ಆಮ್ ಆದ್ಮಿ ಪಕ್ಷದ ಕಾರ್ಯಕಾರಿಣಿ ಸಭೆ

Share and Enjoy !

Shares
Listen to this article

ಬಳ್ಳಾರಿ: ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಭೆ ಹಾಗೂ ನೂತನ ಪದಾಧಿಕಾರಿಗಳ ಕಾರ್ಯಕರ್ತರ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮವು ದಿನಾಂಕ 13-8-2023 ರವಿವಾರ ಇರುತ್ತದೆ, ಎಂದು  ಆಮ್ ಆದ್ಮಿ ಪಕ್ಷದ ಜಿಲ್ಲಾ ಉಸ್ತುವರಿಗಳಾದ ರುದ್ರಯ್ಯ ನವಲಿ ಹಿರೇಮಠ್ ಅವರ ಆದೇಶದ ಮೇರೆಗೆ ಪಕ್ಷದ  ನಗರ ಘಟಕದ ಅಧ್ಯಕ್ಷ ಜೆ.ವಿ ಮಂಜುನಾಥ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ ಬಳ್ಳಾರಿ ನಗರದ ಎಸ್‌ಪಿ ಸರ್ಕಲ್ ಬಳಿ ಶಾಸ್ತ್ರಿ ನಗರ ಎರಡನೇ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಜಿಲ್ಲಾ  ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ಪ್ರಭಾರಿಗಳು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಆದಂತ ಅರ್ಜುನ್ ಹಲಗೆ ಗೌಡರು, ಹಾಗೂ ರಾಜ್ಯ ಉಪಾಧ್ಯಕ್ಷರು ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿಗಳಾದಂತ ರುದ್ರಯ್ಯ ನವಲಿ ಹಿರೇಮಠ್ ರವರು ನೇತೃತ್ವ ವಹಿಸಲಿದ್ದಾರೆ, ಆದುದರಿಂದ ಜಿಲ್ಲೆಯ ಎಲ್ಲಾ ಪರಾಜಿತ ಶಾಸಕ ಸ್ಥಾನದ ಅಭ್ಯರ್ಥಿಗಳು ಹಾಗೂ ಸಕ್ರಿಯ ಕಾರ್ಯಕರ್ತರುಗಳು ಪಕ್ಷದ ಅಭಿಮಾನಿಗಳು ದಯವಿಟ್ಟು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಿಳಿಸಿದ್ದಾರೆ

Share and Enjoy !

Shares