ನಿಂಬೆ ಹಣ್ಣು ಮತ್ತು ಜೇನುತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಲಾಭಗಳು

Share and Enjoy !

Shares
Listen to this article

ಜೇನುತುಪ್ಪ ಮತ್ತು ನಿಂಬೆ ಎರಡೂ ಹಲವು ವಿಧದಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದರೆ, ನಿಂಬೆ ಆ್ಯಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ನಮ್ಮನ್ನು ಭಾದಿಸುವ ಹಲವು ರೀತಿಯ ಸೋಂಕುಗಳನ್ನು ತಡೆಗಟ್ಟಲು ಮತ್ತು ಸೋಂಕುಗಳ ಕಾಯಿಲೆಯನ್ನು ಗುಣಪಡಿಸಲು ಈ ಎರಡೂ ವಸ್ತುಗಳನ್ನು ಹಿಂದಿನಿಂದಲೂ ಮನೆಮದ್ದಾಗಿ ಬಳಸಲಾಗುತ್ತಿದೆ. ಇದಲ್ಲದೆ ಜೇನುತುಪ್ಪ ಮತ್ತು ನಿಂಬೆ ಚರ್ಮಕ್ಕೂ ಕೂಡ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇವೆರಡೂ ಚರ್ಮದ ಸೋಂಕನ್ನು ಕಡಿಮೆ ಮಾಡುವುದರ ಜೊತೆಗೆ ಪಿಗ್ಮೆಂಟೇಷನ್ ಕಡಿಮೆ ಮಾಡಲು ಸಹಕಾರಿ. ಇದಲ್ಲದೆ, ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಮುಖದಲ್ಲಿ ಕಂಡುಬರುವ ವಯಸ್ಸಾಗುವಿಕೆ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನಿಂಬೆ ಮತ್ತು ಜೇನುತುಪ್ಪ ಇವೆರಡನ್ನೂ ಒಟ್ಟಿಗೆ ಮುಖಕ್ಕೆ ಹಚ್ಚುವುದರಿಂದ ತ್ವಚೆಗೆ ಯಾವ ರೀತಿಯ ಲಾಭವಾಗುತ್ತದೆ.

ತ್ವಚೆಗೆ ನಿಂಬೆ ಮತ್ತು ಜೇನುತುಪ್ಪದ ಲಾಭಗಳು:

ಸನ್ಬರ್ನ್ ತಡೆಗಟ್ಟಲು ಸಹಕಾರಿ:

ಇತೀಚಿನ ದಿನಗಳಲ್ಲಿ ಸನ್ ಬರ್ನ್ ಸಮಸ್ಯೆ ಹೆಚ್ಚಾಗುತ್ತಿದೆ. ನಿಂಬೆ ಮತ್ತು ಜೇನುತುಪ್ಪ ಇವೆರಡೂ ಮುಖದ ಮೇಲೆ ಸನ್ಬರ್ನ್ ಸಮಸ್ಯೆಯಿಂದ ಉಂಟಾಗುವ ಸುಡುವ ಸಂವೇದನೆಯನ್ನು ಶಮನಗೊಳಿಸುತ್ತದೆ. ಮತ್ತು ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದನ್ನು ಕಡಿಮೆ ಮಾಡುತ್ತದೆ. ಹೀಗೆ ನಿಂಬೆ ಮತ್ತು ಜೇನುತುಪ್ಪದ ಪೇಸ್ಟ್ ಸೂರ್ಯನ ಬೆಳಕಿನಿಂದ ಉಂಟಾಗುವ ಸನ್ಬರ್ನ್ ನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಿಂಬೆಯಲಿನ್ಲ ವಿಟಮಿನ್ ಸಿ ಅಂಶ ಸನ್ಬರ್ನ್ ನ್ನು ತಡೆಯುತ್ತದೆ ಮತ್ತು ಜೇನುತುಪ್ಪವು ಚರ್ಮವನ್ನು ತಂಪಾಗಿರಿಸುತ್ತದೆ.

ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಸಹಕಾರಿ:

ಹೆಚ್ಚಿನವರಿಗೆ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತಿರುತ್ತದೆ. ಇದು ಅತಿಯಾದರೆ ಸೌಂದರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡಲು ನೀವು ನಿಂಬೆ ಮತ್ತು ಜೇನುತುಪ್ಪದ ಪೇಸ್ಟ್ ನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಬಹುದು. ಇದು ಕಪ್ಪು ವರ್ತುಲಗಳನ್ನು ಕಡಿಮೆ ಮಾಡುವುದರ ಜೊತೆಗೆ ಮುಖವನ್ನು ತೇವಾಂಶಭರಿತವಾಗಿ ಇರಿಸುತ್ತದೆ.

ಪಿಗ್ಮೆಂಟೇಶನ್ ನ್ನು ತೊಡೆದುಹಾಕಲು ಸಹಕಾರಿ ನಿಂಬೆ ಮತ್ತು ಜೇನುತುಪ್ಪ:

ಪಿಗ್ಮೆಂಟೇಶನ್ ನ್ನು ಕಡಿಮೆ ಮಾಡಲು ಜೇನುತುಪ್ಪ ಮತ್ತು ನಿಂಬೆ ಎರಡೂ ಸಹಕಾರಿ. ನಿಂಬೆ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಚರ್ಮದ ಬಣ್ಣವನ್ನು ನ್ನು ಸುಧಾರಿಸುತ್ತದೆ.

ಒಣ ಚರ್ಮದ ಚಿಕಿತ್ಸೆಗಾಗಿ ನಿಂಬೆ ಮತ್ತು ಜೇನುತುಪ್ಪ:

ಒಣ ತ್ವಚೆಯ ಸಮಸ್ಯೆಗೆ ಜೇನುತುಪ್ಪ ಮತ್ತು ನಿಂಬೆ ಬಳಕೆ ಪ್ರಯೋಜನಕಾರಿ. ನಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕ ಗುಣ ಚರ್ಮದಲ್ಲಿ ಕಾಲಜಿನ್ ಅಂಶವನ್ನು ಉತ್ತೇಜಿಸುತ್ತದೆ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ. ಇವೆರಡರ ಪೇಸ್ಟ್ ನ್ನು ಮುಖಕ್ಕೆ ಹಚ್ಚುವುರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಕೂಡಾ ನಿವಾರಣೆ ಮಾಡಬಹುದು.

ಮೊಡವೆಗಳ ನಿವಾರಣೆಗೆ ನಿಂಬೆ ಮತ್ತು ಜೇನುತುಪ್ಪ:

ಮೊಡವೆಗಳಿಗೆ ಚಿಕಿತ್ಸೆ ನೀಡಲು ಜೇನುತುಪ್ಪ ಮತ್ತು ನಿಂಬೆಯ ಬಳಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಈ ಎರಡೂ ವಸ್ತುಗಳು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಗಳಿಂದ ಸಮೃದ್ಧವಾಗಿದೆ. ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಮೊಡವೆಗಳ ಕಲೆ ಗುರುತುಗಳನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ.

 

Share and Enjoy !

Shares