ಯಪ್ಪಾ ಖಾರಾ ಅಂದರೆ ಖಾರಾ.. ಮನೆಯಲ್ಲೇ ಮಾಡಿ ಸ್ಪೈಸಿ ಚಿಕನ್ ಬಿರಿಯಾನಿ…

Share and Enjoy !

Shares

ನಮ್ಮ ನಡುವೆ ಬಿರಿಯಾನಿಯನ್ನು ಇಷ್ಟ ಪಟ್ಟು ತಿನ್ನುವವರ ಸಂಖ್ಯೆ ತುಂಬಾ ಇದೆ. ಬಿರಿಯಾನಿಯಲ್ಲಿ ಚಿಕನ್‌ ಬಿರಿಯಾನಿ ತಿನ್ಬೇಕು ಅಂದ್ರೆ ಇಡೀ ದಿನ ಊಟ ಬಿಟ್ಟು ಬಿರಿಯಾನ್ನೇ ಹೊಟ್ಟೆ ತುಂಬಾ ತಿನ್ನುವವರಿಗೇನು ಕಡಿಮೆ ಇಲ್ಲ. ಇದನ್ನು ಮನೆಯಲ್ಲಿ ಮಾಡಿ ತಿನ್ನುವುದಕ್ಕಿಂತ ಹೊರಗಡೆ ತಿನ್ಬೇಕು ಅನ್ನೋದು ಹಲವರ ಅಭಿಪ್ರಾಯ. ಕೆಲವರು ತಮ್ಮ ರುಚಿಗೆ ಅನುಗುಣವಾಗಿ ಹೋಟೆಲ್‌ಗಳನ್ನು ಆಯ್ಕೆ ಮಾಡಿಕೊಂಡು ಬಿಟ್ಟಿರುತ್ತಾರೆ.

ಒಂದು ವೇಳೆ ಚಿಕನ್ ಬಿರಿಯಾನಿ ತಿನ್ಬೇಕು ಅನ್ನೋ ಮನಸ್ಸಾದರೇ ತಮ್ಮ ನೆಚ್ಚಿನ ಹೋಟೆಲ್ ಹುಡುಕಿಕೊಂಡು ಹೋಗ್ತಾರೆ. ಆದರೆ ಮನೆಯಲ್ಲೇ ಇದನ್ನು ರುಚಿಯಾಗಿ ನೀವು ಮಾಡಬಹುದು. ಹಾಗಾದರೆ ನಿಮ್ಮ ಮನೆಯಲ್ಲಿ ನೀವೇನಾದ್ರು ಬಿರಿಯಾನಿ ಮಾಡಬೇಕು ಹೊಟ್ಟೆ ತುಂಬಾ ತಿನ್ಬೇಕು ಅನ್ನೋ ಆಸೆ ಆಗಿದ್ದರೆ ಸ್ಪೈಸಿ ಚಿಕನ್ ಬಿರಿಯಾನಿಯನ್ನೊಮ್ಮೆ ಟ್ರೈ ಮಾಡಿ.

ಒಂದು ವೇಳೆ ಚಿಕನ್ ಬಿರಿಯಾನಿ ತಿನ್ಬೇಕು ಅನ್ನೋ ಮನಸ್ಸಾದರೇ ತಮ್ಮ ನೆಚ್ಚಿನ ಹೋಟೆಲ್ ಹುಡುಕಿಕೊಂಡು ಹೋಗ್ತಾರೆ. ಆದರೆ ಮನೆಯಲ್ಲೇ ಇದನ್ನು ರುಚಿಯಾಗಿ ನೀವು ಮಾಡಬಹುದು. ಹಾಗಾದರೆ ನಿಮ್ಮ ಮನೆಯಲ್ಲಿ ನೀವೇನಾದ್ರು ಬಿರಿಯಾನಿ ಮಾಡಬೇಕು ಹೊಟ್ಟೆ ತುಂಬಾ ತಿನ್ಬೇಕು ಅನ್ನೋ ಆಸೆ ಆಗಿದ್ದರೆ ಸ್ಪೈಸಿ ಚಿಕನ್ ಬಿರಿಯಾನಿಯನ್ನೊಮ್ಮೆ ಟ್ರೈ ಮಾಡಿ.

