ಉತ್ತಮ ಮತ್ತು ಪಾರದರ್ಶಕ ಆಡಳಿತ, ಶೈಕ್ಷಣಿಕ ಪ್ರಗತಿ ನಮ್ಮ ಗುರಿ; ಯುವಕವೃಂದ

ಬಳ್ಳಾರಿ, ಫೆ.19;  ನಾಡಿನ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ 20224-2027ರ ಅವಧಿಯ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಸಜ್ಜಾಗಿರುವ `ಯುವಕವೃಂದ’ದ ಅಭ್ಯರ್ಥಿಗಳು ಮತ್ತು ಬೆಂಬಲಿತ ಅಭಿಮಾನಿಗಳು ಒಟ್ಟಾಗಿ ತ್ರಿಕಾಲಜ್ಞಾನಿ ಮರಿಸ್ವಾಮಿ ಮಠದಲ್ಲಿ ಶ್ರೀಗಳಿಗೆ ಹಾಗೂ ದಾಸೋಹಿ ಶರಣ ಸಕ್ಕರೆ ಕರಡೀಶನ ಸಮಾಧಿಗೆ ಸೋಮವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ತಂಡದ ನೇತೃತ್ವವಹಿಸಿರುವ ಮುಂಡಾಸದ ಮುಪ್ಪಣ್ಣ, ಹಾವಿನಹಾಳ್ ಶರಣಪ್ಪ, ಗುರುಪಾದಯ್ಯ ಕಲ್ಮಠ್, ಎಸ್.ಎಂ. ಷಡಕ್ಷರಯ್ಯಸ್ವಾಮಿ, ಎಚ್. ಪಾಲಾಕ್ಷರೆಡ್ಡಿ, ಕಸಪಾ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ಹಂಪನಗೌಡ, ವೀವಿ ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಬಸವರಾಜ್, ಹಾಲಿ ಅಧ್ಯಕ್ಷ ಆರ್. ರಾಮನಗೌಡ, ಹರಗಿನಡೋಣಿ ಮಹಾರುದ್ರಗೌಡರು, ಆರ್.ಎಚ್.ಎಂ. ಚನ್ನಬಸಯ್ಯ ಅವರು ಮಾತನಾಡಿ, ಹಾನಗಲ್ಲು ಶ್ರೀಕುಮಾರೇಶ್ವೆರರು ಮತ್ತು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಪ್ರಾರಂಭಿಸಿರುವ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 108 ವರ್ಷಗಳಾಗಿವೆ ಎಂದು ತಂಡವನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಮತ್ತು ಪಾರದರ್ಶಕ ಆಡಳಿತ, ಶೈಕ್ಷಣಿಕ ಅಭಿವೃದ್ಧಿ, ಹೊಸ ಕೋರ್ಸ್‍ಗಳ ಪ್ರಾರಂಭದ ಗುರಿಯ ಜೊತೆಯಲ್ಲಿ ದಾನಿಗಳ ವಂಶಸ್ಥರು ಮತ್ತು ಸಂಸ್ಥಾಪಕರ ಕುಟುಂಬದ ಸದಸ್ಯರಿಗೆ ಸ್ಪರ್ಧೆಗೆ ಆದ್ಯತೆ ನೀಡಿ ಮತ ಕೇಳುತ್ತಿದ್ದೇವೆ. ಸಂಘದ ಆಜೀವ ಸದಸ್ಯರು ಬದಲಾವಣೆಗಾಗಿ ಯುವಕವೃಂದ’ಕ್ಕೆ ಸ್ವಯಂ ಸ್ಪೂರ್ತಿಯಿಂದ ಬೆಂಬಲ ನೀಡುತ್ತಿದ್ದಾರೆ. ಸ್ಪಷ್ಟವಾದ ಬಹುಮತದ ವಿಶ್ವಾಸವಿದೆ ಎಂದರು.

