ಉತ್ತಮ ಆರೋಗ್ಯಕ್ಕಾಗಿ ಈ ಹತ್ತು ಆಹಾರಗಳನ್ನು ಇಂದೇ ಡಯೆಟ್ ನಲ್ಲಿ ಸೇರಿಸಿಕೊಳ್ಳಿ

ಇವು ವಿಶ್ವದ 10 ಆರೋಗ್ಯಕರ ಆಹಾರಗಳು, ನೀವು ಆರೋಗ್ಯವಾಗಿರಲು ಬಯಸಿದರೆ ಇಂದೇ ಇವುಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ. ನಾವು ತಿನ್ನುವ ವಸ್ತುಗಳು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ. ಕೆಲವೊಮ್ಮೆ ಕೆಲ ವಸ್ತುಗಳು ಅಡ್ಡಪರಿಣಾಮವನ್ನು ಕೂಡಾ ಉಂಟು  ಮಾಡುತ್ತದೆ. ಇಂದು ನಾವು ನಿಮಗೆ ಹೇಳುತ್ತಿರುವುದು ವಿಶ್ವದ 10 ಆರೋಗ್ಯಕರ ಆಹಾರಗಳ ಬಗ್ಗೆ.

ನೀವು ಯಾವಾಗಲೂ ಫಿಟ್ ಆಗಿರಲು ಬಯಸುತ್ತೀರಾ? ಹಾಗಾದರೆ ದೈಹಿಕ ವ್ಯಾಯಾಮದ ಜೊತೆಗೆ , ಆಹಾರ ಕ್ರಮದ ಮೇಲೆ ಗಮನಹರಿಸುವುದು ಕೂಡಾ ಬಹಳ ಮುಖ್ಯ. ನಾವು ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಮಾತ್ರ ಆಹಾರವನ್ನು ಸೇವಿಸಬಹುದು. ಆದ್ದರಿಂದ, ಆರೋಗ್ಯಕರ ಆಹಾರವನ್ನು ನಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ನಾವು ಸೇವಿಸುವ ರೋಗ್ಯಕರ ಹಾರ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ ನಿಜ. ಅದರೆ ಜೊತೆಗೆ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೂಡಾ ನೀಡುತ್ತದೆ. ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿರುವ ವಿಶ್ವದ 10 ಆರೋಗ್ಯಕರ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಆರೋಗ್ಯವಾಗಿರಲು ಬಯಸಿದರೆ, ಇಂದೇ ಈ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿ.

1

ಆವಕಾಡೊ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ, ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವಕಾಡೋ ಮೊನೊಅನ್ಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆವಕಾಡೊದಲ್ಲಿರುವ ಬೀಟಾ-ಸಿಟೊಸ್ಟೆರಾಲ್ ಇದು ಆಹಾರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ.

2

ಬೇಳೆ ಕಾಳುಗಳು ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೆಸರು, ಹೆಸರು ಕಾಳು, ಮಸೂರ್ ದಾಲ್, ಕಡಲೆ ಕಾಳು, ಉದ್ದಿನ ಬೇಳೆ, ಹೀಗೆ ಯಾವ ಬೇಳೆ ಕಾಳುಗಳೇ ಆಗಿರಲಿ ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ ಆಹಾರ. ಬೇಳೆ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶವನ್ನು ಹೊಂದಿರುತ್ತವೆ.  ಅಲ್ಲದೆ, ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಕೂಡ ಇದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.

3

ಬೆರಿಹಣ್ಣುಗಳು ವಿಶೇಷ ರೀತಿಯ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುತ್ತವೆ.  ಈ ಹಣ್ಣುಗಳು ಹೃದ್ರೋಗ, ಕ್ಯಾನ್ಸರ್, ಮೆಮೊರಿ ಲಾಸ್, ಮತ್ತು ಅಂಧತ್ವ ಸಮಸ್ಯೆಯಿಂದ ರಕ್ಷಿಸಿಲು ಸಹಾಯ ಮಾಡುತ್ತವೆ. ಇದಲ್ಲದೆ, ಬೆರಿಹಣ್ಣುಗಳು ಫೈಬರ್ ಅನ್ನು ಹೊಂದಿರುತ್ತವೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

