ರಾಜಸ್ಥಾನ,ಮೌಂಟ್ಅಬು: ಶಾಂತಿವನದಲ್ಲಿ ನಾಲ್ಕುದಿನಗಳ ಕಾಲ ನಡೆಯುವ ಮೀಡಿಯಾ ಸಮ್ಮೆಳನಕ್ಕೆ ಶಾಸಕರಾದ ,ಬುಲಂದ್ ಚಾಲನೆ ನಿಡಿ ಮಾತನಾಡಿದ ಅವರು ಮನಸ್ಸಿನಲ್ಲಿ ಶಾಂತಿ ಇದ್ದರೆ ಜೀವನದಲ್ಲಿ ಶಾಂತಿ ಇರುತ್ತದೆ ,ಒಂದು ಗಂಟೆಯ ದಿನನಿತ್ಯದ ಧ್ಯಾನ ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ. ಅನೇಕ ಸಮಸ್ಯೆಗಳಿಂದ ಮುಕ್ತರಾಗಲು ಒಳ್ಳೆಯ ವಿಚಾರ ವ್ಯವಹಾರ ಸಕಾರಾತ್ಮಕ ಚಿಂತನೆ ಮಾಡಬೇಕೆಂದು ಕರೆ ನೀಡಿದರು.
ಬ್ರಹ್ಮ ಕುಮಾರ್ ನೆರ್ವೇರ್ ಪ್ರಧಾನ ಕಾರ್ಯದರ್ಶಿ ಬ್ರಹ್ಮಾ ಕುಮಾರಿ ಸಂಸ್ಥೆ ಮೌಂಟ್ ಅಬು ಇವರು ವಿಡಿಯೋ ಮೂಲಕ ಬಂದಿರುವ ಎಲ್ಲರಿಗೂ ಸಮ್ಮೇಳನದ ಉದ್ದೇಶ ಮತ್ತು ಗುರಿಯ ಬಗ್ಗೆ ವಿಸ್ತಾರವಾಗಿ ವಿವರಣೆ ನೀಡುತ್ತಾ ಬರ ಮಾಡಿಕೊಂಡರು.
ಬ್ರಹ್ಮಾ ಕುಮಾರ್ ಕರುಣ, ಮೀಡಿಯಾ ವಿಂಗ್ಸ್ ಅಧ್ಯಕ್ಷರು, ಮೌಂಟ್ ಅಬು ಇವರು ತನ್ನ ಅನುಭವವನ್ನು ವಿವರಿಸುತ್ತಾ , ನಾವು ಜ್ಯೋತಿರ್ಬಿಂದು ಆತ್ಮ ವೆಂದು,
ತಿಳಿದುಕೊಂಡು ಅನ್ಯರಿಗೂ ತಿಳಿಸಬೇಕಾಗಿದೆ.
ಈಶ್ವರ ಒಬ್ಬನೇ ಆಗಿದ್ದಾನೆ ಅವನೇ ನಮಗೆ ತಂದೆ ತಾಯಿ ಸಖಾ ಸ್ವಾಮಿಯಾಗಿದ್ದಾನೆ
ಕರ್ಮದ ಆಧಾರದಿಂದ ಈ ಸೃಷ್ಟಿಯು ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರ ನಡೆಯುತ್ತದೆ. ಈ ಸಂಸ್ಥೆಯಲ್ಲಿ ಕಲಿಸುವ ರಾಜಯೋಗದಿಂದ ಶಾಂತಿ ಸುಖ ಆನಂದ ಸದ್ಭಾವನೆ ಅನೇಕ ಗುಣಗಳನ್ನು ಪಡೆದು ನಾವು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸೌಹಾರ್ದತೆ ಯನ್ನು ಪುನಹ ಸ್ಥಾಪಿಸಬಹುದು.
ಸಂಸ್ಥೆಯ ಜಂಟಿ ಆಡಳಿತಾದಿಕಾರಿಣಿ ಬ್ರಹ್ಮಾ ಕುಮಾರಿ ನಿರ್ಮಲ ಅವರು ಭಗವಂತ ನಿಂದ ಸರ್ವ ಶಕ್ತಿಗಳನ್ನು ಪಡೆಯುವುದು ಪ್ರತಿಯೊಬ್ಬರ ಅಧಿಕಾರವಾಗಿದೆ. ಮೂರು ದಿನಗಳ ಈ ಸಮ್ಮೇಳನದ ಸಮಯದಲ್ಲಿ ತಾವು ಪಡೆದುಕೊಳ್ಳಬಹುದು ಎಂದು ಆಶೀರ್ವಚನ ನೀಡಿದರು.
ಎಂಸಿ ಡೆಲ್ಲಿ ಅಧ್ಯಕ್ಷರಾದ ಸಂಜೆಯ ದ್ವಿವೇದಿ ಅವರು ‘ಈ ಸಂಸ್ಥೆಯು ಸಮಾಜದ ವರ್ಗಗಳ ಸೇವೆ ಮಾಡುತ್ತಿದ್ದು ಸಮಾಜದ ಉದ್ಧಾರ ಮತ್ತು ಸರ್ವಾಂಗಣ ಉನ್ನತಿಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ವಾಗಿದೆ,’ ಎಂದು ಪ್ರಶಂಸಿದ್ದರು.
