ಉತ್ತರ ಕರ್ನಾಟಕದ ಪ್ರಸಿದ್ಧ ಅಂಬಾ ಮಠದ ಜಾತ್ರೆ .

 

ರಾಯಚೂರು: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ ಸಿಂಧನೂರು ತಾಲೂಕಿನ ಸಿದ್ಧ ಪರ್ವತದ ಶ್ರೀ ಅಂಬಾಮಠದ ಶ್ರೀ ಬಗಳಾಂಬ ದೇವಿ ಜಾತ್ರೆಯೂ    ಅದ್ದೂರಿಯಾಗಿ ಪ್ರರಂಭ ವಾಗುತ್ತಿದೆ.  ಸಿಂಧನೂರು ತಾಲೂಕಿನಲ್ಲಿರುವ ಅಂಬಾಮಠವು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಹಾಗು ತೆಲಂಗಾಣ ರಾಜ್ಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಿಯ ಆಸ್ಥಾನವಾಗಿದೆ.

ಅಂಬಾಮಠದ ಶ್ರೀ ಬಗಳಾಂಬ ದೇವಿಯ ಜಾತ್ರೆಯು ಪ್ರತಿ ವರ್ಷ ಬನದ ಹುಣ್ಣಿಮೆ ದಿನ ನಡೆಯುತ್ತದೆ. ಈ ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ಬಳಿಕ ಹದಿನೈದು ದಿನಗಳ ಕಾಲದವರೆಗೂ ಜಾತ್ರೆಯ ಸಂಭ್ರಮವಿರುತ್ತದೆ. ಈ ಜಾತ್ರೆಗೆ ಬಹಳಷ್ಟು ಜನ ಸಾಧು ಸಂತರು ಬರುವುದು ಸಹ ವಾಡಿಕೆ. ಪ್ರತಿ ಬಾರಿಯಂತೆ ಈ ವರ್ಷವು   ಅದ್ಧೂರಿಯಾಗಿ ಪ್ರಾರಂಭ ವಾಗುತ್ತಿದೆ.

 

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿನ ಅಂಬಾದೇವಿ ದೇವಸ್ಥಾನಕ್ಕೆ 343ವರ್ಷಗಳ ಇತಿಹಾಸವಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಹಾಗೂ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಸಿಂಧನೂರುತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿನ ಅಂಬಾದೇವಿ ದೇವಸ್ಥಾನಕ್ಕೆ 343ವರ್ಷಗಳ ಇತಿಹಾಸವಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಹಾಗೂ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗುಡ್ಡ-ಗಾಡು ದಟ್ಟ ಅರಣ್ಯ ಪ್ರದೇಶವಾಗಿದ್ದ ಅಂಬಾಮಠ ಬೆಳೆದು ಬಂದಿದ್ದಕ್ಕೆ ದೊಡ್ಡ ಇತಿಹಾಸವಿದೆ. 1876ರಲ್ಲಿ ಆದೋನಿ ಜಿಲ್ಲೆಯ ಹಿರೇಹರಿವಾಣದಲ್ಲಿ ಜನಿಸಿದ್ದ ಚಿದಾನಂದ ಅವಧೂತರು ಬಾಲ್ಯದಲ್ಲಿಯೇ ದೇವಿಯ ದರ್ಶನ ಪಡೆಯುತ್ತಾರೆ. ಸಾಮಾನ್ಯ ಪಂಚಾಂಗ ಹೇಳುವ ಕುಟುಂಬದಲ್ಲಿ ಜನಿಸಿದ್ದ ಅವಧೂತರಿಗೆ ಬಡತನ ಕಾಡುತ್ತದೆ. ಊರ ಹೊರಗೆ ಆ ಊರಿನ ಗೌಡ ಕಟ್ಟಿಸಿದ್ದ ಮನೆಯಲ್ಲಿ ಪಿಶಾಚಿ ಇದೆ ಎಂದು ಮನೆ ತ್ಯಜಿಸಿರುತ್ತಾರೆ. ಆ ಮನೆಯಲ್ಲಿ ಅವಧೂತರು ತಂದೆ, ತಾಯಿಯೊಂದಿಗೆ ವಾಸ ಮಾಡುತ್ತಾರೆ. ಮನೆಯ ಇಷ್ಟ ದೈವ ವೀರನಾರಾಯಣನಿಗೆ ಪೂಜೆ ಸಲ್ಲಿಸಲು ತಂದೆ ಹೋಗುವಾಗ ಕರಿಗೆಡಬು, ತುಪ್ಪ ಮತ್ತು ಇತರ ನೈವೇದ್ಯದ ಅಡುಗೆ ಮುಟ್ಟಬಾರದು ಎಂದು ಚಿದಾನಂದ ಅವಧೂತರನ್ನು ಕಂಬಕ್ಕೆ ಕಟ್ಟಿ ಹಾಕಿ ಹೋಗಿರುತ್ತಾರೆ. ಈ ವೇಳೆ ತಾಯಿಯ ರೂಪದಲ್ಲಿ ಪ್ರತ್ಯಕ್ಷಳಾದ ಅಂಬಾದೇವಿ ಅವಧೂತರನ್ನು ಬಂಧನದಿಂದ ಬಿಚ್ಚಿ ಊಟ ಮಾಡಿಸುತ್ತಾಳೆ. ನೀರು ತರುವೆ ಎಂದು ಹೊರ ಹೋಗುತ್ತಾಳೆ. ಮನೆಯವರು ಬಂದಾಗ ಊಟ ಮಾಡುವುದನ್ನು ಕಂಡು ಗಾಬರಿಯಾಗುತ್ತಾರೆ. ದೇವರಿಗೆ ಎಡೆ ಮಾಡುವ ಮುನ್ನ ಊಟ ಮಾಡಿದ್ದಕ್ಕೆ ಬಾಲ ಚಿದಾನಂದರಿಗೆ ಬೈಯ್ಯುತ್ತಾರೆ. ಆದರೆ ನೀನೇ ನನಗೆ ಊಟ ನೀಡಿದ್ದು, ಬೇಕಿದ್ದರೆ ತುಪ್ಪದಲ್ಲಿ ನಿನ್ನ ಬೆರಳು ಮೂಡಿದ್ದನ್ನು ನೋಡು ಎಂದು ಅಳುತ್ತಾನೆ. ಇದು ದೇವಿ ಮಹಿಮೆ ಇದೆ ಎಂದು ಆ ಬಾಲಕನಿಗೆ ಹೊಡೆಯುವುದನ್ನೇ ಬಿಡುತ್ತಾರೆ.

