ಸಿಂಧನೂರು: ನಗರದ ಹೀರೆ ಹಳ್ಳದ ಬ್ರಿಡ್ಜ್ ಅಗಲಿಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬ್ರಿಡ್ಜ್ ಹತ್ತಿರ ಇರುವ ಟವರ್ ವಿದ್ಯುತ್ ಲೈನ್ ಸ್ಥಳಾಂತರ ಮಾಡುವ ಅವಶ್ಯಕತೆ ಇರುತ್ತದೆ.
ಆದರಿಂದ ಇದೆ ರವಿವಾರ 16 ರಂದು ಬೆಳಗ್ಗೆ 10 ಗಂಟೆಗೆಯಿಂದ ಸಾಯಂಕಾಲ 5 ರ ವರೆಗೆ ಕೋಟೆ ಏರಿಯಾ,ಸುಕಲಪೇಟೆ,ಹಳೆಬಜಾರ್, ಮೆಹಬೂಬ್ ಕಾಲೋನಿ, ಬ್ರಾಹ್ಮಣರ ಓಣಿ,ಬಡಿಬೇಸ್ ಭಗೀರಥ ಕಾಲೋನಿ, ಇಂದಿರನಗರ,ನಟರಾಜ್ ಕಾಲೋನಿ, ಸೇರಿದಂತೆ ವಿವಿಧೆಡೆ
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಕಾರಣ ಸಮಸ್ತ ಗ್ರಾಹಕರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಲು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