ಪ್ರೇಮಿಗಳ ವಾರದ 3ನೇ ದಿನ ಚಾಕೋಲೆಟ್ ಡೇ, ಏನಿದರ ವಿಶೇಷತೆ?

Share and Enjoy !

Shares

ಫೆಬ್ರವರಿ ತಿಂಗಳನ್ನು ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಒಂದು ವಾರ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ವಾರ ಫೆಬ್ರವರಿ 07 ರಂದು ಪ್ರಾರಂಭವಾಗಿ ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ. ಫೆಬ್ರವರಿ 9ರಂದು ಚಾಕಲೇಟ್ ಡೇ(Chocolate Day) ಆಚರಿಸಲಾಗುತ್ತದೆ. ಪ್ರೇಮಿಗಳ ವಾರದ 3ನೇ ದಿನ ಚಾಕೋಲೆಟ್ ಡೇ ವಿಶೇಷತೆ ಏನು?

ಪ್ರತಿದಿನ ನಿಯಮಿತವಾಗಿ ಡಾರ್ಕ್ ಚಾಕ್ಲೇಟ್ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದರಿಂದ ರಕ್ತದ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲದೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ. ಡಾರ್ಕ್ ಚಾಕಲೇಟ್ ನಲ್ಲಿ ನಮ್ಮ ದೇಹದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೂರಮಾಡುವ ಗುಣವಿದೆ.

ಹೀಗಾಗಿ ಸಂತೋಷದ ಕ್ಷಣವನ್ನು ಆನಂದಿಸಲು ಬಹುತೇಕ ಜನ ಚಾಕೋಲೆಟ್ ಹಂಚಿಕೊಳ್ಳುತ್ತಾರೆ. ಚಾಕೋಲೆಟ್ ತಿನ್ನಲು ವಯಸ್ಸಿನ ಮಿತಿ ಇಲ್ಲ. ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ನೆಚ್ಚಿನ ಸಿಹಿ ಇದಾಗಿದೆ.

ಚಾಕೋಲೆಟ್ ಎಂದರೆ ಸಿಹಿ… ಚಾಕೋಲೆಟ್ ಅಂದರೆ ಮಾಧುರ್ಯ. ಪ್ರತಿಯೊಂದು ಸಂಬಂಧವೂ ಪ್ರೀತಿಯ ಮಾಧುರ್ಯವನ್ನು ಹುಡುಕುತ್ತದೆ. ಗೆಳೆಯ-ಗೆಳತಿ, ಗಂಡ-ಹೆಂಡತಿ ಅಥವಾ ಸ್ನೇಹ ಸಂಬಂಧವೇ ಆಗಿರಲಿ ಅಲ್ಲೊಂದು ಮಾಧುರ್ಯವಿರುತ್ತದೆ. ಹೀಗಾಗಿ ಜನರು ಚಾಕೋಲೆಟ್ ಡೇ ಅನ್ನು ಕಂಡುಹಿಡಿದರು. ಚಾಕೋಲೆಟ್ ತಿನ್ನುವುದರಿಂದ ಪ್ರೇಮ ಜೀವನ ಉತ್ತಮ… ಪ್ರೇಮಿಗಳ ವಾರದ ಮೂರನೇ ದಿನದಂದು ಚಾಕೋಲೆಟ್ ದಿನವನ್ನು ಆಚರಿಸಲು ಹಲವು ಕಾರಣಗಳನ್ನು ನೀಡಲಾಗಿದ್ದರೂ, ಚಾಕೋಲೆಟ್ ತಿನ್ನುವುದು ಪ್ರೀತಿಯ ಜೀವನವನ್ನು ಉತ್ತಮಗೊಳಿಸುತ್ತದೆ ಮತ್ತು ಚಾಕೋಲೆಟ್ ದೇಹಕ್ಕೆ ಶಕ್ತಿಯನ್ನು ಒದಗಿಸುವ ಥಿಯೋಬ್ರೊಮಿನ್ ಮತ್ತು ಕೆಫೀನ್ ಅನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಚಾಕೋಲೆಟ್ ತಿನ್ನುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ, ಇದು ನಮಗೆ ವಿಶ್ರಾಂತಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಹಿಳೆಯರಿಗೆ ಚಾಕೋಲೆಟ್ ಹೆಚ್ಚು ಇಷ್ಟ ಕೆನಡಾದ ಸಮೀಕ್ಷೆಯ ಪ್ರಕಾರ, ಹೂವುಗಳು, ಮದ್ಯ ಮತ್ತು ದೈಹಿಕ ಸಂಬಂಧಗಳಿಗಿಂತ ಮಹಿಳೆಯರು ಚಾಕೋಲೆಟ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಸಮೀಕ್ಷೆಯನ್ನು 13 ದೇಶಗಳಲ್ಲಿ ನಡೆಸಲಾಗಿದೆ. ಇದರಲ್ಲಿ 69.1 ಪ್ರತಿಶತ ಮಹಿಳೆಯರು ತಮ್ಮ ಮೊದಲ ಆಯ್ಕೆ ಚಾಕೋಲೆಟ್ ಎಂದು ಹೇಳಿದ್ದಾರೆ. ಚಾಕೋಲೆಟ್ ತಿಂದ ನಂತರ ಹುಡುಗಿಯರು ಸಂತೋಷಪಡುತ್ತಾರೆ ಎಂದು ನಂಬಲಾಗಿದೆ. ಇದರಲ್ಲಿರುವ ಸಿಹಿಯು ಅವರ ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತದೆ.

