ಕುಂದಗೋಳ: ಕೆ ಎಸ್ ಆರ್ ಟಿಸೀ ಬಸ್‌ಗಳಲ್ಲಿ ಮಹಿಳೆಯರಿಗಿರುವ ಉಚಿತ ಪ್ರಯಾಣದ ಪ್ರಯೋಜನೆ ಪಡೆಯಲು ಬುರ್ಖಾ ತೊಟ್ಟು ಬಂದು ಸಿಕ್ಕಿಬಿದ್ದ ಘಟನೆ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಡಗೇರಿ ಗ್ರಾಮದ ವೀರಭದ್ರಯ್ಯ ನಿಂಗಯ್ಯ ಮಠಪತಿ ಎಂಬಾತನೇ ಬುರ್ಖಾ ತೊಟ್ಟ ವ್ಯಕ್ತಿ. ಈತ ತನ್ನ ಊರು ಗೋಡಗೇರಿಯಿಂದಲೇ ಬಸ್‌ನಲ್ಲಿ ಬುರ್ಖಾ ತೊಟ್ಟು ಪ್ರಯಾಣ ಬೆಳೆಸಿದ್ದ ಎಂದು ಹೇಳಲಾಗಿದೆ.
ಈತನ ಬಳಿ ಮಹಿಳೆಯ ಹೆಸರಲ್ಲಿ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿದೆ.
ಸಂಶಿ ಗ್ರಾಮದ ತುಂಬೆಲ್ಲ ಈತ ಬುರ್ಖಾ ತೊಟ್ಟು ಸಂಚರಿಸಿದ್ದಾನೆ. ಈ ವೇಳೆ ಈತನ ಚಲನವಲನಗಳಿ೦ದ ಅನುಮಾನಗೊಂಡ ಕೆಲವರು, ನಿಲ್ದಾಣದಲ್ಲಿ ಬಸ್ ಹತ್ತಲು ಬಂದು ಕುಳಿತಿದ್ದ ಆತನನ್ನು ವಿಚಾರಿಸಿ, ಪರಿಶೀಲಿಸಿದಾಗ ಸತ್ಯ ಹೊರಬಂದಿದೆ ತಿಳಿದು ಬಂದಿದೆ