy !

Shares
Listen to this article

ಬೆಂಗಳೂರು: ಬಕ್ರಿದ್ ಹಬ್ಬದ ಹಿನ್ನಲೆ ರೈತರು ಕಣ್ಣು ಹಾಯಿಸಿದಷ್ಟು ಕುರಿ, ಕೋಳಿ, ಮೇಕೆ ಕಾಣುತ್ತಿರುವುದು ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ.ಈ ಪೆರೇಸಂದ್ರ ಗ್ರಾಮದಲ್ಲಿ ನಡೆಯುವ ಕುರಿ ಸಂತೆ ದಕ್ಷಿಣ ಭಾರತದಲ್ಲಿಯೇ ಖ್ಯಾತಿ ಪಡೆದಿದ್ದು, ಮಹರಾಷ್ಟ್ರ, ಕೇರಳ, ತಮಿಳುನಾಡು, ಆಂದ್ರಪ್ರದೇಶದಿಂದ ದೊಡ್ಡ ದೊಡ್ಡ ಕುರಿಗಳ ವ್ಯಾಪಾರಿಗಳು ಆಗಮಿಸುತ್ತಾರೆ. ಪೆರೇಸಂದ್ರ ಸಂತೆಗೆ ಕುರಿ ಮಾರಾಟಕ್ಕೆ ಹೋದರೆ, ಒಳ್ಳೆಯ ಲಾಭ ಸಿಗುತ್ತದೆಂದು ರೈತರು ಬರುತ್ತಾರೆ. ಇನ್ನು ಇದೇ ತಿಂಗಳು 29 ರಂದು ಬಕ್ರಿದ್ ಇರುವ ಹಿನ್ನೆಲೆ ಕುರಿ, ಮೇಕೆಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ. ಹೌದು ಬಕ್ರಿದ್ ಇರುವ ಹಿನ್ನೆಲೆ ಒಂದು ಕುರಿಗೆ 25 ಸಾವಿರದಿಂದ 1 ಲಕ್ಷದವರೆಗೂ ಯೋಗ್ಯತೆಗೆ ತಕ್ಕಂತೆ ಕುರಿಗಳು ಮಾರಾಟವಾಗುತ್ತವೆ. ವರ್ಷವಿಡೀ ಕಷ್ಟಪಟ್ಟು ಸಾಕಿದ ಕುರಿಗಳನ್ನು ಬಕ್ರಿದ್​ ಹಿನ್ನಲೆ ದುಬಾರಿ ಬೆಲೆಗೆ ಮಾರುವ ಮೂಲಕ ರೈತರು ಮಂದಹಾಸ ಬೀರಿದರು.ಸರ್ಕಾರದ ಫ್ರೀ ಗ್ಯಾರೆಂಟಿ ಯೋಜನೆಗಳ ಮದ್ಯೆ ತರಕಾರಿ ಹಾಗೂ ದವಸ ದಾನ್ಯಗಳ ಬೆಲೆ ಏರಿಕೆಯಾಗಿದೆ. ಅದರಂತೆ ಬಕ್ರಿದ್ ಹಬ್ಬದ ಪ್ರಯುಕ್ತ ಚಿಕನ್, ಮಟನ್ ಬೆಲೆಯೂ ಏರಿಕೆಯಾಗಿದೆ. ಇದರಿಂದ ಕುರಿ, ಮೇಕೆ ಸಾಕಿದವನೇ ಶೂರ ಎನ್ನುವಂತಾಗಿದೆ.

Share and Enjoy !

Shares