ಪಿ ದಿವಾಕರ ನಾರಾಯಣ ಅವರಿಗೆ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಘೋಷಣೆ.

Share and Enjoy !

Shares
Listen to this article

ಕನ್ನಡ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ವಿಭಾಗದಲ್ಲಿ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ
ಡಾ. ಮೃತ್ಯುಂಜಯ ರುಮಾಲೆ ಅವರ ಮಾರ್ಗದರ್ಶನದಲ್ಲಿ “ಅವಧೂತ ಪರಂಪರೆ ಮತ್ತು ಜೀವನ ದರ್ಶನ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು ಕ್ಷೇತ್ರಕಾರ್ಯ ಮತ್ತು ವಿವಿಧ ಆಕಾರಗಳಿಂದ ಮಹಾಪ್ರಬಂದವನ್ನ ಸಿದ್ಧಪಡಿಸಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಪ್ರಸ್ತುತ ಸಂದರ್ಭದಲ್ಲಿ ಅವಧೂತ ಪರಂಪರೆಯ ಸಮಾ ಸಮಾಜ ನಿರ್ಮಾಣ ಮಾಡಲು ಅತ್ಯಂತ ಅಗತ್ಯವಾಗಿದ್ದು ಪಂಪನ ವಾಣಿಯಂತೆ ಮನುಷ್ಯ ಜಾತಿ ತಾನೊಂದೇ ಕುಲಂ ಎಂಬಂತೆ ಯಾವುದೇ ಭಿನ್ನ ಭೇದವಿಲ್ಲದೆ ಮನುಷ್ಯ ಕುಲದ ಉನ್ನತಿಗಾಗಿ ಶ್ರಮಿಸುವ ಪರಂಪರೆಯಾಗಿದೆ.

ಈ ನಾಡಿನಲ್ಲಿ ಅನೇಕ ಪಂತ ಪರಂಪರೆಗರು ಬೆಳೆದು ಬಂದಿದ್ದರು ಅವೆಲ್ಲವೂಗಳಿಗೂ ಮೂಲ ಎಂಬಂತೆ ಅವಧೂತ ಪರಂಪರೆ ನಮ್ಮ ನಾಡಿನ ಜನಸಾಮಾನ್ಯರ ಬದುಕಿನಲ್ಲಿ ಬೆರೆತುಹೋಗಿದೆ. ಸಾಮಾನ್ಯ ಮಾನವ ತನ್ನ ಸಾಧನೆ ಮೂಲಕ ದೈವ ಸ್ವರೂಪಿಯಾಗಿ ಸಾಮಾನ್ಯರ ಬದುಕಿನ ಆರಾಧ್ಯ ದಯವಾಗಿ ಕಂಡಿರುವುದು ನಾಡಿನ ಉದ್ದಗಲಕ್ಕೂ ನಾವು ಗುರುತಿಸಬಹುದಾಗಿದೆ ಎಂಬಂತಹ ಅನೇಕ ವಿಚಾರಗಳನ್ನ ಒಳಗೊಂಡಿದೆ. ಮೂಲತಃ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ಶ್ರೀಮತಿ ಕೊಟ್ರಮ್ಮ ಸತ್ಯಪ್ಪ ಇವರ ಮಗನಾಗಿದ್ದು, ಪ್ರಾಥಮಿಕ ಶಿಕ್ಷಣವನ್ನ ಸದರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ತರಳುಬಾಳು ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿ. ಕೂಡ್ಲಿಗಿ ತಾಲೂಕಿನ ಕಾನಾಮಡುಗಿನ ಶ್ರೀಶರಣ ಬಸವೇಶ್ವರ ದಾಸೋಹ ಮಠದಲ್ಲಿ ಪದವಿ ಪೂರ್ವ ಮತ್ತು ಶಿಕ್ಷಕರ ತರಬೇತಿ ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಿ,
ಪ್ರಸ್ತುತ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರಕಲ್ಲು ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ

 

 

ಪಿ. ದಿವಾಕರ ನಾರಾಯಣ ಇವರಿಗೆ ಕನ್ನಡ ವಿಶ್ವವಿದ್ಯಾನಿಲಯ ಇವರ ಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಘೋಷಣೆ ಮಾಡಲಾಗಿದೆ ಎಂದುಮಾನ್ಯ ಕುಲಸಚಿವರು ಅಧಿಸೂಚನೆಯನ್ನು ಹೊರಡಿಸಿರುತ್ತಾರೆ.

Share and Enjoy !

Shares