ಫ್ರಾನ್ಸ್ ನಲ್ಲಿ ನಡೆಯುವ ಭಾರತೀಯ ಸೇನಾ ಪಡೆಯಲ್ಲಿ ಮಸ್ಕಿಯ ಯುವ ಪ್ರತಿಭೆ ಭಾಗಿ.

Share and Enjoy !

Shares
Listen to this article

ಮಸ್ಕಿ : ಫ್ರಾನ್ಸ್ ನಲ್ಲಿ ನಡೆಯುವ ಭಾರತೀಯ  ಸೇನಾ ಪಡೆಯಲ್ಲಿ ಮಸ್ಕಿಯ ಯುವ ಪ್ರತಿಭೆ ಭಾಗಿಯಾಗಿಯಾಗಿದ್ದಾರೆ ಹೌದು ಪಟ್ಟಣದ ಶ್ರೀಮತಿ ಕವಿತಾ ಲಕ್ಷ್ಮೀ ಡಾ.ಮಲ್ಲೇಶಪ್ಪ ಅಂಗಡಿ ದ೦ಪತಿಗಳ ಮಗನಾದ ಕು.ಅಭಿಷೇಕ್ ಅಂಗಡಿ ಎನ್ನುವ ಯುವಕ ಕಳೆದ ಒಂದು ರ‍್ಷ ಭಾರತೀಯ ನೌಕಾ ಸೇನೆಗೆ ಆಯ್ಕೆಯಾಗಿ .ತಮ್ಮ ತರಬೇತಿ ಓಡಿಸಾದಲ್ಲಿ ಮುಗಿಸಿ ದೆಹಲಿಯ ರಾಜ್ ಪಥದಲ್ಲಿ ಇವರು 2022 ಮತ್ತು 2023 ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದರು ಈಗ ಮೊತ್ತ ಮೊದಲಿಗೆ  ಮಸ್ಕಿಯ ಯುವ ಸೇನಾನಿ ಜುಲೈ 14 ರಂದು  ನಡೆಯಲಿರುವ ಐಐಇ ಬ್ಯಾ ಸ್ಟಿಲ್ಲೆ ಡೇ ಪರೇಡ್  ಅಲ್ಲಿ ಭಾಗವಹಿಸುವ ಮೂಲಕ ಭಾರತೀಯ ನೌಕಾಪಡೆಯ ಮುಖಾಂತರ ಭಾರತ ದೇಶವನ್ನು ಪ್ರತಿನಿಧಿಸುತ್ತದ್ದಾನೆ. ಭಾರತೀಯ ಮೂರು ದಳದ ಸೇನಾಪಡೆ ಭಾಗವಹಿಸಲಿದ್ದು ಪ್ರಧಾನಿ ನರೇಂದ್ರ ಮೋದಿಯನ್ನು ಮುಖ್ಯ ಅತಿಥಿಗಳಾಗಿ ಆಮಂತ್ರಿಸಲಾಗಿದೆ.ನೌಕಾಪಡೆಯ ಒಟ್ಟು 64 ಸೈನಿಕರು ಭಾಗವಹಿಸುತ್ತಾರೆ. ಮಸ್ಕಿಯ ಯವಕ ಅಭಿಷೇಕ ಅಂಗಡಿ ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕುಟುಂಬದ ಸದಸ್ಯರು ಹಾಗೂ ಮಸ್ಕಿಯ ಜನರು ವ್ಯಕ್ತಪಡಿಸಿದ್ದಾರೆ.

Share and Enjoy !

Shares