ಗ್ರಾಮ ಒನ್ ಕೇಂದ್ರ: ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ, ವಿವರ ನೋಡಿ

Share and Enjoy !

Shares

ಬೆಂಗಳೂರು, ಫೆಬ್ರವರಿ 12: ಕೇಂದ್ರ ಇಲ್ಲವೇ ರಾಜ್ಯ ಸರ್ಕಾರಗಳು (Central government) ಆಗಲಿ ತಾವು ರೂಪಿಸುವ ಯೋಜನೆಗಳು ಜನರಿಗೆ ತಲುಪಬೇಕಾದರೆ ಸೇವಾ ಕೇಂದ್ರಗಳ ಪಾತ್ರ ಮುಖ್ಯವಾಗಿರುತ್ತದೆ. ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿರುವ ‘ಸಮಗ್ರ ನಾಗರಿಕ ಸೇವಾ ಕೇಂದ್ರ’/ ಗ್ರಾಮ ಒನ್ ಕೇಂದ್ರ’ಗಳ ಪ್ರಾಂಚೈಸಿಗಾಗಿ ಅರ್ಜಿ ಕರೆಯಲಾಗಿದೆ.

ಹೌದು, ಜನರಿಗೆ ಅಗತ್ಯ ಸೇವೆ ನೀಡಲು ಇರುವ ಸೇವಾ ಕೇಂದ್ರ (ಗ್ರಾಮ ಒನ್)ಗಳನ್ನು ತೆರೆಯಲು ಇಚ್ಛಿಸುವವರು ಈ ಕೂಡಲೇ ಅಗತ್ಯ ಮಾಹಿತಿ ನೋಡಿಕೊಂಡು ಅರ್ಜಿ ಸಲ್ಲಿಸಬೇಕಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸರ್ಕಾರಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ ಬಳಿಕ ‘ಸೇವಾ ಕೇಂದ್ರ’ಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ.ಸರ್ಕಾದ ಯೋಜನೆ ಪಡೆಯಲು ಜನರು ಮೊದಲ ಗ್ರಾಮ ಒನ್ ಗಳಿಗೆ ತೆರಳಬೇಕಿದೆ. ಇಂತಹ ಕೇಂದ್ರ ತೆರೆಯಲು ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ಪ್ರಾಂಚೈಸಿ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಕೆಗೆ ಅಗತ್ಯವಾದ ದಾಖಲೆಗಳು?

* ಪ್ಯಾನ್ ಕಾರ್ಡ್
* ಆಧಾರ್ ಕಾರ್ಡ್

* ನಿಮ್ಮ ಬ್ಯಾಂಕ್ ಖಾತೆಯ ವಿವರ

* ಪ್ರಾಂಚೈಸಿ ಆರಂಭಿಸಿಲು ಉದ್ದೇಶಿಸಿರುವ ಸ್ಥಳ, ಗಣಕಯಂತ್ರ ಇನ್ನಿತರ ಉಪಕರಣಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15ದಿನ ವಾಗಿದೆ. ಕೊನೆಯ ದಿನದವರೆಗೂ ಕಾಯದೇ ಆಸಕ್ತರು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಗ್ರಾಮ ಒನ್ ಆರಂಭಿಸಬೇಕೆಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಎಲ್ಲಿ? ತಿಳಿಯಿರಿ ಆಸಕ್ತರು ಅಭ್ಯರ್ಥಿಗಳು ಗ್ರಾಮ ಒನ್ ಪ್ರಾಂಚೈಸಿ ಪಡೆಯಲು ಇಲ್ಲಿ ನೀಡಲಾಗಿರುವ https://kal-mys.gramaone.karnataka.gov.in/ ಲಿಂಕ್ ಗೆ ಭೇಟಿ ನೀಡಬೇಕು. ಗ್ರಾಮ ಒನ್ ಫ್ರಾಂಚೈಸಿ ಆರಂಭಕ್ಕೆ ಬೇಕಾದ ಎಲ್ಲಾ ದಾಖಲಾಗಿಗಳನ್ನು ಸೂಕ್ತ ಮಾಹಿಗಳನ್ನು ನಮೂದಿಸಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ.

ಎಲ್ಲೆಲ್ಲಿ ಪ್ರಾಂಚೈಸಿ ಆರಂಭಿಸಬಹುದು?

* ನಿಟ್ಟೂರು

* ಕೆ.ಬಡಗ

* ಬಿ.ಶೆಟ್ಟಿಗೇರಿ

* ಕಿರುಗೂರು

* ಬಲ್ಯಮಂಡೂರು

* ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ

* ಸೋಮವಾರಪೇಟೆಯ ಗರ್ವಾಲೆ ಕಾಕೋಟು ಪರಂಬು, ಬೇಟೋಳಿ

* ಮಡಿಕೇರಿಯ ಹೊಕ್ಕೇರಿ ಹಾಕತ್ತೂರು ಮತ್ತು ಕರಿಕೆಯಲ್ಲಿ ಪ್ರಾಂಚೈಸಿ ನಿರ್ಮಿಸಬಹುದು.

ಹೆಚ್ಚಿನ ಮಾಹಿತಿಗೆ ಹೀಗೆ ಮಾಡಿ ಒಟ್ಟಾರೆಯಾಗಿ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 14 ಗ್ರಾಮ ಪಂಚಾಯತ್ ಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ’/ ಗ್ರಾಮ ಒನ್ ಕೇಂದ್ರ’ ಗಳ ಪ್ರಾಂಚೈಸಿ ಆರಂಭಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಾಂಚೈಸಿಗಳು ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ಗೆ https://kal-mys.gramaone.karnataka.gov.in/ ಭೇಟಿ ಕೊಡಿ. ಇಲ್ಲವೇ ಸಹಾಯವಾಣಿ 9148712473 ಇ-ಮೇಲ್ ಐಡಿ care@blsinternational.net ಜಿಲ್ಲಾಧಿಕಾರಿಗಳ ಕಚೇರಿ ಸಮಾಲೋಚಕರು 9611657344/ 9900385301ನ್ನು ಸಂಪರ್ಕಿಸುವಂತೆ ಸರ್ಕಾರ ತಿಳಿಸಿದೆ.

Share and Enjoy !

Shares