ಸಂಗಾತಿಗೆ ಸರ್ಪ್ರೈಸ್; ಪ್ರೇಮಿಗಳ ದಿನಕ್ಕೆ ಏನೆಲ್ಲ ಉಡುಗೊರೆ ಕೊಡಬಹುದು?

Share and Enjoy !

Shares

Valentine’s Day Gifts: ಪ್ರೇಮಿಗಳ ದಿನಕ್ಕೆ ಕೇವಲ ಒಂದೇ ಒಂದು ದಿನ ಉಳಿದಿದೆ. ನಿಮ್ಮ ಪ್ರೀತಿಯ ಸಂಗಾತಿಗೆ ಏನಾದರೂ ವಿಶೇಷವಾಗಿ ಗಿಫ್ಟ್​ ಕೊಟ್ಟು ಆಕೆಯನ್ನು ಇಂಪ್ರೆಸ್ ಮಾಡಬೇಕೆಂದು ನಿಮಗೆ ಆಸೆಯಿದೆಯೇ? ಅದಕ್ಕಾಗಿ ಯಾವ ರೀತಿಯ ಉಡುಗೊರೆ ಕೊಡಬಹುದು ಎಂಬ ಕುರಿತು ಕೆಲವು ಸಲಹೆಗಳು ಇಲ್ಲಿವೆ.

ಕಳೆದ ವಾರದಿಂದ ಇಂದಿನವರೆಗೂ ಪ್ರೇಮಿಗಳ ವಾರದಲ್ಲಿ (Valentine’s Week) ವಿವಿಧ ದಿನಗಳನ್ನು ಆಚರಿಸಿದ್ದಾಯಿತು. ಈಗ ಪ್ರೇಮಿಗಳ ವಾರಕ್ಕೆ ಒಂದು ದಿನ ಮಾತ್ರ ಉಳಿದಿದೆ. ರೋಸ್​ ಡೇಯಿಂದ (Rose Day) ಕಿಸ್ ಡೇವರೆಗೂ (Kiss Day) ಎಲ್ಲ ದಿನಗಳಲ್ಲೂ ವಿವಿಧ ರೀತಿಯಲ್ಲಿ  ಪ್ರೀತಿ  ಯನ್ನು ಸೆಲಬ್ರೇಟ್ ಮಾಡುವ ಪ್ರೇಮಿಗಳು ಫೆ. 14ರಂದು ಪ್ರೇಮಿಗಳ ದಿನವನ್ನು (Valentine’s Day 2024) ಆಚರಿಸುತ್ತಾರೆ. ಈ ವೇಳೆ ನಮ್ಮ ಸಂಗಾತಿ ಮೆಚ್ಚುವಂತೆ ಯಾವ ರೀತಿಯ ಉಡುಗೊರೆ ನೀಡಬಹುದು ಎಂಬುದು ಹಲವು ಪ್ರೇಮಿಗಳು ತಲೆಕೆಡಿಸಿಕೊಳ್ಳುವ ವಿಷಯ. ನಿಮಗೂ ಆ ಬಗ್ಗೆ ಗೊಂದಲಗಳಿದ್ದರೆ ಕೆಲವು ಸಲಹೆಗಳು ಇಲ್ಲಿವೆ.

ಫೋಟೋ ಫ್ರೇಮ್:

ನಿಮ್ಮ ಸಂಗಾತಿಗೆ ಪರ್ಸನಲೈಸ್ ಮಾಡಿದ ಫೋಟೋ ಫ್ರೇಮ್ ನೀಡಬಹುದು. ನಿಮ್ಮ ಪ್ರೀತಿಗೆ ಭಾವನಾತ್ಮಕ ಸ್ಪರ್ಶ ನೀಡಲು ಕಸ್ಟಮೈಸ್ ಮಾಡಿದ ಫೋಟೋ ಫ್ರೇಮ್‌ ನೀಡಬಹುದು.

ಮೆತ್ತನೆಯ ಬ್ಲಾಂಕೆಟ್:

ನಿಮ್ಮ ಸಂಗಾತಿಯನ್ನು ಮೃದುವಾದ, ಮೆತ್ತನೆಯ, ಮುದ್ದಾದ ಹೊದಿಕೆಯೊಂದಿಗೆ ಬೆಚ್ಚಗಿನ ಮತ್ತು ಪ್ರೀತಿಯಿಂದ ಕಟ್ಟಿಹಾಕಲು ಅವರ ಇಷ್ಟದ ಬಣ್ಣದ ಬ್ಲಾಂಕೆಟ್ ನೀಡಿ.

ಪರಿಮಳಭರಿತ ಕ್ಯಾಂಡಲ್:

ನಿಮ್ಮ ಪ್ರೇಮಿಗೆ ಅವರಿಷ್ಟವಾದ ಪರಿಮಳದ ಕ್ಯಾಂಡಲ್ ಅನ್ನು ನೀಡಿ. ಇದನ್ನು ಬೆಳಗಿಸಿದಾಗ ಸುತ್ತಮುತ್ತಲೂ ಸುವಾಸನೆ ಹರಡಿ, ಆಹ್ಲಾದವನ್ನು ಉಂಟುಮಾಡುತ್ತದೆ. ಇದು ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತದೆ.

ಲವ್ ಲೆಟರ್:

ಪ್ರೀತಿ ಮತ್ತು ಮೆಚ್ಚುಗೆಯಿಂದ ತುಂಬಿದ ಹೃತ್ಪೂರ್ವಕ ಪ್ರೇಮಪತ್ರದೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ.

ಫೇವರಿಟ್ ಬುಕ್ ಅಥವಾ ಸಿನಿಮಾ:

ನಿಮ್ಮ ಸಂಗಾತಿಗೆ ಇಷ್ಟವಾದ ಪುಸ್ತಕ ಅಥವಾ ಸಿನಿಮಾದ ಸಿಡಿಯನ್ನು ಉಡುಗೊರೆಯಾಗಿ ನೀಡಿ.

ಪೇಂಟಿಂಗ್ಸ್:

ಕುಂಚಗಳೊಂದಿಗೆ ಮಾಡಿದ ಸುಂದರವಾದ ಪೇಂಟಿಂಗ್ ನೀಡಬಹುದು. ನಿಮ್ಮ ಕೈಯಾರೆ ಮಾಡಿದ ಪೇಂಟಿಂಗ್ ನೀಡಿದರೆ ಇನ್ನೂ ಉತ್ತಮ.

Share and Enjoy !

Shares