ರಾಮಾಯಣ ಬಯಲಾಟ ಪ್ರದರ್ಶನ

Share and Enjoy !

Shares

ವಿಜಯನಗರವಾಣಿ ಸುದ್ದಿ

ಕುರುಗೋಡು

ಶ್ರೀ ಗುರು ಪಂಚಾಂಕ್ಷರಿ ಪುಟ್ಟರಾಜ ಶಿವಯೋಗಿ ಬಯಲಾಟ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಬದನಹಟ್ಟಿ. ಇವರಿಂದ ರಾಮಾಯಣ ಅರ್ಥತ್. ರಾವಣಸುರ ವಧೆ ಎಂಬ ಸುಂದರ ಪೌರಾಣಿಕ ಬಯಲಾಟ ದಿ: 05.12.2023. ಮಂಗಳವಾರ ರಾತ್ರಿ 8 ಗಂಟೆಗೆ  ಬಳ್ಳಾರಿ ತಾಲೂಕಿನ  ಡಿ. ಕಗ್ಗಲ್ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ  ಬಿ.ನಾಗೇಂದ್ರ ಉದ್ಛಾಟಿಸಿದರು.

ಈ ಸಂದರ್ಭದಲ್ಲಿ ಕುರುಬ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ ಮಾತನಾಡಿ  ಬಯಲಾಟ, ನಾಟಕ ಮುಂತಾದ ಕಲೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗದಂತಿದ್ದವು. ಆದರೆ, ಬದಲಾದ ಕಾಲ ಘಟ್ಟದಲ್ಲಿ ಅವಸಾನದ ಅಂಚಿನಲ್ಲಿರುವ ಈ ಬಯಲಾಟ, ದೊಡ್ಡಾಟ, ಡಪ್ಪಿನಾಟ ಮುಂತಾದ ಕಲೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯ ಇದೆ.

ಗಂಡು ಮೆಟ್ಟಿನ ಹಾಗೂ ಜೀವಂತ ಕಲಾ ಪ್ರಕಾರವಾದ ಬಯಲಾಟದ ಉಳಿಯುವಿಕೆಯಲ್ಲಿ ಯುವಕರ ಪಾತ್ರ ಅಪಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್,ಕಂಪ್ಲಿ ಶಾಸಕ ಜೆ .ಎನ್ ಗಣೇಶ್  ಟಿ ಎಂ ಶ್ರೀನಿವಾಸ್ ಶಾಸಕರು ಕೂಡ್ಲಿಗಿ. ಗಾದಿಲಿಂಗನ ಗೌಡ ಕುರುಬ ಸಂಘದ ಅಧ್ಯಕ್ಷ ಬಳ್ಳಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಗಣ್ಯ ಮಾನ್ಯರು  ಉಪಸ್ಥಿತರಿದ್ದರು.   ಬಯಲಾಟ ಕಲಾವಿದರಾಗಿ  ಅರ್ಮೋನಿಯಂ ಮಾಸ್ಟರ್ ಮರೆಪ್ಪ, ಕಲುಕಂಭ, ಹನುಮಪ್ಪ ಕೊರ್ಲುಗುಂದಿ, ತಬಲ ಮತ್ತು ಮೃದಂಗ ಏರ್ರಿನಾಗೇಶ್ ಬಾದನಹಟ್ಟಿ ರಿದಂ ಪ್ಯಾಡ್ ಕರಿಬಸವ,ಸಾರಥಿ ಯಲ್ಲಪ್ಪ ಕೊಳಗಲ್ಲು, ರಂಗ ಸಜ್ಜಿಕೆ ಮಲ್ಲಿ ಕಲುಕಂಭ , ಮುಮ್ಮೆಳ ವಸೂರಪ್ಪ ನಾಗರಾಜ್ ಸಂಗಡಿಗರು ಸ್ತ್ರೀ ಪಾತ್ರ ಸೀತೆ ಕಮಲಮ್ಮ ಕೂಡ್ಲಿಗಿ, ಮಾಯಶ್ರೀ ವೈಟ್ ಸುಮ ಕೂಡ್ಲಿಗಿ, ಮೊಂಡೊದರಿ ಗೀತಾ,ರವರು ಭಾಗವಹಿಸಿದ್ದರು.

Share and Enjoy !

Shares