4

ಅತ್ಯಂತ ಆರೋಗ್ಯಕರ ಆಹಾರದ ವಿಷಯಕ್ಕೆ ಬಂದಾಗ,ಬ್ರೊಕ್ಲಿಯನ್ನು ಹೇಗೆ ಮರೆಯಲು ಸಾಧ್ಯ.  ಕ್ಯಾನ್ಸರ್ ವಿರುದ್ಧ ಹೋರಾಡುವ ಆಹಾರಗಳಲ್ಲಿ ಬ್ರೋಕ್ಲಿಯ ಹೆಸರು ಮೊದಲು ಬರುತ್ತದೆ. ಸಲ್ಫೆರೋಫೀನ್ ಎಂಬ ಸಂಯುಕ್ತವು ಇದರಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಕಿಣ್ವಗಳನ್ನು ಉತ್ಪಾದಿಸುತ್ತದೆ, ಅದು ಕ್ಯಾನ್ಸರ್ ಉಂಟುಮಾಡುವ ಸಂಯುಕ್ತಗಳನ್ನು ದೇಹದಿಂದ ಹೊರಹಾಕುತ್ತದೆ. ಇದಲ್ಲದೆ, ಇದರಲ್ಲಿ ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿರುತ್ತದೆ.  ಆದ್ದರಿಂದ ಇದು ಮೂಳೆಗಳು, ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5

ಅಗಸೆ ಬೀಜಗಳ ಅದ್ಬುತ ಗುಣಗಳ ಬಗ್ಗೆ ತಿಳಿದರೆ ಇಂದಿನಿಂದಲೇ ಸೇವಿಸಲು ಆರಂಭಿಸುತ್ತೀರಿ. ಅಗಸೆ ಬೀಜಗಳು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಲು ಸಹಕಾರಿಯಾಗಿದೆ. ಇದು ಆಸ್ತಮಾ, ಮಲಬದ್ಧತೆಯನ್ನು ದೂರವಿರಲು ಸಹಾಯ ಮಾಡುತ್ತದೆ.

6

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಚಾಕೊಲೇಟ್ ಹೇಗೆ ಬಂತು ಎಂದು ಆಶ್ಚರ್ಯವಾಗಬಹುದು. ಆದರೆ ಡಾರ್ಕ್ ಚಾಕಲೇಟಿನ ನಿಯಮಿತ ಸೇವನೆ ಆರೋಗ್ಯಕ್ಕೆ ಸಹಕಾರಿ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲವೊನಾಯಿಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು  ರಕ್ತದೊತ್ತಡದ ಸಮಸ್ಯೆಯನ್ನುನಿವಾರಿಸುತ್ತದೆ.  ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.  ಸಂಶೋಧನೆಯ ಪ್ರಕಾರ, ಸೀಮಿತ ಪ್ರಮಾಣದ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು.

7

ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್,  ಆಂಟಿಫಂಗಸ್ ಮತ್ತು ಆಂಟಿವೈರಲ್ ಗುಣಗಳಿಂದಾಗಿ ಅನೇಕ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು. ವಾರಕ್ಕೆ ಕೇವಲ 6 ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯವನ್ನು 50 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ದೇಹದಿಂದ ಕ್ಯಾನ್ಸರ್ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

8

ನೀವು ಸಾಲ್ಮನ್ ಮೀನುಗಳನ್ನು ವಾರಕ್ಕೆ 2 ಬಾರಿ ಮಾತ್ರ ಸೇವಿಸಿದರೆ, ಹೃದ್ರೋಗದಿಂದ ಸಂಭವಿಸಬಹುದಾದ ಸಾವಿನ ಅಪಾಯವನ್ನು ಶೇಕಡಾ 17 ರಷ್ಟು ಕಡಿಮೆ ಮಾಡಬಹುದು ಮತ್ತು ಹೃದಯಾಘಾತದ ಅಪಾಯವನ್ನು ಶೇಕಡಾ 27 ರಷ್ಟು ಕಡಿಮೆ ಮಾಡಬಹುದು. ಸಾಲ್ಮನ್ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ, ಅಲ್ಲದೆ, ಸಾಲ್ಮನ್ ಮೀನುಗಳನ್ನು ತಿನ್ನುವ ಜನರು ಕಡಿಮೆ ಖಿನ್ನತೆಯನ್ನು ಅನುಭವಿಸುತ್ತಾರೆ.

9

ಕಬ್ಬಿಣ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಪಾಲಕ್ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಪಾಲಕ್ ಮೂಳೆಗಳನ್ನು ಬಲಪಡಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

10

  ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಪ್ರೋಬಯಾಟಿಕ್‌ಗಳು ಆರೋಗ್ಯಕರ ಬ್ಯಾಕ್ಟೀರಿಯಾವಾಗಿದ್ದು ಅದು ಕರುಳಿನ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಇದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಇದಲ್ಲದೆ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ 12 ನಂತಹ ಪೋಷಕಾಂಶಗಳು ಮೊಸರಿನಲ್ಲಿ ಕಂಡುಬರುತ್ತವೆ, ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ

Share and Enjoy !

Shares