ವಿಶ್ವದ ಚಿತ್ತ ಭಾರತದತ್ತ:ಇಂದು ಮಧ್ಯಾಹ್ನ ಚಂದ್ರನೆಡೆಗೆ ಇಸ್ರೋ ಸವಾರಿ

Share and Enjoy !

Shares
Listen to this article

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದೆ. ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಉಡಾವಣೆ ಆಗಲಿದೆ.

ಕ್ಷಣಗಣನೆ ಪ್ರಾರಂಭವಾಗಿರುವ ವಿಡಿಯೋವನ್ನು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮೂಲಕ ಇಸ್ರೋ ರೋವರ್ ಚಂದ್ರನ ಮೇಲೆ ಯ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಮೂಲಕ ಉಡಾವಣೆ ನಡೆಯಲಿದೆ.

ಇದು ಅತಿ ಭಾರವಾದ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದನ್ನು ಫ್ಯಾಟ್ ಬಾಯ್ ಎಂದು ಕರೆಯಲಾಗಿದೆ.

ಒಟ್ಟಾರೆ ಈ ಯೋಜನೆಗೆ ಬರೋಬ್ಬರಿ 600 ಕೋಟಿ ಖರ್ಚು ಮಾಡಲಾಗಿದೆ.

Share and Enjoy !

Shares