ಬಿಳಿ ಕೂದಲಿಗೆ ಮುಕ್ತಿ, ರಾಮಭಾಣನಂತೆ ಕೆಲಸ ಮಾಡುತ್ತದೆ: ಆಯುರ್ವೇದ ಜ್ಯೂಸ್

Share and Enjoy !

Shares
Listen to this article

ಕೋಮಲವಾದ ಕಪ್ಪು ಕೇಶರಾಶಿಯನ್ನು ಬಯಸದವರು ಯಾರು? ಆದರೆ, ಪ್ರಸ್ತುತ ಕಳಪೆ ಜೀವನಶೈಲಿ, ಮಾಲಿನ್ಯದಿಂದಾಗಿ ಅತಿ ಚಿಕ್ಕ ವಯಸ್ಸಿನವರಲ್ಲಿಯೂ ಬಿಳಿ ಕೂದಲು ಮೂಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಈ ಅಕಾಲಿಕ ಕೂದಲಿನ ಬಗ್ಗೆ ತುಂಬಾ ಚಿಂತಿತರಾಗುತ್ತಾರೆ. ಅಷ್ಟಕ್ಕೂ ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಏಕೆ? ನೈಸರ್ಗಿಕವಾಗಿ ಅದನ್ನು ಕಪ್ಪಾಗಿಸುವುದು ಹೇಗೆ?  ಆಯುರ್ವೇದ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.  ಅದೂ ಕೂಡ ಯಾವುದೇ ಸೈಡ್ ಎಫ್ಫೆಕ್ಟ್ಸ್ ಇಲ್ಲದೆಯೇ ನೀವು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುವುದು

ಕಿರಿಯ ವಯಸ್ಸಿನಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುವುದು.
ತುಂಬಾ ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಎಂದರೆ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಮೆಲನಿನ್ ಕೊರತೆಯೇ ಪ್ರಮುಖ ಕಾರಣ. ಮತ್ತೊಂದು ಕಾರಣವೆಂದರೆ ಆಹಾರದ ಕೊರತೆ. ವಾಸ್ತವವಾಗಿ, ನಮ್ಮ  ದೇಹದಲ್ಲಿ ಇಂತಹ ಹಲವಾರು ಜೀವಕೋಶಗಳು ಒಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಕೂದಲನ್ನು ಕಪ್ಪಾಗಿಸುತ್ತವೆ. ಪೌಷ್ಟಿಕ ಆಹಾರದ ಕೊರತೆಯಿಂದಾಗಿ ದೇಹ ಮತ್ತು ಕೂದಲು ಸರಿಯಾದ ಸಂಪೂರ್ಣ ಪೋಷಣೆಯನ್ನು ಪಡೆಯುವುದಿಲ್ಲ. ಇದು ಕೆಲವರಲ್ಲಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೂ ಕಾರಣವಾಗುತ್ತದೆ.ನಮ್ಮಲ್ಲಿ, ಕೆಲವರು ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳನ್ನು ಬಳಸುತ್ತಾರೆ. ಇದು ಕೆಲವರಿಗೆ ಉಪಯೋಗವಾದರೆ, ಹಲವರಲ್ಲಿ ಅಡ್ಡಪರಿಣಾಮವನ್ನೂ ಕೂಡ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಒಳ್ಳೆಯ ಆಯ್ಕೆಯಾಗಿದೆ. ನೈಸರ್ಗಿಕ ವಿಧಾನ ಎಂದರೆ ಸಾಮಾನ್ಯವಾಗಿ ತಲೆಗೆ ಬರುವುದು ಆಯುರ್ವೇದ ಚಿಕಿತ್ಸೆ ಎಂದು.  ಆಯುರ್ವೇದದ ಪ್ರಕಾರ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಎರಡೇ ಎರಡು ಜ್ಯೂಸ್ ಸಾಕಂತೆ. ಅದು ಯಾವ ಜ್ಯೂಸ್, ಅದನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ.