ಚಾಕೋಲೆಟ್ ಇತಿಹಾಸ ಚಾಕೋಲೆಟ್ ಎಲ್ಲರ ಅಚ್ಚುಮೆಚ್ಚಿನ ತಿನಿಸು. ಚಾಕೋಲೆಟ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಾವಿರಾರು ವರ್ಷಗಳಿಂದ ಚಾಕೋಲೆಟ್ ಅನ್ನು ಅಸಾಧಾರಣ ಪ್ರಯೋಜನಗಳಿಗಾಗಿ ಬಳಕೆ ಮಾಡಲಾಗುತ್ತದೆ. ಮೊದಲು ಕಹಿ ಪಾನೀಯವಾಗಿ ಸೇವಿಸಿದ ಚಾಕೋಲೆಟ್, ಇಂದು ರುಚಿಕರವಾದ ಮಿಠಾಯಿಯಾಗಿ ರೂಪಾಂತರಗೊಂಡಿದೆ.

ಚಾಕೋಲೆಟ್ ದಿನ ಪ್ರಾಮುಖ್ಯತೆ ಅನೇಕ ವರ್ಷಗಳಿಂದ ವ್ಯಾಲೆಂಟೈನ್ಸ್ ಡೇ ಮತ್ತು ಚಾಕೋಲೆಟ್ಗಳು ಹೆಣೆದುಕೊಂಡಿವೆ. ಹೀಗಾಗಿ ವಿಶ್ವದಲ್ಲಿ ಪ್ರತಿ ವರ್ಷ ಫೆಬ್ರವರಿ 9 ರಂದು ಚಾಕೋಲೆಟ್ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಹಂಚಿಕೊಳ್ಳುವ ಮೂಲಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ತೋರಿಸಲು ಒಂದು ಮಾರ್ಗವಾಗಿದೆ. ಇದು ರುಚಿ ಮೊಗ್ಗುಗಳನ್ನು ಒಳಗೊಂಡಿರುವ ಕಾರಣ ಇದು ಇಡೀ ಪ್ರೇಮಿಗಳ ವಾರದ ಅತ್ಯಂತ ಪಾಲಿಸಬೇಕಾದ ದಿನಗಳಲ್ಲಿ ಒಂದಾಗಿದೆ. ಪ್ರೇಮಿಗಳ ವಾರ ಆರಂಭ ಪ್ರೇಮಿಗಳ ವಾರದಲ್ಲಿ ಫೆಬ್ರವರಿ 7ರಂದು ರೋಸ್ ಡೇ (Rose Day), ಫೆಬ್ರವರಿ 8ಕ್ಕೆ ಪ್ರೇಮ ಪ್ರಸ್ತಾಪದ ದಿನ(Propose Day), ಫೆಬ್ರವರಿ 9ರಂದು ಚಾಕಲೇಟ್ ಡೇ(Chocolate Day), ಫೆಬ್ರವರಿ 10ರಂದು ಟೆಡ್ಡಿ ಡೇ (Teddy Day), ಫೆಬ್ರವರಿ 11ಕ್ಕೆ ಪ್ರಾಮಿಸ್ ಡೇ (Promise Day), ಫೆಬ್ರವರಿ 12ಕ್ಕೆ ಅಪ್ಪಿಕೊಳ್ಳುವ ದಿನ (Hug Day), ಫೆಬ್ರವರಿ 13ರಂದು ಚುಂಬಿಸುವ ದಿನ (Kiss Day) ಹಾಗೂ ಫೆಬ್ರವರಿ 14ರಂದು ಪ್ರೇಮಿಗಳ ದಿನ (Valentine’s Day)ವನ್ನು ಆಚರಿಸಲಾಗುತ್ತದೆ.

Share and Enjoy !

Shares