ಪ್ರತಿದಿನ ಮೊಸರು ತಿನ್ನುವುದರಿದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು

Share and Enjoy !

Shares
Listen to this article

ಮೊಸರು ಮಕ್ಕಳಿಂದ ವಯಸ್ಸಾದವರೆಗೆ ಎಲ್ಲರಿಗೂ ಅತ್ಯಂತ ಅಚ್ಚುಮೆಚ್ಚಿನ, ಸೂಪರ್​ಫುಡ್. ಇದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮೊಸರಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಇದರಲ್ಲಿ  ರಂಜಕ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಹ ಇದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ.

ಮೊಸರನ್ನು ತಿನ್ನುವುದರಿಂದ ದಪ್ಪಗಾಗುತ್ತಾರೆ ಎಂಬ ತಪ್ಪು ಭಾವನೆ ಹಲವರಲ್ಲಿದೆ. ಆದರೆ, ಮೊಸರು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ 10 ಪ್ರಯೋಜನಗಳು

ನಿಯಮಿತವಾಗಿ ಮೊಸರು ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹೀಗಾಗಿ, ಮೊಸರು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೊಸರು ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಮ್ಮ ದೇಹವನ್ನು ಕರುಳಿನ, ಮೂತ್ರಕೋಶ ಮತ್ತು ಸ್ತನ ಕ್ಯಾನ್ಸರ್​ನಿಂದ ರಕ್ಷಿಸುತ್ತದೆ.

ಪ್ರತಿದಿನ ಮೊಸರು ಸೇವಿಸುವುದರಿಂದ ನಮ್ಮ ಕರುಳಿನ ಚಲನೆಯನ್ನು ಕ್ರಮಬದ್ಧವಾಗಿರಿಸುತ್ತದೆ. ಇದು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸುತ್ತದೆ.

ಮಲಬದ್ಧತೆ, ಉರಿಯೂತದ ಕರುಳಿನ ಕಾಯಿಲೆ ಮತ್ತು ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನು ನಿವಾರಿಸಲು ಮೊಸರು ಪರಿಣಾಮಕಾರಿಯಾಗಿದೆ.

ಮೊಸರಿನ ನಿಯಮಿತ ಸೇವನೆಯಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ನಮ್ಮ ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಮೊಸರು ಜಠರಗರುಳಿನ ಸೋಂಕುಗಳು, ಸಾಮಾನ್ಯ ಶೀತ, ಜ್ವರ ಮತ್ತು ಕ್ಯಾನ್ಸರ್‌ನಂತಹ ಉಸಿರಾಟದ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ಮನೆಯಲ್ಲಿ ತಯಾರಿಸಿದ, ಸಿಹಿಗೊಳಿಸದ ಮೊಸರಿನ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರಿಗೆ ಮೊಸರು ತುಂಬಾ ಒಳ್ಳೆಯದು.

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹೀಗಾಗಿ ಇದು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸೂಕ್ತವಾಗಿದೆ. ಮೊಸರಿನ ನಿಯಮಿತ ಸೇವನೆಯು ಮೂಳೆಯ ದ್ರವ್ಯರಾಶಿ ಮತ್ತು ಶಕ್ತಿಯನ್ನು ಸಂರಕ್ಷಿಸುತ್ತದೆ.

ಪ್ರತಿನಿತ್ಯ ಮೊಸರಿನ ಸೇವನೆಯಿಂದ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ. ಮಧುಮೇಹ, ಕ್ಯಾನ್ಸರ್ ಮತ್ತು ಸಂಧಿವಾತಗಳಿಗೆ ಉರಿಯೂತ ಕಾರಣವಾಗಿದೆ.

ಮೊಸರಿನಲ್ಲಿರುವ ಹೆಚ್ಚಿನ ಪ್ರೊಟೀನ್ ಅಂಶವು ನಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಇದು ನಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಮ್ಮ ಕ್ಯಾಲೋರಿ ಸೇವನೆಯು ಕಡಿಮೆಯಾಗುತ್ತದೆ. ಇದರಿಂದ ತೂಕ ಕಡಿಮೆಯಾಗಲು ಸಹಕಾರಿ.

ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಖಿನ್ನತೆಯ ರೋಗಿಗಳಿಗೆ ಉತ್ತಮ ಭಾವನೆಯನ್ನು ನೀಡುತ್ತದೆ.

Share and Enjoy !

Shares