ಸಿರುಗುಪ್ಪ. ಜುಲೈ 07: ತಾಲೂಕಿನ ಕೂರಿಗನೂರು ಗ್ರಾಮದ ಕಂಬಯ್ಯನವರ ರಮೇಶ ತಂದೆ ಸೋಮನಾಯಕ ಹೆಸರಿನ 45 ವರ್ಷದ ವ್ಯಕ್ತಿ ಆಂಧ್ರದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹಗರಿ ನದಿಯಲ್ಲಿ ಮೃತ ಪಟ್ದಿದ್ದಾನೆ
ಘಟನೆಯು ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು ಮೃತ ರಮೇಶನಿಗೆ ಪತ್ನಿ ಮತ್ತು ಎರಡು ಹೆಣ್ಣು ಮತ್ತು ಒಂದು ಗಂಡು ಸೇರಿ ಮೂರು ಮಕ್ಕಳಿದ್ದರು. ಈತನ ತಲೆಗೆ ತೀವ್ರ ಪೆಟ್ಟಾಗಿದ್ದು ವಿಪರೀತ ರಕ್ತಸ್ರಾವವಾಗಿ ವ್ಯಕ್ತಿ ಸಾವನ್ನಪ್ಪಿರಬಹುದು ಮತ್ತು ಯಾರೋ ಈತನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ
ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ವೆಂಕಟೇಶ ಕರೂರು ಭಾಗದ ಕಂದಾಯ ಅಧಿಕಾರಿ ಹನುಮಂತ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪೂರ್ವ ಮಾಹಿತಿ ಪಡೆದು ವಿಷಯ ಸಂಗ್ರಹಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳವು ನೆರೆ ರಾಜ್ಯದ ಆಂಧ್ರಪ್ರದೇಶದಲ್ಲಿ ಇರುವುದರಿಂದ ಇದು ಆಂಧ್ರಪ್ರದೇಶದ ಪೊಲೀಸರ ಪ್ರಕರಣವಾಗಿದೆ.
ಸುದ್ದಿ ತಿಳಿದ ಆಂಧ್ರಪ್ರದೇಶದ ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳು ಆಗಮಿಸಿ ಮೃತರ ಸಂಬಂಧಿಕರನ್ನು ಆಂಧ್ರಪ್ರದೇಶದ ಹೊಳಗುಂದ ಪೊಲೀಸ್ ಠಾಣೆಗೆ ಕರೆದೊಯ್ದು ಕ್ರಮ ಜರುಗಿಸುತ್ತಿದ್ದಾರೆಂದು ತಿಳಿದು ಬಂದಿದೆ.