ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕೊಠಡಿಯ ಬಾಗಿಲನ್ನು ಬ್ಲ್ಕಾಕ್ ಬೋರ್ಡ್ ಮಾಡಿಕೊಂಡ ಶಿಕ್ಷಕರು

Share and Enjoy !

Shares
Listen to this article

ಬಳ್ಳಾರಿ: ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರ್ಕಾರ ಬರಲಿ. ಆದ್ರೆ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಸುಧಾರಣೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಇನ್ನೂ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿವೆ. ಅದರಲ್ಲೂ ಮುಖ್ಯವಾಗಿ ಶಾಲೆಗಳು ಹೊಂದಿರಬೇಕಾದ ಅತಿಅಗತ್ಯ ಮೂಲ ಸೌಲಭ್ಯಗಳಲ್ಲಿ ಬ್ಲ್ಯಾಕ್ ಬೋರ್ಡ್​. ಈ ಬೋರ್ಡ್​ನಿಂದಲೇ ಮಕ್ಕಳಿಗೆ ವಿಧ್ಯೆ ಕಲಿಸುವುದು. ಆದ್ರೆ, ಈ ಬ್ಲ್ಯಾಕ್ ಬೋರ್ಡ್​ ಇಲ್ಲ ಅಂದ್ರೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಗೆ ಬರೆದು ತೋರಿಸಬೇಕು? ಹೀಗಾಗಿ ಸರ್ಕಾರಿ ಶಾಲೆಗಳಿಗೆ ಬೋರ್ಡ್​ ಅತ್ಯಗತ್ಯವಾಗಿದೆ. ಆದ್ರೆ, ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬ್ಯ್ಲಾಕ್​ ಬೋರ್ಡ್​ ಇಲ್ಲದೇ ಕೊಠಡಿಯ ಬಾಗಿಲ ಮೇಲೆಯೇ ಬರೆಯಲಾಗುತ್ತಿದೆ. ಈ ಸರ್ಕಾರಿ ಶಾಲೆಗೆ ಇದೆಂಥ ದಯನೀಯ ಸ್ಥಿತಿ ಬಂದೊಗಿದೆ ನೋಡಿ.

ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕೊಠಡಿಯ ಬಾಗಿಲುಗಳು ಬ್ಲ್ಯಾಕ್​ ಬೋರ್ಡ್​ ಆಗಿ ಮಾರ್ಪಟ್ಟಿವೆ. ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳ ಈ ಕಡೆ ಗಮನ ಹರಿಸಬೇಕಾಗಿದೆ ಶಿಕ್ಷಕರು ಬಾಗಿಲ ಮೇಲೆ ಬರೆದು ಮಕ್ಕಳಿಗೆ ಪಾಠ ಕಲಿಸುವ ಸ್ಥಿತಿ ಬಂದಿದೆ. ಶಾಲೆಯಲ್ಲಿ 793 ವಿದ್ಯಾರ್ಥಿಗಳಿದ್ದು, ಹಳೆಯ ಕಟ್ಟಡದಲ್ಲಿ ಎಲ್ಲರಿಗೂ ಕೂತು ಪಾಠ ಕೇಳಲು ಸಾಕಾಗುವಷ್ಟು ತರಗತಿ ಕೊಠಡಿಗಳಿಲ್ಲ. ಹೀಗಾಗಿ ಶಿಕ್ಷಕರು ಈಗ ಕೊಠಡಿಗಳ ಹೊರಗೆ ತರಗತಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಬಾಗಿಲುಗಳನ್ನೇ ಬ್ಲ್ಯಾಕ್​ ಬೋರ್ಡ್ ಆಗಿ ಬಳಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಒಟ್ಟು 18 ಕೊಠಡಿಗಳ ಶಾಲಾ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಈ ಪೈಕಿ 10 ಕೊಠಡಿಗಳನ್ನು ಹಸ್ತಾಂತರಿಸಲಾಗಿದ್ದು, ಉಳಿದ ಕೊಠಡಿಗಳನ್ನು ಬಳಸಲು ಅನುಮತಿ ನೀಡಿಲ್ಲ. ಹೀಗಾಗಿ ಅವುಗಳನ್ನು ಬಳಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಲ್ಲದೆ, ಇನ್ನೂ ಕೆಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳನ್ನು ಸರಿಪಡಿಸಬೇಕಿದೆ ಎಂದು ಶಾಲೆ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲೆಯ ಈ ಸ್ಥಿತಿ ಬಗ್ಗೆ ಗ್ರಾಮದ ರಮೇಶ್ ಬಿ ಎನ್ನುವರು ಪ್ರತಿಕ್ರಿಯಿಸಿದ್ದು. ಸರಕಾರಿ ಶಾಲೆಯ ದುಸ್ಥಿತಿ ನೋಡಿದರೆ ನಾಚಿಕೆಯಾಗುತ್ತಿದೆ. ಬಾಗಿಲನ್ನು ಬ್ಲ್ಕಾಕ್ ಬೋರ್ಡ್​ ಆಗಿ ಬಳಸಿದ್ದು ಶಿಕ್ಷಕರ ತಪ್ಪು ಅಲ್ಲ. ಅವರು ಸಮಯ ವ್ಯರ್ಥ ಮಾಡುವ ಬದಲು ವಿದ್ಯಾರ್ಥಿಗಳಿಗೆ ಕಲಿಸಲು ಪ್ರಯತ್ನಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸರಿಯಾದ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಸುರಿದ ಮಳೆಯಿಂದ ಶಾಲಾ ಮೈದಾನ ನೀರಿನಿಂದ ತುಂಬಿ ಕೆರೆಯಂತಾಗಿತ್ತು. ಆದರೂ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

 

Share and Enjoy !

Shares