ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..
ಸಿಂಧನೂರು: ಚಂದ್ರಶೇಖರ ಆಜಾದ್ ಮೇಲೆ ನಡೆದ ಗುಂಡಿನ ದಾಳಿ ಖಂಡಿನಿ.ಕೂಡಲೇ ಗುಂಡಿನ ದಾಳಿ ನಡೆಸಿದವರನ್ನು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವ ದಲಿತ ಮುಖಂಡ ಶಿವರಾಜ್ ಉಪಲದೊಡ್ಡಿ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಕೋಮುವಾದಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹೋರಾಟಗಾರಿಗೆ, ಬುದ್ಧಿ ಜೀವಿಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದ್ದು.ಅದರಲ್ಲೂ ಕೋಮುವಾದಿಗಳ ಜನ ವಿರೋಧಿ, ರೈತ- ಕಾರ್ಮಿಕ ,ಮಹಿಳೆಯರ ಹಾಗೂ ವಿದ್ಯಾರ್ಥಿ- ಯುವ ನೀತಿಗಳನ್ನು ಕಟುವಾಗಿ ಟೀಕಿಸುವ ಜನಜಾಗೃತಿ ಮೂಡಿಸುವ ನಾಯಕರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಪ್ರಪಂಚವೇ ತಲೆ ಬಾಗಿದ್ದು. ಇತರೆ ದೇಶಗಳು ತಮ್ಮ ದೇಶದ ಹಾಗೂ ದೇಶದ ಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಆದರೆ ಈ ಮನುವಾದಿ ಪಕ್ಷಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಕಾಂಗ್ರೆಸ್ ಸೇರಿದಂತೆ ಇತರೆ ಕೆಲವು ಪಕ್ಷ ಹಾಗೂ ಸಂಘ ಸಂಸ್ಥೆಗಳಲ್ಲಿ ಕೋಮುವಾದಿ ಗಳು ಹೆಚ್ಚಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನ ಬಗ್ಗೆ
ಮತ್ತು ಕೋಮುವಾದಿ ಬಿಜೆಪಿ ಪಕ್ಷದ ನೀತಿಗಳ ವಿರುದ್ಧ ಏಕಾಂಗಿ ದೇಶದ ಹೆಮ್ಮೆಯ ಪುತ್ರ ಚಂದ್ರಶೇಖರ ಆಜಾದ್ ದೇಶದಾದ್ಯಂತ ಜನಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನು ಸಹಿಸದ ಮನುವಾದಿಗಳಿಗೆ ಹಾಗೂ ಕೋಮುವಾದಿ ಗಳು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತವೆ.
ಕೂಡಲೇ ಚಂದ್ರಶೇಖರ ಆಜಾದ್ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ಮೇಲೆ ಸೂಕ್ತ ಕಾನೂನು ಕ್ರಮ ಅಂದರೆ ದೇಶ ದ್ರೋಹ ಅಂತಹ ಪ್ರಕಾರ ದಾಖಲೆ ಮಾಡಬೇಕು.
ಈ ಘಟನೆ ವಿರುದ್ಧ ಸಿಬಿಐ ತನಿಖೆ ಮಾಡಬೇಕು.
ಚಂದ್ರಶೇಖರ ಆಜಾದ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ತಪ್ಪಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು