ನಗರದ ಪೊಲೀಸ್ ಠಾಣೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ ಕಾರ್ಯಕ್ರಮ.

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ
ಸಿರುಗುಪ್ಪ: ನಗರದ ನೂತನ ಪೊಲೀಸ್ ಠಾಣೆಯಲ್ಲಿ ಈ ಬಾರಿ ಪ್ರಥಮವಾಗಿ ಆಯುಧ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ನೆರವೇರಿತು

ನವರಾತ್ರಿ ದಿನಗಳಲ್ಲಿ ಆಯುಧಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು. ಈ ಹಿನ್ನಲೆಯಲ್ಲಿ ಈಬಾರಿ ನೂತನ ಪೊಲೀಸ್ ಠಾಣೆ ಆಗಿರುವುದರಿಂದ ಇಲ್ಲಿ ಪ್ರಥಮವಾಗಿ ಆಯುಧಪೂಜೆ ಆಚರಿಸಲಾಯಿತು.

ಪೂಜಾ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಕ್ಷೇತ್ರದ ಶಾಸಕ ಬಿ.ಎಂ. ನಾಗರಾಜ ತಮ್ಮ ಆಪ್ತರೊಂದಿಗೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು

ಈ ಸಂದರ್ಭದಲ್ಲಿ ಠಾಣೆಯ ಶಸ್ತ್ರಾಸ್ತ್ರಗಳಿಗೆ ಮತ್ತು ವಾಹನಗಳಿಗೆ ವಿಶೇಷ ಪೂಜೆ ಮಾಡಲಾಯಿತು ಇದೇ ವೇಳೆ ಕಾಣೆಯ ಆವರಣದಲ್ಲಿ ಶಾಸಕರು ಕಲ್ಪವೃಕ್ಷದ ಸಸಿ ನೆಟ್ಟು ನೀರೆರದರು

ಡಿ.ವೈ.ಎಸ್.ಪಿ. ಲಕ್ಷ್ಮೀಕಾಂತ ಒಡೆಯರ್, ಪ್ರೊಬೆಶನರಿ ಡಿ.ವೈ.ಎಸ್.ಪಿ. ಉಮಾರಾಣಿ, ಠಾಣೆಯ ಪಿ.ಎಸ್.ಐ. (ಕಾ.ಸು) ತಿಮ್ಮಣ್ಣ, ಕ್ರೈಂ. ಪಿ.ಎಸ್.ಐ. ಹೊನ್ನೂರಪ್ಪ ಸೇರಿದಂತೆ ಪೊಲೀಸ್ ಠಾಣೆ ಮತ್ತು ‌ಸಿ.ಪಿ.ಐ ಠಾಣೆ ಹಾಗೂ‌ ಡಿವೈ ಎಸ್ ಪಿ ಠಾಣೆಯ ಪೊಲೀಸ್ ಅಧಿಕಾರಿಗಳು ‌ಪಾಲ್ಗೊಂಡಿದ್ದರು

Share and Enjoy !

Shares