ಇಂದಿನಿಂದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಪ್ರಾರಂಭ:ಯಜಮಾನಿಗೆ 2000 ರೂಪಾಯಿಗಳು

Share and Enjoy !

Shares
Listen to this article

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮೂರು ಗ್ಯಾರಂಟಿಗಳು ಜಾರಿ ಆಗಿವೆ. ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿದ್ದು ಇಂದಿನಿಂದ ಅರ್ಜಿಸಲ್ಲಿಕೆ ಅರಂಭವಾಗಿದೆ. ಅರ್ಜಿ ನೋಂದಣಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್‌ ನಂಬರ್ ಅಗತ್ಯವಿದ್ದು, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪುಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.‌

ಇಂದಿನಿಂದ ಬೆಂಗಳೂರು ಒನ್ ಕೇಂದ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಕೇಂದ್ರಗಳಲ್ಲಿ ನೂಕು ನುಗ್ಗಲಾಗುವ ಸಾಧ್ಯತೆ ಇದೆ.‌ ಸದ್ಯ 1.28 ಕೋಟಿಯಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಅರ್ಜಿ ಸಲ್ಲಿಕೆಯ ಸ್ವೀಕೃತಿಪತ್ರ ಕಡ್ಡಾಯ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಾರ್ಗಗಳು

 • ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಮನೆಯ ಯಜಮಾನಿಯ ಹೆಸರು ಇರಬೇಕು
 • ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು‌ ಮಹಿಳೆಯರು ಇದ್ದರೆ ಒಬ್ಬರಿಗೆ ಮಾತ್ರ ಅನ್ವಯ
 • ಅರ್ಜಿ ಅಹ್ವಾನಕ್ಕೆ ಆಧಾರ್ ಕಾರ್ಡ್ ನಂಬರ್ ಕಡ್ಡಾಯ
 • ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು
 • ಅರ್ಜಿದಾರರು ಬೆಂಗಳೂರು ಒನ್ ಆಥವ ಆ್ಯಪ್ ಮೂಲಕವು ಅರ್ಜಿ ಸಲ್ಲಿಸಬಹುದು
 • ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
 • ಕುಟುಂಬ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರೆಗೆ ಪಾವತಿದಾರರಾಗಿರಬಾರದು
 • ಕುಟುಂಬದ ಯಜಮಾನಿ ಹಾಗೂ ಯಜಮಾನ ಜಿಎಸ್ ಟಿ ರಿರ್ಟನ್ಸ್ ಆಗಿರಬಾರದು. ಇನ್ನು ಒಂದಷ್ಟು ಮಾರ್ಗಸೂಚಿಗಳು ಬದಲಾಗುವ ಸಾಧ್ಯತೆ ಇದೆ.

ನೋಂದಣಿಗೆ ದಾಖಲೆಗಳು

 • ಪಡಿತರ ಚೀಟಿ ಸಂಖ್ಯೆ
 • ಪತಿ ಪತ್ನಿ ಇಬ್ಬರ ಅಧಾರ್ ಕಾರ್ಡ್ ಜೆರಾಕ್ಸ್
 • ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಅಥವಾ ಬೇರೆ ಬ್ಯಾಂಕ್ ವರ್ಗಾವಣೆ ಬೇಕು ಅಂದರೂ ಅವಕಾಶ ಇದೆ.
 • ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್

ನೋಂದಣಿ ಮಾಡುವ ವಿಧಾನ

ಪಡಿತರ ಚೀಟಿಯಲ್ಲಿ ಮನೆಯೊಡತಿ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ ಗೆ ದಿನಾಂಕ, ಸಮಯ ಮತ್ತು ಸ್ಥಳದ ಸಂದೇಶ ಬರಲಿದೆ. ನಿಗದಿತ ದಿನ ಸ್ಥಳೀಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು. ನೋಂದಣಿಗೆ ಸಂದೇಶ ಬಾರದೇ ಇದ್ರೆ 1902ಗೆ ಕರೆ ಮಾಡಿ ಅಥವಾ 8147500500 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಅದೇ ಸೇವಾ ಕೇಂದ್ರಕ್ಕೆ ಸಂಜೆ 5-7ಕ್ಕೆ ತೆರಳಿ ನೋಂದಣಿ ಮಾಡಬಹುದು. ಒಂದು ವೇಳೆ ನೀವು ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ ಸರ್ಕಾರವೇ ನೇಮಿಸಿರುವ ಪ್ರತಿನಿಧಿಗಳು ನಿಮ್ಮ ಮನೆಯ ಬಳಿಯೇ ಬಂದು ನೋಂದಣಿ ಮಾಡಲಿದ್ದಾರೆ.

 

Share and Enjoy !

Shares