ಸಂಘಧ ಆಜೀವ ಸದಸ್ಯರು `ಯುವಕವೃಂದ’ಕ್ಕೆ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಸದಸ್ಯರಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಖಂಡಿತವಾಗಿಯೂ ಒಳ್ಳೆಯ ಆಡಳಿತವನ್ನು ನೀಡುತ್ತೇವೆ. ಅಭ್ಯರ್ಥಿಗಳು ಆಜೀವ ಸದಸ್ಯರಿಂದ ಆಶೀರ್ವಾದ ಪಡೆಯಲು ಮನೆ ಮನೆ ಭೇಟಿ ನೀಡುವಾಗ ಮತ ನೀಡುವ ವಿಶ್ವಾಸ ವ್ಯಕ್ತಪಡಿಸಿ, ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ ಎಂದರು.ತಂಡದ ನೇತೃತ್ವವಹಿಸಿರುವ ಡಾ. ಕೆ. ಮಹಾಂತೇಶ್, ಡಾ. ಭಾಗ್ಯಲಕ್ಷ್ಮಿ ಮತ್ತು ನಾಡಗೌಡ್ರ ರುದ್ರಗೌಡ ಅವರು, ನಮ್ಮ ತಂಡಕ್ಕೆ ಬಹುತೇಕ ಆಜೀವ ಸದಸ್ಯರು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಬಾರಿಯ ಫಲಿತಾಂಶ ಆಶಾದಾಯಕವಾಗಿದ್ದು, ನಮ್ಮ ತಂಡವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ನಂಬಿಕೆ ಇದೆ. ತಂಡದಲ್ಲಿ ಉತ್ತಮ ಹಿನ್ನಲೆ ಹೊಂದಿರುವ, ಪ್ರತಿಭಾವಂತರನ್ನು, ವಿದ್ಯಾವಂತರನ್ನು ಹೊಸ ಅಭ್ಯರ್ಥಿಗಳನ್ನಾಗಿ ಪರಿಚಯಿಸಿರುವುದು ನಮ್ಮ ತಂಡಕ್ಕೆ ಆಶಾದಾಯಕವಾಗಿದೆ ಎಂದರು. ಕಾರ್ಯಕಾರಿ ಸಮಿತಿಯ ಸದಸ್ಯ ಟಿ. ವಿರೂಪಾಕ್ಷಗೌಡ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯುವಕವೃಂದ’ಕ್ಕೆ ಬೆಂಬಲ ನೀಡುವ ಮತ್ತು ಹಿತೈಷಿಗಳಾಗಿದ್ದ ಆಜೀವ ಸದಸ್ಯರು ಅನೇಕರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ತಂಡಕ್ಕೆ ಶುಭ ಹಾರೈಸಿದರು.   

ಯುವಕವೃಂದ’ದ ತಂಡ ಇಂತಿದೆ ನಗರದ ಅಭ್ಯರ್ಥಿಗಳು:

ಡಾ. ಕೆ. ಮಹಾಂತೇಶ್, ಎಸ್. ಮಲ್ಲನಗೌಡ, ಕೆರೆನಹಳ್ಳಿ ಚಂದ್ರಶೇಖರ್, ಕೋರಿ ವಿರೂಪಾಕ್ಷಪ್ಪ, ಡಾ. ಭಾಗ್ಯಲಕ್ಷ್ಮಿ (ವೀವಿ ಸಂಘದ ಮಾಜಿ ಅಧ್ಯಕ್ಷ, ದಿವಂಗತ ಡಾ. ಪೊಂಪನಗೌಡ ಅವರ ಪುತ್ರಿ), ಅಲ್ಲಂ ಪ್ರಮೋದ್, (ವೀವಿ ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಬಸವರಾಜ್ ಅವರ ಪುತ್ರ) ಮುಂಡಾಸದ ಚನ್ನಬಸವರಾಜ, ಬಿ.ಟಿ. ಪಾಟೀಲ್ (ಮಾಜಿ ಸಂಸದ, ದಿವಂಗತ ಕೋಳೂರು ಬಸವನಗೌಡ ಅವರ ಪುತ್ರ), ಸಾಹುಕಾರ್ ಸತೀಶ್ ಬಾಬು, ಬಿ. ಪಂಪನಗೌಡ. ಬಾಣಪುರ ರಮೇಶ್ ಗೌಡ, ಕೇಣಿ ಬಸಪ್ಪ, ಪಾಟೀಲ್ ಸಿದ್ದಾರೆಡ್ಡಿ, ನಂದೀಶ್ ಮಠಂ, ಹೆಚ್.ಶರಣ ಬಸವರಾಜ್ ಮತ್ತು ಶಿವ ರಮೇಶ್.

Share and Enjoy !

Shares