ರೈತರು ಸಾವಯವ ಮತ್ತು ನೈಸರ್ಗಿಕ ಪದ್ಧತಿ ಅಳವಡಿಸಿಕೊಳ್ಳಿ: ಡಾ. ಎಂ. ಹನುಮಂತಪ್ಪ

Share and Enjoy !

Shares

ರಾಯಚೂರು-:

ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಕುಲಪತಿ ಡಾ. ಎಂ. ಹನುಮಂತಪ್ಪ ಉದ್ಘಾಟಿಸಿದರು.

ರಾಯಚೂರು: ಪಾರಂಪರಿಕ ಕೃಷಿಯು ಸಂಪದ್ಭರಿತ ಮತ್ತು ಪ್ರಕೃತಿಗೆ ಸಹಕಾರಿಯಾಗಿದ್ದು ಈ ನಿಟ್ಟಿನಲ್ಲಿ ರೈತರು ನೈಸರ್ಗಿಕವಾಗಿ ಸಿಗುವ ಎಲ್ಲ ಸಂಪನ್ಮೂಲಗಳನ್ನು ಬಳಸಿ ಪ್ರಕೃತಿ ಮತ್ತು ಮಾನವನಿಗೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಸಾವಯವ ಮತ್ತು  ನೈಸರ್ಗಿಕ ಪದ್ಧತಿ ಅಳವಡಿಕೆ ಕುರಿತು ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಂಶೋಧನಾಗಳನ್ನು ಕೈಗೊಳ್ಳಲಾಗಿದ್ದು ರೈತರು ಅವುಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ಜಮೀನುಗಳಲ್ಲಿ ಸಾವಯವ ಕೃಷಿ ಕೈಗೊಳ್ಳುವುದಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಫೇ೧೦ ರವರೆಗೆ ೫ ದಿನಗಳ ಕಾಲ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ತಿಳಿಸಿದರು

ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ, ಐಸಿಎಆರ್ ಪರಿಶಿಷ್ಟ ಉಪಯೋಜನೆ ಅಡಿಯಲ್ಲಿ ನಡೆದ ಸುಸ್ಥಿರ ಕೃಷಿಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳು ಕುರಿತು ಐದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃ.ವಿ.ವಿ., ರಾಯಚೂರು ಹಣಕಾಸು ನಿಯಂತ್ರಣಾಧಿಕಾರಿಗಳು ಮತ್ತು ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಪ್ರಮೋದಕಟ್ಟಿ  ಮಾತನಾಡಿ ಶಿಕ್ಷಣವನ್ನ ಪಡೆದಂತಹ ಯುವಕ, ಯುವತಿಯರು ಇಂದು  ಕೃಷಿಯಿಂದ ದೂರವಾಗಿದ್ದಾರೆ ಯುವ ಸಮುದಾಯವನ್ನು ಮತ್ತೆ ಕೃಷಿ ಕ್ಷೇತ್ರಕ್ಕೆ ಆಕರ್ಷಿಸುವುದಕ್ಕೆ ಹಾಗೂ ಶುನ್ಯ ವೆಚ್ಚದಲ್ಲಿ ಹೆಚ್ಚಿನ ಅದಾಯವನ್ನು ತಂದು ಕೊಡುವ  ಸಾವಯವ ಪದ್ಧತಿಯನ್ನು ಕೈಗೊಳ್ಳುವುದಕ್ಕೆ ವಿಶ್ವವಿದ್ಯಾಲಯವು ತರಬೇತಿ ಹಾಗೂ ತಾಂತ್ರಿಕ ಮಾಹಿತಿ ನೀಡುವುದಕ್ಕೆ ಅನೇಕ ತರಬೇತಿಗಳನ್ನು ಅಯೋಜಿಸಲಾಗುತ್ತಿದೆ ತರಬೇತಿಯ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಜಾಗೃತಿದೇಶಮಾನ್ಯ. ಸಾವಯವಕೃಷಿ  ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ.ಎ. ಬಸವಣ್ಣೆಪ್ಪ, ಪರಿಸರ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ, ಹಿರಿಯ ವಿಜ್ಞಾನಿಗಳಾದ ಡಾ. ಹನುಮಂತಪ್ಪ , ಶ್ರೀಹರಿ, ಡಾ. ಕಾಂಬಳೆ , ಆನಂದ ಶಂಕರ ,ವೆಂಕಣ್ಣಗೌಡ .ಆರ್,ಹಾಗೂ ರೈತರು ಭಾಗವಹಿಸಿದರು

Share and Enjoy !

Shares