ಚಂದ್ರಯಾನ – 3 ಯಶಸ್ವಿಯಾಗುವಂತೆ ಪ್ರಾರ್ಥಿಸಿ ಜೆಸಿಐ ವತಿಯಿಂದ ವಿಶೇಷ ಪೂಜೆ.

Share and Enjoy !

Shares
Listen to this article

ಕಂಪ್ಲಿ
ಜುಲೈ,14
ಕಂಪ್ಲಿ ಪಟ್ಟಣದ ಆರಾಧ್ಯ ದೈವ ಶ್ರೀ ಪೇಟೆ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಜೆಸಿಐ ಕಂಪ್ಲಿ ಸೋನಾ ವತಿಯಿಂದ ಚಂದ್ರಯಾನ-3 ಯಶಸ್ವಿಯಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ ಮಾತನಾಡಿ ಇಸ್ರೋ ವತಿಯಿಂದ 2019 ರ ಜು 22 ರಂದು ಕೈಗೊಳ್ಳಲಾಗಿದ್ದ ಚಂದ್ರಯಾನ 2 ಯೋಜನೆ ಕಾರಣಾಂತರಗಳಿಂದ ವಿಫಲವಾಗಿತ್ತು.

ಈ ರೀತಿಯ ಯಾವುದೇ ಸಮಸ್ಯೆಗಳು ಮರುಕಳಿಸದೆ ಚಂದ್ರಯಾನ-3 ಯಶಸ್ವಿಯಾಗುವ ಮೂಲಕ ಭಾರತ ದೇಶದ ವಿಜ್ಞಾನಿಗಳ ಸಮಾರ್ಥ್ಯ ಜಗತ್ತಿನಾದ್ಯಂತ ಪಸರಿಸಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಜೆಸಿಐ ಕಾರ್ಯದರ್ಶಿ ಬಿ.ಎಚ್. ಎಂ. ಅಮರನಾಥ ಶಾಸ್ತ್ರಿ, ಪದಾಧಿಕಾರಿಗಳಾದ ಸುನಿಲ್, ಗುರುಪ್ರಸನ್ನ, ಸಿದ್ದರಾಮೇಶ್ವರ ಶಾಸ್ತ್ರಿ, ಬಿ.ಎಂ. ಕೆದಾರ್, ಸುಹಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share and Enjoy !

Shares