ನಗರದ ತುಂಗಭದ್ರ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ತಾಲೂಕು ಕುರುಬ ಸಂಘದವರಿಂದ ಬೆಳಗಾವಿ ಸಮಾವೇಶಕ್ಕೆ ಆಗಮಿಸುವಂತೆ ಮುಖಂಡರಿಂದ ಸುದ್ದಿಗೋಷ್ಠಿ ನಡೆಸಿದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ದಮ್ಮೂರು ಸೋಮಪ್ಪ ಮಾತನಾಡಿ ದಿ ಅಕ್ಟೋಬರ್ 03 ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶೆಫರ್ಡ್ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಬೃಹತ್ ಸಮಾವೇಶ ಆಯೋಜನೆ ಗೊಂಡಿದ್ದು ದೇಶದ ಅನೇಕ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ನಮ್ಮ ಸಮಾಜಕ್ಕೆ ರಾಷ್ಟ್ರೀಯ ಮಾನ್ಯತೆ ಕಲ್ಪಿಸುವುದು ಸಮಾಜವನ್ನು ಪರಿಶಿಷ್ಟ ಪಂಗಡದ (ST)ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕುರಿತಂತೆ ಹಕ್ಕೊತ್ತಾಯ ಮಂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿರುತ್ತದೆ, ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಹಾಲುಮತ ಸಮಾಜದ ಸಂಘಟನೆ ಪ್ರಗತಿ, ಮುಂದಿನ ಹೋರಾಟ ನಿರ್ಧರಿಸುವಲ್ಲಿ ಕುರಿತಂತೆ ಸಮಾವೇಶ ಮಹತ್ವದಾಗಿದೆ, ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ಸಮಾಜದ ಮುಖಂಡರು ಗುರು ಹಿರಿಯರು, ಕಿರಿಯರು ಹಾಗೂ ಸಮಾಜದ ಎಲ್ಲಾ ಸಂಘದ ಪದಾಧಿಕಾರಿಗಳು ಆಗಮಿಸಬೇಕೆಂದು ವಿನಂತಿಸಿದರು.
ಈ ವೇಳೆ ಸಿರುಗುಪ್ಪ ತಾಲೂಕು ಕುರುಬ ಸಂಘ ಕಾರ್ಯದರ್ಶಿ ನಿಟ್ಟೂರು ಕರಿಬಸಪ್ಪ ಮಾತನಾಡಿ 9ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶವಾಗಿದ್ದು ತಾಲೂಕು ಕುರುಬ ನೌಕರರ ಸಂಘ, ಸಂಗೊಳ್ಳಿ ರಾಯಣ್ಣ ಯುವಕ ಸಂಘ, ತಾಲೂಕು ಹಾಲುಮತ ಸಭಾ, ಕನಕದಾಸರ ಯುವಕ ಸಂಘ, ಹಾಗೂ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಮತ್ತು ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಈ ಸುದ್ದಿಗೋಷ್ಠಿ ಸಮಯದಲ್ಲಿ ಸಂಘದ ಖಜಾಂಚಿ ಪೂಜಾರಿ ಪ್ಯಾಟೆಪ್ಪ , ಮುಖಂಡರಾದ ನಾಡಂಗ ಶಂಕ್ರಪ್ಪ, ಬೀಮಣ್ಣ , ತಾಳೂರು ಶೇಷಣ್ಣ ,ಯುವ ಮುಖಂಡ ಮಲ್ಲೇಶಪ್ಪ, ಸಂಘದ ಜಿಲ್ಲಾ ನಿರ್ದೇಶಕ ಮಂಡಿಗಿರಿ ಕೃಷ್ಣ ಹಾಗೂ ಕೋಟಿ ಪಂಪಾಪತಿ ಇದ್ದರು.