ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ
1)1ಚಮಚ ಕಡ್ಲೇ ಹಿಟ್ಟು, 1/4 ಚಮಚ ಅರಿಶಿಣ ಪುಡಿ, 3 ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ರೋಸ್ ವಾಟರ್. ಇವಿಷ್ಟು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ನ್ನು ಕುತ್ತಿಯ ಸುತ್ತ ಹಚ್ಚಿ. ಇದನ್ನು 45 ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರದಲ್ಲಿ ಎರಡು ಬಾರೀ ಈ ರೀತಿ ಮಾಡುವುದರಿಂದ ನಿಮ್ಮ ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಯೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ
2) ಮನೆಮದ್ದು ಅಲೂಗಡ್ಡೆ ಸಿಪ್ಪೆಯ ಒಳಭಾಗವನ್ನು 5ರಿಂದ 8 ನಿಮಿಷದಷ್ಟು ನಿಮ್ಮ ಕುತ್ತಿಯ ಸುತ್ತಲೂ ರಬ್ ಮಾಡಿ. ಇದು ಕೂಡ ಕಪ್ಪು ಕಲೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ.
3) ಕಿತ್ತಳೆಯ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅಥವಾ ನೆಲ್ಲಿಕಾಯಿ ಪುಡಿ ಬಳಸಿ ಇದಕ್ಕೆ ಅರ್ಧ ಚಮಚ ಅರಿಶಿಣ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕುತ್ತಿಯ ಸುತ್ತಲೂ ಹಚ್ಚಿ, 45 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಕೂಡ ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಯನ್ನು ಕಡಿಮೆ ಮಾಡಲು ಒಂದು ಒಳ್ಳೆಯ ಮನೆಮದ್ದು ಎಂದು ಹೇಳಲಾಗುತ್ತದೆ.