ಬಳ್ಳಾರಿ:ಚುನಾವಣೆಯ ರಾಜಕೀಯದಿಂದ ರಾತ್ರೋ ರಾತ್ರಿ ಪ್ರತಿಸ್ಥಾಪನೆಗೊಂಡ. ಬ್ರಿಟೀಷರ ವಿರುದ್ದ ಹೋರಾಡಿದ ಕೆಚ್ಚೆದೆಯ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಸಾರ್ವಜನಿಕರ ದರ್ಶನಕ್ಕಾಗಿ. ಪ್ಲಾಸ್ಟಿಕ್ ಪೇಪರ್ನ ಕಟ್ಟಳೆಯಿಂದ ಬಿಡುಗಡೆಯ ಭಾಗ್ಯ ದೊರೆಯಬೇಕಿದೆ.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸರ್ಕಲ್ ನಲ್ಲಿ ರಾಯಣ್ಣನ ಈ ಪ್ರತಿಮೆಯನ್ನು ಸ್ಥಾಪಿಸಲು ಹಾಲುಮತ ಮಹಾ ಸಭಾ ಉದ್ದೇಶಿಸಿತ್ತು. ಈ ಕುರಿತು ಸಕ್ಷಮ ಪ್ರಾಧಿಕಾರಿಗಳಿಗೆ ಮನವಿ ಮಾಡಿತ್ತು.
ಆದರೆ ಸರ್ಕಲ್ ಗಳಲ್ಲಿ ಪ್ರತಿಮೆಗಳ ಸ್ಥಾಪನೆಗೆ ಇರುವ ಹಲವು ಆಕ್ಷೇಪಗಳ ಹಿನ್ನಲೆಯಲ್ಲಿ. ಸರ್ಕಲ್ ಗೆ ಹೊಂದಿಕೊಂಡಂತೆ ಇರುವ ನಗರಾಭಿವೃದ್ಧಿ ಪ್ರಾಧಿಕಾರದ ಡಾ.ಟೇಕೂರ್ ಸುಬ್ರಮಣ್ಯಂ ಪಾರ್ಕ್ನ ಮೂಲೆಯಲ್ಲಿ ಕಳೆದ ಮಾರ್ಚ್ ನಲ್ಲಿ ರಾತ್ರೋ ರಾತ್ರಿ ಪ್ರತಿಸ್ಥಾಪನೆ ಮಾಡಲಾಗಿತ್ತು.
ಪ್ರತಿಮೆ ಅನಾವರಣ ಆಗದ ಕಾರಣ ಪ್ರತಿಮೆಗೆ ಪ್ಲಾಸ್ಟೀಕ್ ಕವರ್ ನಿಂದ ಸುತ್ತಿಡಲಾಗಿದೆ. ಇದಕ್ಕೆ ಬುಡಾ ಅನುಮತಿ ನೀಡಲಾಗಿಲ್ಲ. ನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ದೊರೆತಿಲ್ಲ.
ಇಂತಹ ಮಹಾನ್ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮ ಚಿಕ್ಕದಾಗಿ ಮಾಡದೆ. ಬೃಹತ್ ಮಟ್ಟದಲ್ಲಿ. ಅದೂ ಹಾಲುಮತ ಸಮುದಾಯದ ಮುಖಂಡರುಗಳಾದ ಸಿದ್ದರಾಮಯ್ಯ ಮೊದಲಾದವರ ಸಮ್ಮುಖದಲ್ಲಿ ನಡೆಯಬೇಕೆಂದು. ಆಗ ಬೇಕಿದ್ದ ಅನಾವರಣ ಪ್ರಕ್ರಿಯೆಯನ್ನು ನಿಲ್ಲಿಸಲಾಯ್ತು.
ಚುನಾವಣೆ ಆಯ್ತು, ಬೇಸಿಗೆಯ ಬಿಸಿಲಿನಲ್ಲಿ ರಾಯಣ್ಣನ ಮುಖ ಸಾರ್ವಜನಿಕ ದರ್ಶನಕ್ಕೆ ಇಲ್ಲದೆ ಪ್ಲಾಸ್ಟೀಕ್ ಕವರ್ ನಲ್ಲಿ ಬೆಂದಿದೆ. ಈಗ ಮಳೆಗಾಲ ಆರಂಭವಾಗುತ್ತೆ. ಇನ್ನಾದರೂ ರಾಜಕೀಯ ಮರೆತು. ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆದು ರಾಯಣ್ಣನ ಪ್ರತಿಮೆಗೆ ಮುಕ್ತಿ ನೀಡುವ ಕೆಲಸ ಆಗಬೇಕಿದೆ.