ಸಚಿವ ಹೆಚ್. ಸಿ. ಮಹಾದೇವಪ್ಪರಿಗೆ ಲೋಕಸಭೆ ಟಿಕೆಟ್ ನೀಡಬಾರದು.

Share and Enjoy !

Shares

ಸಿರುಗುಪ್ಪ, ಫೆ-07: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ. ಮಹಾದೇವಪ್ಪ ಇವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂದು ಛಲವಾದಿ ಮಹಾಸಭಾ ಪದಾಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು

ನಗರದ ಆದೋನಿ ರಸ್ತೆ ಬಳಿ ಇರುವ ಛಲವಾದಿ ಮಹಾಸಭಾ ಕಾರ್ಯಾಲಯದಲ್ಲಿ ತಾಲೂಕು ಚಲವಾದಿ ಮಹಾಸಭಾ ಪದಾಧಿಕಾರಿಗಳು ಬುಧವಾರ ಸಂಜೆ 6:00 ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ತಾಲೂಕು ಅಧ್ಯಕ್ಷ ಬಿ.ಸಣ್ಣ ರಾಮಯ್ಯ ಮಾತನಾಡಿ ಸಚಿವ ಹೆಚ್ ಸಿ ಮಹದೇವಪ್ಪ ಹಿಂದುಳಿದ ದಲಿತ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಅವರನ್ನು ಒತ್ತಾಯ ಮಾಡಿ ಲೋಕಸಭೆಯ ಟಿಕೆಟ್ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಿದರೆ ಇಲ್ಲಿ ನಮ್ಮ ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಕುಂಠಿತವಾಗುತ್ತದೆ ಕಾರಣ ಅವರನ್ನು ರಾಜ್ಯ ರಾಜಕೀಯದಲ್ಲಿಯೇ ಇರಿಸಬೇಕು ಅವರಿಗೆ ಯಾವುದೇ ಕಾರಣಕ್ಕೂ ದೆಹಲಿಯ ಲೋಕಸಭೆ ಚುನಾವಣೆಯ ಟಿಕೆಟ್ ನೀಡಬಾರದು ಎಂದರು.

ತಾಲೂಕು ಉಪಾಧ್ಯಕ್ಷ ಜಿ ತಮ್ಮಯ್ಯ ಮಾತನಾಡಿ ಸಚಿವ ಮಹದೇವಪ್ಪ ಎಲ್ಲಾ ಹಿಂದುಳಿದ ವರ್ಗಗಳಿಗೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ಕೇಂದ್ರ ರಾಜಕೀಯಕ್ಕೆ ಕಳುಹಿಸುವುದರಿಂದ ರಾಜ್ಯ ಸರ್ಕಾರದಲ್ಲಿ ತೊಂದರೆಯಾಗುತ್ತದೆ ಮತ್ತು ಹಿಂದುಳಿದವರ ಮತಗಳು ಛಿಧ್ರವಾಗುತ್ತವೆ ಆದ್ದರಿಂದ ಅವರನ್ನು ರಾಜ್ಯ ಸರ್ಕಾರದಲ್ಲಿಯೇ ಉಳಿಸಬೇಕು ಎಂದರು. ಈ ಸಂದರ್ಭದಲ್ಲಿ  ಮುಖಂಡರು ಮಾತನಾಡಿ ಸಚಿವರಿಗೆ ಯಾವುದೇ ಕಾರಣಕ್ಕೂ ಲೋಕಸಭೆಯ ಟಿಕೆಟ್ ಒತ್ತಾಯ ಮಾಡಿಕೊಡಬಾರದು ಎಂದು ಆಗ್ರಹ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಯುವ ಅಧ್ಯಕ್ಷ ಹೆಚ್. ಗಣೇಶ್,  ಪ್ರಧಾನ ಕಾರ್ಯದರ್ಶಿ ಸಿ. ಶಿವರಾಂ, ಯುವ ಪ್ರಧಾನ ಕಾರ್ಯದರ್ಶಿ ಮುದಿಯಪ್ಪ, ಯುವ ಉಪಾಧ್ಯಕ್ಷ ಸಿ.ಲಿಂಗಪ್ಪ  ಯುವ ಉಪಾಧ್ಯಕ್ಷ ಸಿ. ಹನುಮಂತ, ಗಿರೀಶ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share and Enjoy !

Shares