ದ್ವಿತೀಯ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಫೆಬ್ರವರಿ 20: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಕಾಸಸೌಧದಲ್ಲಿ ಪೂರ್ವಭಾವಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಹೌದು, ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್​ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಜೂನ್​ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ವರ್ಷ 8,96,271 ಮಕ್ಕಳು ಎಸ್​ಎಸ್​ಎಲ್​ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. ಇನ್ನು 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೂರೂ ಪರೀಕ್ಷೆಯಲ್ಲಿನ ಗರಿಷ್ಠ ಅಂಕ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಹಾಗಂತ ಮೂರೂ ಪರೀಕ್ಷೆ ಬರೆಯವುದು ಕಡ್ಡಾಯವಲ್ಲ. ಯಾವ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಾರೆ ಅದನ್ನು ಮಾತ್ರ ಪರಿಗಣನೆ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್ ಎಸ್ಎಲ್​ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.

ಎಸ್‌ಎಸ್‌ಎಲ್‌ಸಿ ಅಂತಿಮಾ ಪರೀಕ್ಷಾ ವೇಳಾಪಟ್ಟಿ

25-03-2024 ರಂದು ಪ್ರಥಮ ಭಾಷೆ ಕನ್ನಡ,ಇಂಗ್ಲಿಷ್, ಹಿಂದಿ, ಮರಾಠಿ,ತಮಿಳು, ಉರ್ದು,ಸಂಸ್ಕೃತ

27-03-2024 ರಂದು ಸಮಾಜ ವಿಜ್ಞಾನ

30-03-2024ರಂದು ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

02-04-2024 ರಂದು ಗಣಿತ,ಸಮಾಜ ಶಾಸ್ತ್ರ

03-04-2024 ರಂದು ಅರ್ಥಶಾಸ್ತ್ರ

04-04-2024- ತೃತೀಯ ಭಾಷೆ ಕನ್ನಡ,ಇಂಗ್ಲಿಷ್, ಹಿಂದಿ, ಉರ್ದು,ಸಂಸ್ಕೃತ, ಪರ್ಶಿಯನ್, ತುಳು

06-04-2024- ದ್ವೀತಿಯ ಭಾಷೆ ಇಂಗ್ಲಿಷ್, ಕನ್ನಡ

ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ದಿನಾಂಕ

01-03-2024 ರ ಶುಕ್ರವಾರ ಕನ್ನಡ ಹಾಗೂ ಅರೇಬಿಕ್

04-03-2024 ಸೋಮವಾರ ಗಣಿತ, ಶಿಕ್ಷಣ ಶಾಸ್ತ್ರ

05-03-2024 ರಂದು ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ

06-03-2024 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್,ಪರೀಕ್ಷೆ

07-03-2024 ರಂದು ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ

09-03-2024 ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ ಪರೀಕ್ಷೆ

11-03-2024 ರಂದು ತರ್ಕಶಾಸ್ತ್ರ,ವ್ಯವಹಾರ ಅಧ್ಯಯನ ಪರೀಕ್ಷೆ

13-03-2024 ರಂದು ಇಂಗ್ಲಿಷ್ ಪರೀಕ್ಷೆ 15-03-2024 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ ಪರೀಕ್ಷೆ

16-03-2024 ರಂದು ಅರ್ಥಶಾಸ್ತ್ರ ಪರೀಕ್ಷೆ

18-03-2024 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ

20-03-2024 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ

22-03-2024 ರಂದು ಹಿಂದಿ ಪರೀಕ್ಷೆ ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯ

Share and Enjoy !

Shares