ನೆಲ್ಲಿಕಾಯಿ ಜ್ಯೂಸ್ ಪರಿಣಾಮ: 
ನಿಮಗೆಲ್ಲಾ ತಿಳಿದಿರುವಂತೆ ಕೂದಲನ್ನು ಕಪ್ಪಾಗಿಸಲು ನೆಲ್ಲಿಕಾಯಿ ತುಂಬಾ ಪ್ರಯೋಜನಕಾಗಿ ಆಗಿದೆ. ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್ ಸೇವಿಸುತ್ತಾ ಬಂದರೆ ಇದು ಕೂದಲಿಗೆ ಅಗತ್ಯವಿರುವ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ, ಸತತ ಒಂದು ತಿಂಗಳವರೆಗೆ ನಿರಂತರವಾಗಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಶೀಘ್ರದಲ್ಲಿಯೇ ಪರಿಣಾಮ ಗೋಚರಿಸುತ್ತದೆ.

ಇದಲ್ಲದೆ, ನಿರ್ದಿಷ್ಟ ಪ್ರಮಾಣದ ನೆಲ್ಲಿಕಾಯಿ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಕೂಡ ನಿಮ್ಮ ದೇಹ ಮತ್ತು ಕೂದಲಿನ ಕೋಶಗಳಿಗೆ ಪೋಷಣೆ ಲಭ್ಯವಾಗಲಿದೆ. ಕೆಲವು ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಸ್ವಲ್ಪ ಆಮ್ಲಾ ಪುಡಿಯನ್ನು ಬೆರೆಸಿ ನೀರು ಉಗುರುಬೆಚ್ಚಗಾದಾಗ ಅದನ್ನು ಕುಡಿಯಿರಿ.

ಕರಿಬೇವಿನ ಜ್ಯೂಸ್ ಪರಿಣಾಮ: 
ಕಣ್ಣಿನ ಆರೋಗ್ಯಕ್ಕೆ ರಾಮಬಾಣದಂತಿರುವ ಕರಿಬೇವಿನ ಸೊಪ್ಪು ಕೂದಲನ್ನು ಕಪ್ಪಾಗಿಸುವಲ್ಲಿಯೂ ತುಂಬಾ ಪ್ರಯೋಜನಕಾರಿ. ನಿತ್ಯ ಕರಿಬೇವಿನ ಸೊಪ್ಪಿನಿಂದ ತಯಾರಿಸಿದ ಜ್ಯೂಸ್ ಸೇವನಿಯಿಂದ ದೃಷ್ಟಿ ದೋಷ ಪರಿಹಾರದ ಜೊತೆಗೆ ಕೂದಲಿಗೆ ಅಗತ್ಯ ಪೋಷಣೆಯೂ ಲಭ್ಯವಾಗುತ್ತದೆ. ಆದರೆ, ಕರಿಬೇವಿನ ಜ್ಯೂಸ್ ಅನ್ನು ಪ್ರತಿ ದಿನ ಸೇವಿಸುವುದರಿಂದ ಮಾತ್ರವೇ ಇದರ ಪ್ರಯೋಜನವಾಗುತ್ತದೆ.

ಕರಿಬೇವಿನ ಜ್ಯೂಸ್ ತಯಾರಿಸುವುದು
* ಸುಮಾರು 100 ಮಿಲಿ (100 ಮಿಲಿ) ನೀರಿನಲ್ಲಿ ಹತ್ತರಿಂದ ಹದಿನೈದು ಕರಿಬೇವಿನ ಎಲೆಗಳನ್ನು ಹಾಕಿ ಅದನ್ನು ಚೆನ್ನಾಗಿ ಕಾಯಿಸಿ.
* ನೀರು ಅರ್ಧಕ್ಕೆ ಕಡಿಮೆಯಾಗುವವರೆಗೆ ಚೆನ್ನಾಗಿ ಕುದಿಸಿ.
* ನೀರು ಕುದ್ದು ಅರ್ಧದಷ್ಟಾದಾಗ ಅದನ್ನು  ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

Share and Enjoy !

Shares