ಕರ್ನಾಟಕದಲ್ಲಿ ಹೆಚ್ಚಾದ ಮದ್ರಾಸ್ ಐ ರೋಗ: ಆರೋಗ್ಯ ಇಲಾಖೆಯ ನೇತ್ರ ತಜ್ಞರಿಂದ ಸಲಹೆಗಳು

Share and Enjoy !

Shares
Listen to this article

ಬೆಂಗಳೂರು ಜು.31: ಪಿಂಕ್‌ ಐ ಅಥವಾ ಕಾಂಜಂಕ್ಟಿವಿಟಿಸ್  ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ತಿಳಿಸಿದೆ.

ಮದ್ರಾಸ್ ಐ ರೋಗದ ಲಕ್ಷಣಗಳು

  1. ಕಣ್ಣು ಕೆಂಪಾಗುವುದು, ನೀರು ಸೋರುವಿಕೆ
  2. ಅತಿಯಾದ ಕಣ್ಣೀರು
  3. ಕಣ್ಣಿನಲ್ಲಿ ತುರಿಕೆ
  4. ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ
  5. ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
  6. ದೃಷ್ಟಿ ಮಂಜಾಗುವುದು
  7. ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು

ತಡೆಯುವ ಕ್ರಮ

  1. ವೈಯಕ್ತಿಕವಾಗಿ ಸ್ವಚ್ಛತೆ ಗೆ ಆದ್ಯತೆ ಕೊಡಿ
  2. ಆರೋಗ್ಯವಂತ ವ್ಯಕ್ತಿಯು ಸೊಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು.
  3. ಸೊಂಕಿತ ವ್ಯಕ್ತಿ ಬಳಸಿದ ಕರವಸ್ರ್ತ ಮತ್ತು ಇತರ ವಸ್ತುಗಳನ್ನು ಬಳಸಬಾರದು.
  4. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು.
  5. ಸೊಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
  6. ತೀವ್ರ ಸೊಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು

ರೋಗ ಕಡಿಮೆ ಮಾಡುವ ವಿಧಾನ

  1. ಸ್ಪಚ್ಫವಾದ ನೀರಿನಿಂದ ಕಣ್ಣುಗಳನ್ನ ಶುಚಿಗೊಳಿಸಿ
  2. ಸೊಂಕು ಕಂಡು ಬಂದ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
  3. ಸೊಂಕಿತ ವ್ಯಕ್ತಿಗಳು ಪೌಷ್ಟಿಕ ಆಹಾರ ಸೇವಿಸಿ.
  4. ಸೊಂಕಿತ ವ್ಯಕ್ತಿಗಳು ಶುಚಿಯಾದ ಕರವಸ್ತ್ರ ಬಳಸಿ

ಏನು ಮಾಡಬಾರದು

  1. ಕೈಗಳಿಂದ ಪದೇ ಪದೇ ಕಣ್ಣುಗಳನ್ನ ಮುಟ್ಟಬೇಡಿ.
  2. ಸ್ವಯಂ ಚಿಕಿತ್ಸಾ ವಿಧಾನಗಳನ್ನ ಮಾಡಬಾರದು.
  3. ಸೊಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ.
  4. ಸೊಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನ ಬಳಸುವುದು.

ಮದ್ರಾಸ್ ಐ ಮತ್ತು ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಮಾತನಾಡಿ ಚಿಕಿತ್ಸೆ ನಿಡುತ್ತಿದ್ದೇವೆ ನಾವು ಕಡಿಮೆ ಮಾಡಲಿಕ್ಕೆ ಕ್ರಮ ವಹಿಸುತ್ತೆವೆ ಎಂದು ಹೇಳಿದರು.

 

Share and Enjoy !

Shares