*ಶ್ರೀ ಕೃಷ್ಣನ ಲೀಲೆ ಅಪಾರ ಅನನ್ಯ*

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ಕುರುಗೋಡು:ಧರ್ಮ ವಿನಾಶದ ಅಂಚಿಗೆ ಬಂದು ಅಧರ್ಮ ತಾಂಡವವಾಡುತ್ತಿರುವ ಸಂದರ್ಭಗಳಲ್ಲಿ ಜಗತ್ ರಕ್ಷಕನಾಗಿ ಧರ್ಮವನ್ನು ಕಾಪಾಡಲು, ಮಹಾ ವಿಷ್ಣು ಅವತರಿಸಿ ಬರುತ್ತಾನೆ ಹೀಗೆ ವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೂ ಒಂದಾಗಿದೆ ಎಂದುಸಸ್ಯ ಶಾಮಲ ಆಂಗ್ಲ ಮಾಧ್ಯಮ  ಶಾಲೆಯ ಕಾರ್ಯದರ್ಶಿ ಉಮೇಶ್ ಗೌಡ  ಅಭಿಪ್ರಾಯ ಪಟ್ಟರು.ಅವರು ಪಟ್ಟಣದ ಬಳ್ಳಾರಿ  ರಸ್ತೆಯಲ್ಲಿರುವ ಸಸ್ಯ ಶಾಮಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ  ಕೃಷ್ಣಾಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಛದ್ಮವೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೃಷ್ಣನ ಲೀಲೆ ಅಪಾರ ಅನನ್ಯ. ಶಾಲೆಯಲ್ಲಿ ಅನೇಕ ಪುಟ್ಟ ಪುಟ್ಟ ಮಕ್ಕಳು

ರಾಧಾಕೃಷ್ಣ ವೇಷಧಾರಿಯಾಗಿ  ತುಂಟಾಟ ಮಾಡುತ್ತಿರುವ ದೃಶ್ಯವನ್ನು ನೋಡಲು  ಎರಡು ಕಣ್ಣು ಸಾಲವು ಎಂದರು.

ನಂತರ  ಮುಖ್ಯಶಿಕ್ಷಕಿ ಲಲಿತ ಕುಮಾರಿ ಮಾತನಾಡಿ ಮಕ್ಕಳಲ್ಲಿ ಸರ್ವಧರ್ಮ ಸಮನ್ವಯತೆಯ ಭಾವನೆ ಮೂಡಿಸಲು ಹಲವು ಹಬ್ಬಗಳನ್ನು ಆಚರಿಸುತ್ತೇವೆ ಇಂದು ಮಹಾಮಹಿಮ ಶ್ರೀ ಕೃಷ್ಣನ ಜನ್ಮಾಷ್ಟಮಿ ಆಚರಿಸಿದ್ದು

ಮಕ್ಕಳು  ಹಾಗೂ ಪೋಷಕರು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಮೊಸರು ಗಡಿಗೆ ಒಡೆಯುವುದು ಸೇರಿದಂತೆ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಸುಮಾರು 30 ಮಕ್ಕಳು  ರಾಧಾಕೃಷ್ಣ ವೇಷ ಹಾಕಿದ್ದರು.ಪೋಷಕರು ತಮ್ಮ  ಮಕ್ಕಳಿಗೆ ರಾಧಾಕೃಷ್ಣನ ಛದ್ಮವೇಷ ಹಾಕಿಸಿ ಖುಷಿ ಪಟ್ಟರು ಈ ಸಂದರ್ಭದಲ್ಲಿ ಶಿಕ್ಷಕರು,ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

 

Share and Enjoy !

Shares