ಏನಿದು ಸ್ಪೈಸಿ ಚಿಕನ್ ಬಿರಿಯಾನಿ ಅಂದ್ರಾ? ಹೆಸರೇ ಹೇಳುವಂತೆ ಇದು ತುಂಬಾ ಖಾರವಾಗಿರುತ್ತದೆ. ಮಾಂಸಾಹಾರ ಅಂದ್ರೆ ಕೊಂಚ ಖಾರವಾಗಿದ್ರೆನೇ ಅದನ್ನು ತಿನ್ನಲು ಮಜಾ. ನೀವು ಕಡಿಮೆ ಖಾರವನ್ನು ತಿನ್ನುತ್ತಿದ್ದರೆ ಮನೆಯಲ್ಲೇ ತಯಾರಿಸುವುದರಿಂದ ಖಾರವನ್ನು ಕಡಿಮೆ ಮಾಡಬಹುದು. ಹಾಗಾದರೆ ಮತ್ಯಾಕ್ ತಡ ಸ್ಪೈಸಿ ಚಿಕನ್ ಬಿರಿಯಾನಿಯನ್ನು ಮಾಡುವುದು ಹೇಗೆ ಅನ್ನೋದನ್ನು ನೋಡಿ ಬಿಡೋಣ.

ಸ್ಪೈಸಿ ಚಿಕನ್ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು:-

*ಚಿಕನ್ 1 ಕೆಜಿ

*ಬಾಸುಮತಿ ರೈಸ್ 1/4 ಕೆಜಿ

*ಖಾರದ ಪುಡಿ 2 ಸ್ಪೂನ್

*ಕಾಳುಮೆಣಸು 19 ಕಾಳು

* ಲವಂಗಾ 6

*ಏಲಕ್ಕಿ 2

* ಚೆಕ್ಕೆ 3 ಚಿಕ್ಕ ತುಂಡು

* ಬಿರಿಯಾನಿ ಎಲೆ 3

* ಸೋಂಪು ಸ್ವಲ್ಪ

* ಬಿಯಾನಿ ಹೂವು, ಮೊಗ್ಗು 2

*ಅರಿಶಿಣ *ಚಿಕನ್ ಬಿರಿಯಾನಿ ಪೌಡರ್

*ಎಣ್ಣೆ

* ಉಪ್ಪು

*ಒಣ ಮೆಣಸಿನಕಾಯಿ 4

*ನಿಂಬೆ ಹಣ್ಣು 2

*ಕೊತ್ತೊಂಬರಿ ಸ್ವಲ್ಪ

*ಪುದೀನಾ ಸ್ವಲ್ಪ

*ಶುಂಠಿ ಬೆರಳಷ್ಟು ಎರಡು ತುಂಡು

*ಬೆಳ್ಳುಳ್ಳಿ 9 ಎಸಳು

*ಈರುಳ್ಳಿ 4

*ಟೊಮೆಟೊ 4

* ಹುಣಸೆ ಹಣ್ಣು ಸ್ವಲ್ಪ

* ಗೋಡಂಬಿ 6

*ಬಾದಾಮಿ 4

ತಯಾರಿಸುವ ವಿಧಾನ:- *ಚಿಕನ್ ಚೆನ್ನಾಗಿ ತೊಳೆದು ಅದಕ್ಕೆ ಎರಡು ನಿಂಬೆ ರಸ, ಖಾರದಪುಡಿ, ಉಪ್ಪು ಹಾಕಿ ಸ್ವಲ್ಪ ಪುದೀನ ಹಾಕಿ ಪಾತ್ರೆ ಮುಚ್ಚಿಡಿ * ಒಂದು ಪಾತ್ರೆಯಲ್ಲಿ ಎರಡು ಲೋಟ ಬಾಸುಮತಿ ಅಕ್ಕಿಗೆ ಒಂದುವರೆ ಲೋಟ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಏಲಕ್ಕಿ, ಕಾಳುಮೆಣಸು, ಲವಂಗಾ, ಬಿರಿಯಾನಿ ಎಲೆ, ಸ್ವಲ್ಪ ಸೋಂಪು, ಹೂವು, ಮೊಗ್ಗು ಹಾಕಿ ಕುದಿಯಲು ಬಿಡಿ. * ಒಂದು ಮಿಕ್ಸಿ ಜಾರ್‌ಗೆ ಶುಂಠಿ ಬೆಳ್ಳುಳ್ಳಿ ಕೊತ್ತೊಂಬ್ಬರಿ ಸೊಪ್ಪು ಹಾಕಿ ಪೇಸ್ಟ್ ಮಾಡಿಕೊಂಡು ಒಂದೆಡೆ ತೆಗೆದಿಡಿ.