ಲ್ಲಿಂದ ಗಂಗಾವತಿ ತಾಲೂಕಿನ ಹೆಬ್ಬಾಳಕ್ಕೆ ಕೂಲಿ ಮಾಡಲು ಕುಟುಂಬ ಸಮೇತ ಬರುತ್ತಾರೆ. ಆಗ ತುಂಗಭದ್ರಾ ನದಿ ದಂಡೆಯಲ್ಲಿನ ಹೊನ್ನಪ್ಪ ಎನ್ನುವ ವಿದ್ವಾಂಸರ ಬಳಿ ಈತನಿಗೆ ವಿದ್ಯೆ ಕಲಿಕೆಗೆ ಬಿಡುತ್ತಾರೆ. ವಿದ್ಯೆ ಕಲಿತ ಬಳಿಕ ಸಿಂಧನೂರು ತಾಲೂಕಿನ ರವುಡಕುಂದಾ ಬಳಿಯ ರಂಗನಾಥ ದೇವಸ್ಥಾನಕ್ಕೆ ಬಂದು ಗವಿಯೊಳಗೆ 9ದಿನ ದ್ಯಾನ ಮಾಡುತ್ತಾರೆ. ಇಲ್ಲೂ ಮನಸ್ಸು ಪ್ರಶಾಂತವಾಗದ ಕಾರಣ ಕಾಡು ಅರಣ್ಯವಾಗಿದ್ದ ಸೋಮಲಾಪುರ ಗುಡ್ಡಕ್ಕೆ ಬಂದು ಗವಿಯೊಳಗೆ ತಪಸ್ಸು ಮಾಡುತ್ತಾರೆ. ದೇವಿ ಆರಾಧನೆ ಮಾಡುತ್ತ ಬಹು ದಿನ ಕಾಲ ಕಳೆದಾಗ ದೇವಿ ಪ್ರತ್ಯಕ್ಷಳಾಗಿ ಬೇಡಿಕೆ ಆಲಿಸುತ್ತಾಳೆ. ಈ ಭಾಗದಲ್ಲಿ ಆರಾಧ್ಯ ದೈವವಾಗಿ ಬೇಡಿದ್ದವರಿಗೆ ವರವ ನೀಡುವ ಮಹಿಮಾ ಪುರುಷಳಾಗಬೇಕು ಎಂದು ಕೋರಿಕೊಳ್ಳುತ್ತಾನೆ. ಆದರೆ ತನಗೇನೂ ಬೇಡದ ಚಿದಾನಂದ ಯತಿಗಳ ಬೇಡಿಕೆ ಮೇರೆಗೆ ಅಂಬಾದೇವಿ ಮೂರ್ತಿ ಉದ್ಭವವಾಗುತ್ತದೆ. ನೂರಾರು ಜನರು ಕೈ ಮುಗಿಯುತ್ತಾ ಪೂಜೆ-ಪುನಸ್ಕಾರ ಮಾಡುತ್ತಾರೆ. ಕ್ರಮೇಣವಾಗಿ ಅರಣ್ಯ ಪ್ರದೇಶದಲ್ಲಿದ್ದ ದೇವಸ್ಥಾನ ದೊಡ್ಡದಾಗುತ್ತದೆ. ಅಂಬಾಮಠವಾಗಿ ಬೆಳೆಯುತ್ತದೆ. ಇಂತಹ ಮಠ ಈಗ ಲಕ್ಷಾಂತರ ಭಕ್ತರ ತಾಣವಾಗಿದೆ. ಪ್ರತಿ ವರ್ಷ ದಸರಾ ವೇಳೆ ಶರನ್ನವರಾತ್ರಿ ಉತ್ಸವ ನಡೆದರೆ, ಬನದ ಹುಣ್ಣಿಮೆಯಂದು ದೇವಿಜ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ, ಮಂಗಳವಾರ, ಶುಕ್ರವಾರ ದೇವಿ ಸನ್ನಿಧಾನದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆಯುತ್ತಾರೆ.

Share and Enjoy !

Shares