ಆಕ್ರಮ ಮರಳು ಸಾಗಣಿಕೆದಾರರಿಂದ ಭೂವಿಜ್ಞಾನಗಳ ಇಲಾಖೆಯ ಅಧಿಕಾರಿಗಳ ಮೇಲೆ ಮಾರಾಣಾಂತಿಕ ಹಲ್ಲೆ

Share and Enjoy !

Shares
Listen to this article

ರಾಯಚೂರು ಜಿಲ್ಲೆ
ಮಾನ್ವಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನದಿ ಪಾತ್ರದಲ್ಲಿ ಆಕ್ರಮ ಮರಳು ಸಾಗಣಿಕೆಯನ್ನು ತಡೆಯಲು ಆಗಮಿಸಿದ ಗಣಿ ಮತ್ತು ಭೂವಿಜ್ಞಾನಗಳ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರಮ ಮರಳು ಸಾಗಣಿಕೆದಾರರು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರಿಂದ ಖನಿಜ ರಕ್ಷಣ ಪಡೆಯ ಮಾಜಿ ಯೋಧ ನೀಲಪ್ಪ ಎನ್ನುವವರ ತಲೆಗೆ ತೀವ್ರವಾದ ರಕ್ತ ಗಾಯಗಾಳಗಿದ್ದು ಮಾನ್ವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ೬ ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂದಿಸಿದ್ದು ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪಿ.ಐ.ವೀರಭದ್ರಯ್ಯ ಹಿರೇಮಠ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಬುಧುವಾರ ರಾಯಚೂರು ಗಣಿ ಮತ್ತು ಭೂವಿಜ್ಞಾನಗಳ ಇಲಾಖೆಯ ಅಧಿಕಾರಿ ಭೂವಿಜ್ಞಾನಿ ಮಂಜುನಾಥ ಜಿ. ತಮ್ಮ ಖನಿಜ ರಕ್ಷಣೆ ಪಡೆಯ ಮಾಜಿ ಯೋಧರಾದ ನೀಲಪ್ಪ, ಮಲ್ಲಿಕಾರ್ಜುನ,ಸೋಮಶೇಖರ ರವರೊಂದಿಗೆ ತಾಲೂಕಿನ ತುಂಗಭದ್ರ ನದಿಯಲ್ಲಿ ಆಕ್ರಮವಾಗಿ ಮರಳನ್ನು ವಾಹನಗಳಲ್ಲಿ ತುಂಬಿಕೊAಡು ಮರಳನ್ನು ಸಾಗಾಣಿಕೆ ಮಾಡುವಂತಹ ವಾಹನಗಳನ್ನು ಹಾಗೂ ಆಕ್ರಮವಾಗಿ ನದಿಯಿಂದ ಮರಳನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಚೀಕಲಪರ್ವಿ ಗ್ರಾಮದ ನದಿ ತೀರವನ್ನು ಪರಿಶೀಲಿಸಿ ನಂತರ ಯಡಿವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದಲ್ಲಿನ ಸ.ನಂ,೩೫೬ರಲ್ಲಿ ಆಕ್ರಮವಾಗಿ ಮರಳನ್ನು ಸಂಗ್ರಹಿಸಿ ಟಿಪ್ಪರ್‌ಗೆ ಜೆಸಿಬಿ ಮೂಲಕ ತುಂಬುತ್ತಿರುವುದನ್ನು ಕಂಡು ಟಿಪರ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದು ದೂರು ನೀಡಲು ಖನಿಜ ರಕ್ಷಣೆ ಪಡೆಯ ಮಾಜಿ ಯೋಧರಾದ ನೀಲಪ್ಪ, ಮಲ್ಲಿಕಾರ್ಜುನ,ಸೋಮಶೇಖರ ರವರೊಂದಿಗೆ ಮಾನ್ವಿ ಪಟ್ಟಣಕ್ಕೆ ಬರುವಾಗ ದಾರಿ ಮಾಧ್ಯದಲ್ಲಿ ಚೀಕಲಪರ್ವಿ ರಸ್ತೆಯಲ್ಲಿ ಬರುವ ಬುರಾನಪೂರ ಗ್ರಾಮದ ಹತ್ತಿರ ಆರೋಪಿಗಳಾದ ಶಿವಕುಮಾರ,ವೆಂಕಟೇಶ ಗೋವಿನದೊಡ್ಡಿ,ಜೆಸಿಬಿ ಅಪರೇಟರ್ ಶ್ರೀಕಾಂತ್ ವಡ್ಡರ್, ಕೋಳಿಕ್ಯಾಂಪ್, ಗಿರಿ ಕರಡಿಗುಡ್ಡ, ರಂಗನಾಥ ಯರಗುಡ್ಡ,ಶಿವರಾಜ ಮಾನ್ವಿ ಹಾಗೂ ಇನ್ನಿತರರು ದಾರಿಯಲ್ಲಿ ಟಿಪರ್ ಹಾಗೂ ಜೆಸಿಬಿಗಳನ್ನು ಸುತ್ತುವರಿದ್ದು ತಡೆದು ವಾಹನದಲ್ಲಿದ ಖನಿಜ ರಕ್ಷಣೆ ಪಡೆಯ ಮಾಜಿ ಯೋಧರಾದ ನೀಲಪ್ಪ ರವರ ಮೇಲೆ ಜಾಕ್ ರಾಡ್, ಕಟ್ಟಿಗೆ,ಕಲ್ಲುಗಳಿಂದ ತೀವ್ರವಾಗಿ ಹಲ್ಲೆ ನಡೆಸಿದರಿಂದ ತಲೆಗೆ ತೀವ್ರ ರಕ್ತಸ್ರಾವ ಗಾಯಗಳಾಗಿದ್ದು ಗಾಯಳು ನೀಲಪ್ಪರನ್ನು ಮಾನ್ವಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ರಾಯಚೂರಿನ ರಿಮ್ಸ್ ಹಾಗೂ ಇತರ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಯಚೂರು ಗಣಿ ಮತ್ತು ಭೂವಿಜ್ಞಾನಗಳ ಇಲಾಖೆಯ ಅಧಿಕಾರಿ ಭೂವಿಜ್ಞಾನಿ ಮಂಜುನಾಥ ಜಿ.ರವರು ನೀಡಿದ ದೂರಿನ ಆನ್ವಯ ೬ಜನರ ಮೇಲೆ ೧೪೯ ಸಹಿತ ಐ.ಪಿ.ಸಿ. ವಿವಿಧ ಕಾಲಂಗಳನ್ವಯ ಪ್ರಕಾರಣ ದಾಖಲಿಸಿಕೊಂಡು ರಂಗನಾಥ ಯರಗುಡ್ಡ,ಶಿವರಾಜ ಮಾನ್ವಿ ರವರನ್ನು ದಾಸ್ತಗಿರಿ ಮಾಡಿದ್ದು ಇತರ ಅರೋಪಿಗಳ ಪತ್ತೆಗಾಗಿ ಕಾರ್ಯಚಾರಣೆ ನಡೆಸಲಾಗಿದ್ದು ಶಿಘ್ರವೇ ಇತರ ಆರೋಪಿಗಳನ್ನು ದಾಸ್ತಗಿರಿ ಮಾಡಲಾಗುವುದು ಎಂದು ತಿಳಿಸಿದರು.

Share and Enjoy !

Shares