ಮಹಿಳೆಯರಿಗೆ ಇಂದು ಗುಡ್ ನ್ಯೂಸ್: ಗೃಹಲಕ್ಷ್ಮೀ ಯೊಜನೆಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ ಸರ್ಕಾರ

Share and Enjoy !

Shares
Listen to this article
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು(ಜೂನ್ 28) ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಗೃಹಲಕ್ಷ್ಮೀ. ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ಗಂಭೀರ ಸಮಾಲೋಚನೆ ನಡೆಯಲಿದೆ. ಇನ್ನು ಮುಖ್ಯವಾಗಿ ಗೃಹಲಕ್ಷ್ಮೀಯರಿಗೆ ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆ. ಅರ್ಜಿ ಯಾವಾಗ ಹಾಕುವುದು ಎಂದು ಚಿಂತೆ ಮಾಡುತ್ತಿದ್ದ ಮಹಿಳೆಯರಿಗೆ ಇಂದಿನ ಕ್ಯಾಬಿನೆಟ್‌ ಸಭೆ ಬಳಿಕ ಉತ್ತರ ಸಿಗಲಿದೆ. ವಿಶೇಷ ಅಂದ್ರೆ, ಗೃಹಲಕ್ಷ್ಮೀ ಗ್ಯಾರಂಟಿಗಾಗಿಯೇ ಪ್ರತ್ಯೇಕ ಆ್ಯಪ್ ರೆಡಿಯಾಗಿದೆ. ಈ ಹಿನ್ನೆಲೆಲ್ಲಿ ಇಂದು ಮನೆ ಯಜಮಾನಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಸರ್ವರ್ ಡೌನ್​ ಸಮಸ್ಯೆಗೆ ಮುಕ್ತಿಗೆ ತಯಾರಿ:ಗೃಹಲಕ್ಷ್ಮೀ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಾಗಿದೆ. ಅಂದುಕೊಂಡಂತೆ ಆಗಿದ್ರೆ, ಈ ಯೋಜನೆಗೆ ಜುಲೈ 15ರಂದೇ ಅರ್ಜಿ ಆಹ್ವಾನಕ್ಕೆ ಅವಕಾಶ ನೀಡಬೇಕಿತ್ತು. ಆದ್ರೆ, ಗೃಹಜ್ಯೋತಿ ಗೊಂದಲ, ಗದ್ದಲ, ಸರ್ವರ್ ಡೌನ್‌ನಿಂದ ಸಮಸ್ಯೆಯಿಂದ ಮುಕ್ತಿ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ದಪಡಿಸಿದ್ದರಿಂದ 15 ದಿನ ವಿಳಂಬವಾಗಿ ಅರ್ಜಿ ಆಹ್ವಾನ ನೀಡಿಲಾಗುತ್ತಿದೆ. ಅದೂ ಕೂಡಾ ಆ್ಯಪ್ ಮೂಲಕ.
‘ಗೃಹಲಕ್ಷ್ಮೀ’ಗಾಗಿ ಪ್ರತ್ಯೇಕ ಆ್ಯಪ್​​​ ಸಿದ್ಧಪಡಿಸಿದ ಸರ್ಕಾರ: ಗೃಹಲಕ್ಷ್ಮೀ ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಗೃಹಲಕ್ಷ್ಮೀ ಹೆಸರಲ್ಲೇ ಪ್ರತ್ಯೇಕವಾದ ಆ್ಯಪ್ ಸಿದ್ಧಪಡಿಸಲಾಗಿದ್ದು, ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಆ್ಯಪ್ ತಯಾರಿ ಮಾಡಲಾಗಿದೆ. ಇಂದಿನ ಕ್ಯಾಬಿನೆಟ್ ಸಭೆ ಬಳಿಕ ಆ್ಯಪ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಇನ್ನೂ ಸೇವಾಸಿಂಧು ವೆಬ್​​​ಸೈಟ್​​ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್​​​ನಲ್ಲಿ ಆ್ಯಪ್ ಲಭ್ಯವಾಗಲಿದೆ.
BPL, APL, ಅಂತ್ಯೋದಯ ಕಾರ್ಡ್​ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್​ಟಿ ರಿರ್ಟನ್ಸ್ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ .
ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಕಲ ಸಿದ್ದತೆ: ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ರಾಜ್ಯದ ಮಹಿಳೆಯರಿಗೆ ಸರ್ಕಾರ ಗುಡ್​ನ್ಯೂಸ್ ಕೊಡುವ ಸಾಧ್ಯತೆ ಇದೆ. ಗೃಹಜ್ಯೋತಿ ಯಶಸ್ವಿ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನ ಜಾರಿ ಮಾಡಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಗೃಹಲಕ್ಷ್ಮಿ ಯೋಜನೆ ನಾಳಿನ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆಯಾಗಲಿದೆ. ಯೋಜನೆಗೆ ಅರ್ಜಿ ಪ್ರಕ್ರಿಯೆ, ಹೊಸ ಅಪ್ಲಿಕೇಷನ್ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತೆ. ಬಳಿಕ ಕ್ಯಾಬಿನೆಟ್ ಸಭೆಯಲ್ಲಿ ಗ್ರೀನ್ ಸಿಗ್ನಲ್ ಪಡೆದು ಅಧಿಕೃತವಾಗಿ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.
ಹೊಸ ಅಪ್ಲಿಕೇಷನ್ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಮೊಬೈಲ್​ನಲ್ಲಿ ಲಭ್ಯವಿರುತ್ತಾ? ಎಂಬ ಬಗ್ಗೆ ಇಂದು( ಬುಧವಾರ) ಸ್ಪಷ್ಟತೆ ಸಿಗಲಿದೆ. ಯೋಜನೆಗೆ ಏನೇನು ದಾಖಲೆ ಬೇಕು..? ಯಾರು ಫಲಾನುಭವಿಗಳು ಎನ್ನುವ ಬಗ್ಗೆ ಜನ್ರಲ್ಲಿ‌ ಇಂದಿಗೂ ಗೊಂದಲಗಳಿದ್ದು, ಇಂದು ಎಲ್ಲಾ ಗೊಂದಲಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಎನ್ನುವುದಕ್ಕೂ ಮುಹೂರ್ತ ಫಿಕ್ಸ್ ಆಗಲಿದೆ.ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ರಾಜ್ಯಾದ್ಯಂತ ಜನ ಏಕಕಾಲಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಪರಿಣಾಮ 3-4 ದಿನ ಸರ್ವಸ್ ಸಮಸ್ಯೆಯಿಂದ ಜನ ಪರದಾಡುವಂತಾಯ್ತು. ಇದನ್ನ ಮನಗಂಡ ಸರ್ಕಾರ, ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆಯಾಗಬಾರದು ಎಂದು ಪ್ಲ್ಯಾನ್ ಮಾಡಿದೆ. ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಇದೇ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆ ವಿಳಂಬವಾಗ್ತಿರೋದಾಗಿ ಈ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು.

Share and Enjoy !

Shares