ಸಿರುಗುಪ್ಪ: (ಸೆ.06)ಆಂಧ್ರಪ್ರದೇಶದ ಬೇತಂಚರ್ಲ ದಿಂದ ಕಡಪಾಗೆ ಕಲ್ಲುಗಳನ್ನು ತುಂಬಿಕೊಂಡು ಸಿರುಗುಪ್ಪ ಮಾರ್ಗವಾಗಿ ಬಾದಾಮಿಗೆ ತೆರುಳುತ್ತಿದ್ದ ಭಾರಿ ಗಾತ್ರದ ಲಾರಿ ಬುಧವಾರ ಬೆಳಗಿನ ಜಾವ ರಸ್ತೆ ಪಕ್ಕದ ಮರಕ್ಕೆ ಲಾರಿ ಚಾಲಕ ಬಾಲ ಮದ್ದಯ್ಯನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಎ.ಪಿ. 21, ಟಿ.ಇ. 6427 ಲಾರಿಯ ಮುಂಭಾಗ ನುಜ್ಜು-ಗುಜ್ಜಾಗಿದ್ದು ಈ ವೇಳೆ ಲಾರಿ ಪಕ್ಕದ ಹೊಲದಲ್ಲಿ ಉರುಳಿ ಬಿದ್ದಿದೆ ಈ ವೇಳೆ ಲಾರಿ ಚಾಲಕನು ವಾಹನದಲ್ಲಿಯೇ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ವೇಳೆ ಅಗ್ನಿಶಾಮಕ ದಳದವರಿಗೆ ವಿಷಯ ಗೊತ್ತಾಗಿ ಠಾಣಾಧಿಕಾರಿ ಆರ್.ಎಲ್. ಪೂಜಾರಿ ಹೆಚ್.ಆರ್ ಶೆಕ್ಷಾವಲಿ ಹಾಗೂ ಸಿಬ್ಬಂದಿ ಗಳಾದ ವೀರೇಶ, ಸೂಗೂರಯ್ಯ, ರಾಜಭಕ್ಷಿ, ಮಂಜುನಾಥ, ಸಾಗರ್ ಇವರಗಳು ಸೇರಿ ಲಾರಿ ಚಾಲಕನನ್ನು ಲಾರಿಯಿಂದ ಹೊರತೆಗೆದು ರಕ್ಷಿಸಿದ್ದಾರೆ.
ಕಾಲಿಗೆ ತೀವ್ರ ಪೆಟ್ಟು ಮತ್ತು ಇನ್ನಿತರ ಕಡೆ ಗಾಯಗಳಾಗಿದ್ದು ಚಾಲಕನನ್ನು 108 ಅಂಬುಲೆನ್ಸ್ ಮೂಲಕ ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.