ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಶ್ರೀ ಹಾನಗಲ್ ಕುಮಾರಸ್ವಾಮಿ 156ನೇ ಜಯಂತೋತ್ಸವ

Share and Enjoy !

Shares
Listen to this article

ಬಳ್ಳಾರಿ : ಸೆಪ್ಟಂಬರ್ 10ನೇ ತಾರೀಕು ಇದೇ ಭಾನುವಾರದಂದು ನಗರದ ಶೆಟ್ರ ಗುರುಶಾಂತಪ್ಪ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬೆಂಗಳೂರು ಮತ್ತು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಘಟಕಗಳವತಿಯಿಂದ ವೀರಶೈವ ಲಿಂಗಾಯತ ಜನ ಜಾಗೃತಿ ಸಮಾವೇಶ ಮತ್ತು ಪರಮಪೂಜ್ಯ ಹಾನಕಲ್ ಕುಮಾರೇಶ್ವರಸ್ವಾಮಿಗಳ 156ನೇ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.

ಅವರು ಇಂದು ನಗರದ ಬಸವಭವನದಲ್ಲಿ ಜಯಂತಿಯ ಅಂಗವಾಗಿ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಮಹಾಸಭಾಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮತ್ತು 96 ವರ್ಷಗಳ ಸುಧೀರ್ಘ ಅವದಿಯ ಸಮಾಜಸೇವೆಯನ್ನು ಪರಿಗಣಿಸಿ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರಾದ ಡಾ.ಎನ್ ತಿಪ್ಪಣ್ಣನವರ ಜೀವಮಾನ ಸಾಧನೆಗಾಗಿ ಗೌರವಿಸಿ ಸನ್ಮಾನಿಸಲಾಗುವುದೆಂದರು. ಅಭಿನಂದನಾ ಸಮಾರಂಭದ ಸಾನಿದ್ಯವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದ ಮಹಾಸ್ವಾಮಿಗಳು, ಉಜ್ಜಯಿನಿ ಪೀಟ ಇವರು ವಹಿಸುವರು ಮತ್ತು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂರಪ್ಪ ಅಧ್ಯಕ್ಷತೆಯನ್ನು ವಹಿಸುವರು. ಉದ್ಘಾಟನೆಯನ್ನು ಜಗಧೀಶ್ ಶೆಟ್ಟರ ನಿರ್ವಹಿಸುವರು, ಸ್ಮರಣ ಸಂಚಿಕೆಯನ್ನು ಎಂ.ಬಿ ಪಾಟೀಲ್, ಶರಣಬಸಪ್ಪ ದರ್ಶನಾಪುರ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸುವರು. ಈಶ್ವರ್ ಖಂಡ್ರೆಯವರಿಗೆ ಗೌರವ ಸಮರ್ಪಣೆ ನಡೆಸಲಾಗುವುದು. ಮುಖ್ಯ ಅತಿಥಿಗಳಾದಿ ಶಂಕರಬಿದರಿ, ಎ.ಎಸ್ ವೀರಣ್ಣ, ಅಣಬೇರು ರಾಜಣ್ಣ, ವೆಂಕಟರೆಡ್ಡಿ ಮುದ್ನಾಳ್, ಟಿ.ಪಿ ಕುಂಜುಮೋನ್, ಎಚ್.ಎಂ ರೇಣಕಾ ಪ್ರಸನ್ನ, ಎಚ್.ಎಂ ಚಂದ್ರಶೇಖರಪ್ಪ, ಎಂ ಎನ್ ಶಶಿಧರ್, ವರುಣಾ ಮಹೇಶ್ ಮತ್ತು ಸಿರಿಗೇರಿ ಪನ್ನರಾಜ್ ಭಾಗವಹಿಸುವರು. ವೈ.ಎಂ ಸತೀಶ್ ಏಚರೆಡ್ಡಿ, ಬಿ.ಆರ್ ಪಾಟೀಲ್, ಹಂಪನಗೌಡ ಬಾದರ್ಲಿ, ಬ ಜಿ ಪಾಟೀಲ್, ಶೈಲೇಂದ್ರ ಬೆಲ್ದಾಳೆ, ಸಿದ್ದಲಿಂಗಪಪ್ ನಾಗಭೂಷನ ಪಾಟೀಲ್ ಇವರನ್ನು ಗೌರವಿಸಿ ಅಭಿನಂದಿಸಲಾಗುವುದು.

ಹತ್ತನೆ ತರಗತಿ ಮತ್ತು ಪಿ.ಯು.ಸಿ ಯಲ್ಲಿ ಶೇಕಡ 90 ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಷ್ಕಾರ ಸಂಜೆ 3 ರಿಂದ 5 ಗಂಟೆಯವರೆಗೆ ಜರುಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ|| ಬ್ರ|| ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಿ ಸಾವಿರದೇವರ ಮಠ ಎಮ್ಮಿಗನೂರು ಮತ್ತು ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಕಲ್ಯಾಣ ಮಹಾಸ್ವಾಮಿಗಳು ಕಮ್ಮರಚೇಡು ಮಠ ಬಳ್ಳಾರಿ ಇವರು ವಹಿಸುವರು ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸುವರು, ನಗರ ಶಾಸಕ ಭರತ್ ರೆಡ್ಡಿ ಅಧ್ಯಕ್ಷತೆಯನ್ನು ವಹಿಸುವರು. ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸುವರು. ಮುಖ್ಯ ಅತಿಥಿಗಳಾಗಿ ಮಹಾಸಭಾದ ವಿವಿಧ ಪದಾಧಿಕಾರಿಗಳು, ಮಾಜಿ ಶಾಸಕರು ಸಚಿವರು ಉದ್ಯಮಿಗಳು ಭಾಗವಹಿಸುವರು. ಮತ್ತು ಎ.ವೈ ಪಾಟೀಲ್, ಬಸವರಾಜ ರಾಯರೆಡ್ಡಿ, ಶಶೀಲ್ ಜಿ ನಮೋಸಿ, ಶಿವರಾಜ್ ಪಾಟೀಲ್, ಶರಣಗೌಡ ಪಾಟೀಲ್ ಬಯ್ಯಾಪುರ, ಭೀಮರಾವ್ ಪಾಟೀಲ್ ಮತ್ತು ಎಂ.ಪಿ ಲತಾ ಮಲ್ಲಿಕಾರ್ಜುನ ಇವರನ್ನು ಅಭಿನಂದಿಸಲಾಗುವುದು.

ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಮಾರಶ್ರಿ ಪ್ರಶಸ್ತಿಯನ್ನು ಲಿಂಗೈಕ್ಯ ಜಗದ್ಗುರು ಸಂಗನಬಸವ ಮಹಾಸ್ವಾಮಿಗಲು ಮರಣೋತ್ತರವಾರಿ, ಶರಣ ಸಕ್ಕರೆ ಕರಡೀಶ ಪ್ರಶಸ್ತಿಯನ್ನು ಭೀಮಣ್ಣ ಖಂಡ್ರೆ, ಅಲ್ಲೀಪುರ ಮಹಾದೇವತಾತ ಪ್ರಶಸ್ತಿಯನ್ನು ಡಾ ಶಾಮನೂರು ಶಿಷಶಂಕರಪ್ಪ, ಬಸವಶ್ರೀ ಪ್ರಶಸ್ತಿಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಸಿದ್ದಲಿಂಗೇಶ್ವರ ಭಗವತ್ತಾದರ ಪ್ರಶಸ್ತಿಯನ್ನು ಪಂಪಾಪತಿ ಶಾಸ್ತ್ರಿಗಳು ಬಳ್ಳಾರಿ ಇವರಿಗೆ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಶ್ರೀ ಜಗದ್ಗರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ಸಾನಿದ್ಯವನ್ನು ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸುವರು. ಬಸವರಾಜ್ ಹೊರಟ್ಟಿ ಉದ್ಘಾಟಿಸುವರು, ಅಲ್ಲಂ ವೀರಭದ್ರಪ್ಪ ಅಧ್ಯಕ್ಷತೆವಹಿಸುವರು. ಎಸ್.ಎಸ್ ಮಲ್ಲಿಕಾರ್ಜುನ, ಬಿ ನಾಗೇಂದ್ರ ಸಚಿವರು, ಶಿವಾನಂದ ಎಸ್ ಪಾಟಿಲ್ , ಶಾಸಕ ನಾರಾ ಭರತ್ ರೆಡ್ಡಿ, ಚಾನಾಲ್ ಶೇಖರ್ ಪ್ರಶಸ್ತಿ ಪ್ರಧಾನ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರಭಾಕರ್ ಕೋರೆ, ವಿನಯ್ ಕುಲಕರ್ಣಿ, ಬಾಬುರಾವ್ ತುಂಬಾ, ಮಸೀದಿಪುರ ಸಿದ್ದರಾಮನಗೌಡ, ಕೋರಿ ವಿರೂಪಾಕ್ಷಪ್ಪ, ನಟರಾಜ್ ಸಾಗರನಹಳ್ಳಿ, ಶಿವನಾಥ ಪಾಟೀಲ್, ವರುಣಾ ಮಹೇಶ್, ಬಸವರಾಜ್ ಸಾಹುಕಾರ್, ಚನ್ನರೆಡ್ಡಿ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಚಂದ್ರಶೇಖರ್ ಪಾಟೀಲ್ , ಶರಣು ಸಲಗಾರ, ಶರಣಗೌಡ ಕಂದಕೂರು ಭಾಗವಹಿಸುವವರು.

ಕಾರ್ಯಕ್ರಮದ ಕೊನೆಗೆ ತುಂಬೆ ಕಲಾವಿದರು, ತುಮಕರು ಇವರಿಂದ ಮಹಾಸಭಾ, ನಿರ್ಮಿಸಿರುವ ಶರುಣು ಶರಾರ್ಥಿ ನಾಟಕವನ್ನು ಪ್ರಸ್ತುತಪಡಿಸುವರು, ಜೀ ಕನ್ನಡ ವಾಹಿನಿ ಕಲಾವಿದರಿಂದ ರಾತ್ರಿ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗುವವು ಎಂದು ಚಾನಾಳ್ ಶೇಖರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಂಚಾಕ್ಷರಿ, ಆನೆ ಗಂಗಣ್ಣ, ರೇಣುಕಾ ಪ್ರಸನ್ನ ಸೇರಿದಂತೆ ಮಹಾಸಭಾ ಪದಾಧಿಕಾರಿಗಳಿದ್ದರು.

ಅಂದು ಮುಂಜಾನೆ ಅಲ್ಲಂ ಸುಮಂಗಳಮ್ಮ ಕಾಲೇಜಿನಿಂದ ಶೆಟ್ರ ಗುರುಶಾಂತಪ್ಪ ಕಾಲೇಜಿನ ಆವರಣದ ವೇದಿಕೆಯವರೆಗೆ ಶ್ರೀ ಹಾನಗಲ್ ಕುಮಾರೇಶ್ವರಸ್ವಾಮಿಯ ಭಾವಚಿತ್ರವನ್ನು ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಗುವುದು

 

Share and Enjoy !

Shares