ಬ್ರಹ್ಮಾ ಕುಮಾರಿ ರಂಜನಾ, ವಲಸಡ್, ರಾಜಯೋಗದ ಅಭ್ಯಾಸ ಕಾಮೆಂಟರಿ ಮೂಲಕ ಮಾಡಿಸಿದರು. ಬೆಂಗಳೂರಿನ ದಲಿತ ನೃತ್ಯ ಕಲಾಮಂದಿರ, ಕಲಾಕಾರರಿಂದ ಗಣೇಶನ ಸ್ತುತಿಯ ತುಂಬಾ ಆಕರ್ಷಣೆ ಆಗಿತ್ತು.
ಹಾಗೂ ಪರ್ವತದ ಶಾಂತಿವನದಲ್ಲಿ ಜಾಗತಿಕ ಶಾಂತಿ ಮತ್ತು ಸೌಹಾರ್ದತೆಗಾಗಿ ಸಶಕ್ತ ಮಾಧ್ಯಮ ಎಂಬ ವಿಷಯದ ಬಗ್ಗೆ ಮೀಡಿಯಾ ಸಮ್ಮೇಳನ ಸ್ವಾಗತ ಕಾರ್ಯಕ್ರಮದಿಂದ ನಿನ್ನೆ ಸಂಜೆ ಶುಭಾರಂಭಗೊಂಡಿತು. ವಿಶೇಷವಾಗಿ ಮೀಡಿಯಾದವರಿಗೆ ಮಳೆರಾಯನ ತುಂತುರು ಹನಿಯಿಂದ ಸ್ವಾಗತವಾಯ್ತು.
ಬಂದಿರುವ ಮಾಧ್ಯಮ ಮಿತ್ರರಿಗೆ ಸ್ವಾಗತ ಬ್ರಹ್ಮ ಕುಮಾರ್ ಕೋಮಲ್ ಬ್ರಹ್ಮಕುಮಾರಿ ನ್ಯೂಸ್ ಚಾನೆಲ್ ಇವರು ಮಾಡಿದರೆ, ಮುಖ್ಯ ಸಂಯೋಜಕರು ಮೀಡಿಯಾ ವಿಂಗ್ಸ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆ ಬ್ರಹ್ಮಕುಮಾರಿ ಚಂದ್ರಕಲಾ ಜೈಪುರ ಅವರು ಮಾಡಿದರು.
ಮೂರು ದಿನಗಳ ಈ ಮಹಾಸಮ್ಮೇಳನದಲ್ಲಿ150 ಪ್ರತಿನಿಧಿಗಳು ಒಳಗೊಂಡು 2,000 ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಜಾಗತಿಕ ಸಾಮರಸ್ಯಕ್ಕಾಗಿ ಪತ್ರಿಕೋದ್ಯಮ, ಧನಾತ್ಮಕ ಬದಲಾವಣೆಗಾಗಿ ಮಾಧ್ಯಮ ವೃತ್ತಿಪರರ ಆಂತರಿಕ ಸಬಲೀಕರಣ, ಆಂತರಿಕ ಕಾರ್ಯವ್ಯವಸ್ಥೆ, ಸಮಾಜದ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ, ವಿವಿಧ ಮಾಧ್ಯಮಗಳಲ್ಲಿ ನೈತಿಕ ಸಮತೋಲನ ಅಗತ್ಯ, ಮಾಧ್ಯಮದಲ್ಲಿನ ಶಾಂತಿ ಮತ್ತು ಸಾಮರಸ್ಯ ಪಾತ್ರಕ್ಕಾಗಿ ಆಧ್ಯಾತ್ಮಿಕ ವಿವೇಕ, ಮುಂತಾದ ವಿಷಯಗಳ ಬಗ್ಗೆ ವಿಚಾರಗೊಷ್ಠಿ, ವಿಮರ್ಶೆ, ಕಾರ್ಯಾಗಾರಗಳು ನಡೆಯಲಿವೆ. ಜೊತೆಗೆ ಆಂತರಿಕ ಶಕ್ತಿಯ ಅನ್ವೇಷಣೆ, ಸುಖ, ಸಮೃದ್ಧಿಯ ಜೀವನಕ್ಕೆ ದಾರಿ, ಪರಮಶಕ್ತಿಯ ಅನುಭವ, ಒತ್ತಡರಹಿತ ಜೀವನ, ಪರಮಶಕ್ತಿಯ ಜೊತೆ ಸಂಬಂಧ-ರಾಜಯೋಗ, ಮುಂತಾದ ವಿಷಯದ ಮೇಲೆ ಆಧ್ಯಾತ್ಮ ಸಶಕ್ತಿಕರಣವು ನಡೆಯಲಿದೆ.