ಕೊಟ್ಟೂರು : ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಚಿರಬಿ ಮೂಗಬಸವೇಶ್ವರ ರಥೋತ್ಸವ ಹಾಗೂ ಜಾತ್ರೆಯನ್ನು ನಿಷೇಧ ಗೊಳಿಸಿ ವಿಜಯನಗರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 17 ವರ್ಷಗಳ ಬಳಿಕ ಜಾತ್ರೆ ನಡೆಯಬಹುದು ಎಂದು ಭಕ್ತಾದಿಗಳು ಉತ್ಸಾಹ ಹಾಗೂ ಅಭಿಲಾಷೆ ಹೊಂದಿದ್ದರು ಹಾಗೂ ಕಳೆದ ವಾರದಂದು ಚಿರಬಿ ಮತ್ತು ರಾಂಪುರ ಗ್ರಾಮಗಳ ಭಕ್ತಾದಿಗಳ ಮಧ್ಯ ಸಮನ್ವಯತೆ ಸಾಧಿಸಲು ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಸಹ ಏರ್ಪಡಿಸಲಾಗಿತ್ತು. ಆದರೆ ಸಭೆಯಲ್ಲಿ ಭಕ್ತಾದಿಗಳ ನಡುವೆ ಒಮ್ಮತ ಮೂಡದಿರುವುದು ಪೋಲಿಸ್ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಮುಖ್ಯವಾಗಿ ವರದಿಯ ಉಲ್ಲೇಖದಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಾರಿಯೂ ಜಾತ್ರೆಯನ್ನು ಹಾಗೂ ಸಂಬಂಧಿಸಿದ ಉತ್ಸವಗಳಿಗೆ ಮತ್ತು ಕುಸ್ತಿ ಪಂದ್ಯಾಟಗಳಿಗೆ ನಿಷೇಧ ಹೇರಿದ್ದಾರೆ. ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಯಾವುದೇ ಅಡ್ಡಿಯಾಗದಿರಲಿ ಎಂದು ದೇವರಿಗೆ ಹಣ್ಣು ಕಾಯಿ ಸೇವೆಗಳನ್ನು ಮಾಡಿಸಲು ಯಾವುದೇ ನಿರ್ಬಂಧ ಏರಿರುವುದಿಲ್ಲ ಎಂದು ಈ ಮೂಲಕ ಆದೇಶದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.