ಕೆಂಚನಗುಡ್ಡ ಗ್ರಾಮ ಪಂಚಾಯತಿಯಲ್ಲಿ ಅದ್ದೂರಿ ಸಂವಿಧಾನ ಜಾಗೃತಿ ಜಾಥಾ.

Share and Enjoy !

Shares

ನಮ್ಮ ಸಂವಿಧಾನ ಜಾರಿಗೆ ಬಂದ  75ರ ಸಂಭ್ರಮ ಆಚರಣೆಗಾಗಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಆಯೋಜನೆಯಲ್ಲಿ ದಿನಾಂಕ 26 ಜನವರಿ 2024 ರಿಂದ ದಿನಾಂಕ 23/02/2024 ರವರೆಗೆ ರಾಜ್ಯಾದ್ಯಂತ  ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆ ಸಂಚರಿಸುತ್ತಿದ್ದು ದಿನಾಂಕ 7 ಫೆಬ್ರವರಿ ಬುಧವಾರದಂದು ಕೆಂಚನ ಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ಬಂದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಅತ್ಯಂತ  ಅರ್ಥಪೂರ್ಣವಾಗಿ ಅದ್ದೂರಿಯಾಗಿ ಹಾಗೂ ಗೌರವಯುತವಾಗಿ ಸ್ವಾಗತ ಮಾಡಲಾಯಿತು .

ಸಂವಿಧಾನ ಜಾಗೃತಿ ರಥ ಹಾಗೂಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪೂಜೆ ಮಾಡಲಾಯಿತು.

ಈ  ಸಂದರ್ಭದಲ್ಲಿ ಕೆಂಚನಗುಡ್ಡ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಎಂ ಟಿ ಶಾಂತ   ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ದ ಆತ್ಮದಂತಿರುವ ಸಂವಿಧಾನ ಪೀಠಿಕೆಯನ್ನು ಅಲ್ಲಿ ನೆರೆದಿದ್ದ ಗ್ರಾಮದ ಜನತೆಗೆ ಬೋಧಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು ,

ಅದರಲ್ಲೂ ಬಣಜಾರಹಟ್ಟಿ ತಾಂಡ ಕೆಂಚನಗುಡ್ಡ ಮಕ್ಕಳ ಸಾಂಪ್ರದಾಯಿಕ ನೃತ್ಯ  ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳ ಡೊಳ್ಳು ಕುಣಿತ ಗಮನ ಸೆಳೆಯಿತು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಹನುಮಂತಮ್ಮ,, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಸವನಗೌಡ ,ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು, ಎಲ್ಲಾ ಶಾಲೆಗಳ ಮುಖ್ಯ ಗುರುಗಳು ,ಶಿಕ್ಷಕರು ,ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Share and Enjoy !

Shares