ಸಿಂಧನೂರು: ಅತಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮವಾಗಿ ಕಾರು ಪಲ್ಟಿ,ಅದೃಷ್ಟವಶ ರಾಗಲಪರ್ವಿ ಸರ್ಕಾರಿ ಆಸ್ಪತ್ರೆಯ ವೈದ್ಯ ಹಾಗೂ ಅವರ ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ..
ಹೌದು ತಾಲೂಕಿನ ರಾಗಲಪರ್ವಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಹಾಗೂ ಅವರ ಸಿಬ್ಬಂದಿ ಕಾರ್ ನಂ.KA 36.N.2227. ಸಿಂಧನೂರು ಮಾರ್ಗವಾಗಿ ರಾಗಲಪರ್ವಿ ಗೆ ತೆರಳುವ ಸಮಯದಲ್ಲಿ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಹಿನ್ನೆಲೆ ಮಣಿಕೇರಿ ಕ್ಯಾಂಪ್ ಗಾಳಿ ದುರ್ಗಮ್ಮನ ದೇವಸ್ಥಾನದ ಹತ್ತಿರ ಕಾರು ಪಲ್ಟಿಯಾಗಿ ಗದ್ದೆಯಲ್ಲಿ ಬಿದ್ದಿದ್ದು. ಸಾರ್ವಜನಿಕರು ನೋಡುತ್ತಿದ್ದಂತೆ ಕಾರಿನ ಹತ್ತಿರ ಹೋಗಿ ಕಾರಿನಿಂದ ವೈದ್ಯರನ್ನು ಹಾಗೂ ಅವರ ಸಿಬ್ಬಂದಿಯನ್ನು ಕಾರಿನಿಂದ ಹೊರ ತೆಗೆದರು.
ನಂತರ 112 ಗೆ ಕರೆ ಮಾಡಿ ಆಂಬುಲೆನ್ಸ್ ಕರೆಸಿದರು. ಆಂಬುಲೆನ್ಸ್ ಬರುವ ಮುಂಚೆ ವೈದ್ಯರ ಸಂಬಂಧಿಕರು ಆಗಮಿಸಿ ಮತ್ತೊಂದು ಕಾರಿನಲ್ಲಿ ಸಿಂಧನೂರು ನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋದರು. ಮಧ್ಯಪಾನ ಸೇವಿಸಿ ಅತಿ ವೇಗದಿಂದ ಚಲಾಯಿಸಿದ ಪರಿಣಾಮ ಕಾರು ಪಲ್ಟಿಯಾಗಿದೆ ಎಂದು ಸಾರ್ವಜನಿಕರು ಸಾರ್ವಜನಿಕರು ಅನುಮಾನ ಮೂಡಿದೆ.