ನಿಬ್ಬೆರಗಾಗಿಸಿದ ಮಲ್ಲಗಂಭ ಸಾಹಸ ಪ್ರದರ್ಶನಗಳು

Share and Enjoy !

Shares
Listen to this article

ಸಿರುಗುಪ್ಪ. ಸೆ-29: ಅತ್ಯಂತ ಲೀಲಾಜಾಲವಾಗಿ ಕಂಬವನ್ನೇರುತ್ತಾ ಅದ್ಭುತ ಸಾಹಸಗಳನ್ನು ಹುಡುಗರು ಪ್ರದರ್ಶಿಸುತ್ತಿದ್ದರೆ, ಕಾಲು ಬೆರಳುಗಳ ಸಂದಿಯಲ್ಲಿ ಹಗ್ಗವನ್ನು ಬಳಸಿ ಜೋತು ಬೀಳುತ್ತಾ ಆಸನಗಳನ್ನು ಪ್ರದರ್ಶಿಸಿದ ಹುಡುಗಿಯರ ಸಾಹಸ ಪ್ರದರ್ಶನ ನೋಡಗರ ಕಣ್ಮನಗಳನ್ನು ನಿಬ್ಬೆರಗಾಗಿಸಿತ್ತು.

ವಿಶ್ವ ಹಿಂದೂ ಪರಿಷತ್, ಹಿಂದೂ ಮಹಾಸಭಾ, ಬಜರಂಗದಳ ಹಾಗೂ ಗಣೇಶ ಉತ್ಸವ ಸಮಿತಿ ಇವರುಗಳಿಂದ ನಗರದ ಬಳ್ಳಾರಿ ರಸ್ತೆಯ ಬಯಲು ಜಾಗದಲ್ಲಿ ಪ್ರತಿಷ್ಠಾಪಿಸಿರುವ 6ನೇ ವರ್ಷದ ಶ್ರೀ ಗಣೇಶೋತ್ಸವದ ವೇದಿಕೆ ಪ್ರದರ್ಶನಗಳ ಅಂತಿಮ ದಿನದಂದು ಈ ಸಾಹಸ ಪ್ರದರ್ಶನಗಳನ್ನು ವೇದಿಕೆಯ ಮೇಲೆ ಆಯೋಜನೆ ಮಾಡಲಾಗಿತ್ತು

ವೇದಿಕೆ ಕಾರ್ಯಕ್ರಮಗಳ ಅಂತಿಮ ದಿನದಂದು ಸಿರುಗುಪ್ಪಾದ ರಾಜ ಎಂದು ಪ್ರಖ್ಯಾತಿ ಪಡೆದ ಶ್ರೀ ಗಣೇಶನ ಲಡ್ಡು ಪ್ರಸಾದ ಹಾಗೂ ಬೆಳ್ಳಿಯ ನಾಣ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಲಿಲಾವು ಮಾಡಲಾಯಿತು. ವೇದಿಕೆಯ ಮುಂದಿನ ಆಸನಗಳಲ್ಲಿ ಆಸೀನರಾಗಿದ್ದ ನಗರದ ಅನೇಕ ವ್ಯಾಪಾರಸ್ಥರು ಗಣೇಶನ ಭಕ್ತರು ಹಾಗೂ ಅನೇಕರು ದೂರವಾಣಿಯ ಮೂಲಕವೇ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು ಲಕ್ಷಾಂತರ ರೂಪಾಯಿಗಳಿಗೆ ಈ ವಸ್ತುಗಳು ಹರಾಜುಗೊಂಡವು

ಇದೇ ಸಂದರ್ಭದಲ್ಲಿ ವಿಶ್ವದಾದ್ಯಂತ ಮಲ್ಲಗಂಬ ಮತ್ತು ಹಗ್ಗದ ಮಲ್ಲಕಂಬ ಪ್ರದರ್ಶನಗಳಿಗೆ ಹೆಸರುವಾಸಿಯಾದ ಮತ್ತು ಅನ್ಯ ದೇಶದವರಿಗೂ ಸಹ ಮಲ್ಲಗಂಬ ಸಾಹಸಕಲೆಯನ್ನು ಕಲಿಸಿಕೊಟ್ಟಿರುವ ಸಿದ್ಧಾರೂಢ ಹೂಗಾರ್ ಇವರ ತಂಡದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿತು ಕಿರಣ್ ಹೂಗಾರ್  ಸಾಹಸ ಕಲೆಗಳ ಮತ್ತು ಆಸನಗಳ ಬಗ್ಗೆ ನಿರೂಪಣೆ ನೀಡಿದರು ಅಲ್ಲದೆ ಶುಕ್ರವಾರದ ಗಣೇಶ ವಿಸರ್ಜನ ಮೆರವಣಿಗೆಯಲ್ಲಿಯೂ ಸಹ ಆಕರ್ಷಕ ಪ್ರದರ್ಶನ ನೀಡಲಾಗುವುದೆಂದು ತಿಳಿಸಿದರು

ಈ ವೇಳೆ ಗಣೇಶೋತ್ಸವ ನಡೆಸಲು ತನು ಮನ ಧನ ಮತ್ತು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತಾ ಗಣೇಶನ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ಹಾಸ್ಯ ಕಲಾವಿದ ಮತ್ತು ಶಿಕ್ಷಕರು ಆದ ಜೆ ನರಸಿಂಹಮೂರ್ತಿ ತಮ್ಮ ನಿರೂಪಣೆಯಲ್ಲಿ ತಿಳಿಸಿದರು

ಈ ವೇಳೆ ಎಲ್ಲರಿಗೂ ಸತ್ಕರಿಸಿ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಸಂಘದ ಎಲ್ಲಾ ಸದಸ್ಯರುಗಳಿಗೂ ಫೋಟೋ ಶೂಟ್ ಕಾರ್ಯಕ್ರಮ ನಡೆಯಿತು

 

Share and Enjoy !

Shares