ಮಲೇಶಿಯಾ ದೇಶದಲ್ಲಿಯೂ ಗೆದ್ದು ಬೀಗಿದ ಭಾರತ ತಂಡ

Share and Enjoy !

Shares
Listen to this article

ಸಿರುಗುಪ್ಪ. : ಮಲೇಷಿಯಾದ ಕೌಲಾಲಂಪೂರ್ ದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಸಿಟ್ಟಿಂಗ್ ತ್ರೋಬಾಲ್ ನ ಸರಣಿ ಪಂದ್ಯದಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡ ಗೆದ್ದು ಬೀಗಿದೆ

ಬೇಸ್ಟ್ ಆಫ್ 5 ಮ್ಯಾಚ್ ನ ಕೊನೆಯಲ್ಲಿ ಕೇವಲ 3 ಅಂಕಗಳ ಅಂತರದಿಂದ ಮಲೇಷಿಯಾ ತಂಡ ಸೋತಿದ್ದು ಭಾರತ ತಂಡ ಒಟ್ಟು25 ಅಂಕದ ಮೂಲಕ ತನ್ನ ಎದುರಾಳಿಯನ್ನು ಮಣ್ಣು ಮುಕ್ಕಿಸಿದೆ.

 

 

ಈ ಪಂದ್ಯಗಳಲ್ಲಿ ಸಿರುಗುಪ್ಪ ನಗರದ ಕೆ ಬಸವರಾಜ್ ವಿಶೇಷ ಚೇತನರಾಗಿದ್ದರೂ ಸಹ ವಿದೇಶದಲ್ಲಿ ನಡೆದ ಈ ಪಂದ್ಯಾವಳಿಗಳಲ್ಲಿ ತನ್ನ ಅದ್ಭುತದ ಆಟದಿಂದಾಗಿ ಭಾರತ ದೇಶವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ ಇದರಿಂದಾಗಿ ತಾಲೂಕಿನ ಕ್ರೀಡಾ ಅಭಿಮಾನಿಗಳ ಸಂತಸ ಹೆಚ್ಚಾಗಿದ್ದು ಮಲೇಶಿಯಾ ದೇಶದಿಂದ ವಾಪಸ್ ಬರುವಿಕೆಯನ್ನು ಕಾಯುತ್ತಿದ್ದಾರೆ

Share and Enjoy !

Shares