ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ,ಮಹಿಳೆಯರಿಗೆ ಕ್ರೀಡಾಕೂಟ

ಸಿಂಧನೂರು: ನಗರದ ಶಂಕರ್ ಟ್ರಸ್ಟ್ ಕಾಲೇಜ್ ನಲ್ಲಿ ವೀಣಾ ಶ್ರೀ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಿಂಧನೂರು ಗೆಳೆಯರ ಬಳಗ ಸಂಘಟನೆ ವತಿಯಿಂದ ಜಂಟಿಯಾಗಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಮಹಿಳೆಯರಿಗೆ ವಿವಿಧ ಬಗೆಯ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಪೋಲಿಸ್ ಇಲಾಖೆಯ ರತ್ನಮ್ಮ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಂವಿಧಾನ ಪೀಠಕ್ಕೆ ಬೋಧಿಸುವುದರ ಮೂಲಕ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿ ಪ್ರೇರೇಪಿಸಿದರು.

ಉಪನ್ಯಾಸಕರಾದ ರಮೇಶ್ ಹಲಿಗಿ ಯವರು ಪ್ರಬಂಧ ಸ್ಪರ್ಧೆಯ  ಮೇಲ್ವಿಚಾರಕರಾಗಿ  ಕಾರ್ಯನಿರ್ವಹಿಸಿದರು. ಇನ್ನೂ ಮಹಿಳೆಯರ ವಿವಿಧ ಬಗೆಯ ಕ್ರೀಡಾಕೂಟಕ್ಕೆ  ಪೋಲಿಸ್ ಇಲಾಖೆಯ ಹುಲಿಗೆಮ್ಮ ರವರು ಚಾಲನೆ ನೀಡಿ, ಕ್ರೀಡೆಯಲ್ಲಿ ಸೋಲು – ಗೆಲವು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು  ಎಂದು ಕರೆ ನೀಡಿದರು.ಈ ಸಂಧರ್ಭದಲ್ಲಿ  ವೀಣಾ ಶ್ರೀ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ, ಬಸವನಗೌಡ ಮಾಲಿ ಪಾಟೀಲ್,ಕಾರ್ಯದರ್ಶಿದ್ರಾಕ್ಷಯಣಿ ಪಾಟೀಲ್, ಸಿಂಧನೂರು ಗೆಳೆಯರ ಬಳಗ ಸಂಘಟನೆ ಅಧ್ಯಕ್ಷ ಸೈಯದ್ ಬಂದೇನವಾಜ,ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ, ಸಹ ಕಾರ್ಯದರ್ಶಿ ವೀರೇಶ್ ಕಂದುಕೂರ್,ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ವೆಂಕಟೇಶ ನಾಯಕ ಬೂತಲದ್ದಿನ್ನಿ,ರಾಕೇಶ್ , ವೀರೇಶ್ ಗಡ್ಡಿಮಾಳ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿದರು.

Share and Enjoy !

Shares