* ಬಳಿಕ ಈರುಳ್ಳಿ, ಟೊಮೆಟೋ ಪ್ರತ್ಯೇಕವಾಗಿ ಪೇಸ್ಟ್ ಮಾಡಿಕೊಳ್ಳಿ. * ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು, ಸ್ವಲ್ಪ ಬಿಸಿ ಆದ ತಕ್ಷಣ ಅದಕ್ಕೆ, ಚೆಕ್ಕೆ, ಲವಂಗಾ, ಮೆರಣಸುಕಾಳು, ಒಣ ಮೆಣಸಿನಕಾಯಿ ಹಾಕಿ ಹುರಿದು ಪೌಡರ್ ಮಾಡಿ. * ಮತ್ತೊಂದು ತವೆಯಲ್ಲಿ ತುಂಡು ಮಾಡಿದ ಬಾದಾಮಿ, ಗೋಡಂಬಿ ಕೆಂಪಾಗುವವರೆಗೂ ಹುರಿದು ತೆಗೆದಿಡಿ. *ಜೊತೆಗೆ ಎರಡು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಕೆಂಪಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. * ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ, ಶುಂಠಿ ಬೆಳ್ಳುಳ್ಳಿ ಕೊತ್ತೊಂಬ್ಬರಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ. * ಬಳಿಕ ಈರುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದು, ಟೊಮೆಟೊ ಪೇಸ್ಟ್ ಹಾಕಿ ಬೇಯಿಸಿ. * ಬಳಿಕ ಇದಕ್ಕೆ ಚಿಕನ್ ಹಾಕಿ ಚೆನ್ನಾಗಿ ಕದಡಿ. * ನಂತರ ಇದಕ್ಕೆ ಖಾರದ ಪುಡಿ, ಹುಣಸೆ ಹಣ್ಣಿನ ರಸ, ರುಬ್ಬಿಕೊಂಡ ಪೌಡರ್, ಚಿಕನ್ ಬಿರಿಯಾನಿ ಪೌಡರ್, ಪುದೀನಾ, ಕೊತ್ತೊಂಬ್ಬರಿ ಸೊಪ್ಪು, ಅರಿಶಿಣ, ಉಪ್ಪು ಹಾಕಿ. ಚೆನ್ನಾಗಿ ಕದಡಿ ಒಂದು ಟೀ ಲೋಟದಲ್ಲಿ ಎರಡು ಬಾರಿ ನೀರು ಹಾಕಿ ಮೂರು ವಿಸಿಲ್ ಆಗುವವರೆಗೂ ಕುಕ್ಕರ್ ಮುಚ್ಚಿಡಿ. * ಬಳಿಕ ಉರಿ ಕಡಿಮೆ ಮಾಡಿ ಮುಚ್ಚಳ ತೆಗೆದು ಚಿಕನ್ ಬೆಂದಿರುವ ಬಗ್ಗೆ ಖಾತರಿಪಡಿಸಿಕೊಳ್ಳಿ. ಚಿಕನ್ ಬೆಂದಿದ್ದರೆ ಅದರಲ್ಲಿ ಸ್ವಲ್ಪ ಚಿಕನ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. * ಇತ್ತ ರೈಸ್ ಸಂಪೂರ್ಣವಾಗಿ ಬೇಯದಂತೆ ನೋಡಿಕೊಂಡು ಗ್ಯಾಸ್ ಆಫ್ ಮಾಡಿ. ಈ ರೈಸ್‌ನಲ್ಲಿ ಸ್ವಲ್ಪ ರೈಸ್ ತೆಗೆದು ಚಿಕನ್ ಕ್ರೇವಿಗೆ ಹಾಕಿ ಚೆನ್ನಾಗಿ ಹರಡಿ. (ನೆನಪಿರಲಿ ಇದನ್ನು ಕದಡಬೇಡಿ) * ಬಳಿಕ ಹುರಿದ ಈರುಳ್ಳಿ, ಗೋಡಂಬಿ, ಬಾದಾಮಿ ಹಾಕಿ ಅದರ ಮೇಲೆ ಹರಡಿ. * ಬಳಿಕ ಇದರ ಮೇಲೆ ನೀವು ತೆಗೆದಿಟ್ಟುಕೊಂಡ ಕ್ರೇವಿ ಹಾಕಿ, ಮತ್ತೆ ರೈಸ್ ಹಾಕಿ ಅದರ ಮೇಲೆ ಮತ್ತೆ ಈರುಳ್ಳಿ, ಗೋಡಂಬಿ, ಬಾದಾಮಿ ಹಾಕಿ ಪುದೀನ ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ ಐದು ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ. * ಸ್ವಲ್ಪ ಹೊತ್ತು ಬಿಟ್ಟರೆ ಬಿಸಿ ಬಿಸಿ ಸ್ಪೈಸಿ ಚಿಕನ್ ಬಿರಿಯಾನಿ ಸವಿಯಲು ಸಿದ್ದ.

Share and Enjoy !

Shares