ಕಂಪ್ಲಿ: ಕಂಪ್ಲಿ ಸಮೀಪದ , ಹಳೆ ನೆಲ್ಲೂಡಿ ಗ್ರಾಮದಲ್ಲಿ ಶ್ರೀ ದುರುಗಮ್ಮ ದೇವಸ್ಥಾನದ ಹತ್ತಿರ ಬಾಲಕ ಒಡೆದ ತೆಂಗಿನ ಕಾಯಿಯಲ್ಲಿ ಮಲ್ಲಿಗೆ ಹೂಗಳು ಕಂಡುಬಂದ, ಆಶ್ಚರ್ಯ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಎಂ.ಪಿ. ಹೊನ್ನುರ್ ಸಾಬ್ ನವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೊಹರಂ 9ನೇ ದಿನದ ಅಂಗವಾಗಿ ಸತತ 5ನೇ ವರ್ಷದ ಕೌಡೆ ಪೀರಲದೇವರ ಹಬ್ಬವನ್ನು ಮಕ್ಕಳೆಲ್ಲ ಸೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದರು, ಈ ಸಂದರ್ಭದಲ್ಲಿ ಗ್ರಾಮ ದೇವತೆಯಾದ ಶ್ರೀ ಪೇಟೆ ದುರುಗಮ್ಮ ದೇವಸ್ಥಾನ ಪಾದಗಟ್ಟಿಗೆ, ತೆಂಗಿನಕಾಯಿಯನ್ನು ಒಡೆದೆ ಬಾಲಕ ತೆಂಗಿನ ಕಾಯಿಯ ಹಾಲಿನ ಜತೆ ಮಲ್ಲಿಗೆ ಹೂಗಳು ಸಹ ಕಾಣಿಸಿಕೊಂಡ ಪವಾಡ ಸದೃಶಕ್ಕೆ ಸಾರ್ವಜನಿಕರು ಆಶ್ಚರ್ಯಗೊಂಡರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ರಾಜಾಸಾಬ್, ಅಂಗಡಿ ರಾಜಾಸಾಬ್, ಗ್ರಾ.ಪಂ. ಸದಸ್ಯರ ರಾಜಾಸಾಬ್, ದೇವರಹಿಡಿಯುವ ಸಿದ್ದಪ್ಪ ಸೇರಿದಂತೆ ಅನೇಕರು ಇದ್ದರು.