ಅವಧೂತ ಶಿರೋಮಣಿ ಶ್ರೀವಿಷ್ಣುತೀರ್ಥರು –

ವಿಷ್ಣುತೀರ್ಥರೆಂದರೆ ‘ಅಡವಿ ಸ್ವಾಮಿಗಳು’ ‘ಅರಣ್ಯಕಾಚಾರ್ಯರು’ ಮೊದಲಾಗಿ ಖ್ಯಾತರಾಗಿರುವ ಮಾದನೂರಿನ ಶ್ರೀವಿಷ್ಣುತೀರ್ಥರು. ಪೀಠವನ್ನು ಅಪೇಕ್ಷಿಸದೆ ವಿಶೇಷ ಜ್ಞಾನಕಾರ್ಯಕ್ಕೆಂದು ಮಾತ್ರವೇ ಪರಮಹಂಸಾಶ್ರಮ ಸ್ವೀಕರಿಸಿ, ಪಾಠಪ್ರವಚನ ಮತ್ತು ಗ್ರಂಥರಚನೆಗಳಿAದ ಜನಜಾಗೃತಿಯನ್ನುಂಟು ಮಾಡಿ ಭಗವತ್ಸೇವೆ ಮಾಡಿದ ‘ಬಿಡಿಸನ್ಯಾಸಿ’ ಗಳೆಂಬ ವಿಶಿಷ್ಠ್ಠ ವರ್ಗವನ್ನೇ ವೇದಾಂತದ ಇತಿಹಾಸದಲ್ಲಿ ಕಾಣಬಹುದು.
ಕೃಷ್ಣ ಮತ್ತು ತುಂಗಾ ನದಿಗಳ ಮಧ್ಯವರ್ತಿಯಾದ ‘ಶ್ರೀಗೋಷ್ಠ’ (ಶಿರಹಟ್ಟಿ) ಎಂಬ ಗ್ರಾಮವೊಂದರ ನಿವಾಸಿಗಳಾಗಿದ್ದ ಶ್ರೀ.ತಿರುಮಲಚಾರ್ಯ ಹಾಗೂ ಶ್ರೀಮತಿ.ಭಾಗೀರಥಿ ಬಾಯಿಯವರ ಉದರದಿಂದ ಕ್ರಿ.ಶ.೧೭೫೬ ಈಶ್ವರ ಸಂವತ್ಸರದ ಶ್ರಾವಣ ಕೃಷ್ಣಾಷ್ಠಮಿ ದಿನದಂದು ಸವಣೂರು ಪ್ರಾಂತದ ಸಿದ್ಧಾಪುರ ಗ್ರಾಮದಲ್ಲಿ ಶ್ರೀವಿಷ್ಣುತೀರ್ಥರು ಜನಿಸಿದರು. ಜನಿಸಿದ ಮಗುವಿಗೆ ‘ಜಯತೀರ್ಥ’ ಎಂದು ನಾಮಕರಣ ಮಾಡಿದರು. ಸಕಾಲದಲ್ಲಿ ಚೌಲ, ಉಪನಯನಾದಿಗಳೊಂದಿಗೆ ಕಾವ್ಯ, ಕೋಶ, ವೇದಾಧ್ಯಯನಗಳನ್ನು ವಿಶೇಷವಾಗಿ ‘ಸುಮಧ್ವವಿಜಯ’ ಪಾಠವನ್ನು ಮಗನಿಗೆ ಮಾಡಿಸಿದರು. ಅನಂತರ ಹೆಚ್ಚಿನ ಅಧ್ಯಯನಕ್ಕಾಗಿ ಯೋಗ್ಯ ಗುರುವನ್ನು ಆರಿಸಿ ಮಂತ್ರಾಲಯಕ್ಕೆ ಹೊರಟುರು. ಸಕಲ ಶಾಸ್ತçಗಳನ್ನು ಅಲ್ಪಕಾಲದಲ್ಲೇ ಅಧ್ಯಾಯನ ಮಾಡಿದರು.
ಅನಂತರ ‘ಕಿನ್ನರಪುರ’ (ಕಿನ್ನಾಳ) ಕ್ಕೆ ತೆರಳಿ ಅನೇಕ ಸುಜನರಿಗೆ ಜ್ಞಾನೋಪದೇಶ ಮಾಡಿದರು. ಅನಂತರ ಗೃಹಸ್ಥ ಧರ್ಮವನ್ನು ಪಾಲಿಸಿ ‘ಕೃಷ್ಣಾಚಾರ್ಯ’ ರೆಂಬ ಪುತ್ರನನ್ನು ಪಡೆದರು. ಗಾರ್ಹಸ್ಥ÷್ಯದಲ್ಲಿ ಇದ್ದಾಗಲೂ ಸನ್ಯಾಸಿ ಶ್ರೇಷ್ಟರಂತೆ ಪರಮ ವಿರಕ್ತಿಯಿಂದಲೇ ಜೀವನ ನಿರತರಾಗಿ ವಿಶೇಷವಾಗಿ ಪಾಠ ಪ್ರವಚನ ಕಾಷ್ಟಮೌನಾದಿ ವ್ರತಗಳಲ್ಲಿ ಮಗ್ನರಾಗಿದ್ದರು. ಅಲ್ಲಿಗೂ ತೃಪ್ತರಾಗದ ಅವರು ಭಗವಂತನನ್ನು ಇನ್ನೂ ವಿಶೇಷವಾಗಿ ಆರಾಧಿಸಲೆಂದು ಗೃಹವನ್ನು ತ್ಯಜಿಸಿ, ಅವಧೂತಚರ್ಯವನ್ನು ಸ್ವೀಕರಿಸಿದರು.
ಪಾಠ, ಪ್ರವಚನ, ಗ್ರಂಥರಚನೆಗಳಲ್ಲೇ ಇನ್ನೂ ಹೆಚ್ಚಾಗಿ ಮಗ್ನರಾದ ಅವರು ‘ಮಲಪಹಾರೀ’ ತೀರದ ಗೌತಮ ಕ್ಷೇತ್ರವೆಂದು ಪ್ರಸಿದ್ಧವಾದ ಮುನಿವಳ್ಳಿ ಎಂಬ ಗ್ರಾಮದಲ್ಲಿ ೧೨ ವರ್ಷಗಳ ಕಾಲ ತಮ್ಮ ಜ್ಞಾನ-ಯಜ್ಞವನ್ನು ಅಖಂಡವಾಗಿ ಮುಂದುವರಿಸಿದರು. ಈ ರೀತಿಯ ಸಾರ್ಥಕ ‘ವಾನಪ್ರಸ್ಥ’ದ ಕುರುಹಾಗಿ ಅವರು ಅರಣ್ಯಕಾಚಾರ್ಯರು (ಅಡವಿ ಆಚಾರ್ಯರು) ಎಂದು ಪ್ರಸಿದ್ಧಿ ಪಡೆದರು.
ಅನಂತರ ತಮ್ಮ ೪೦ನೇ ವಯಸ್ಸಿನಲ್ಲಿ, ಆಗ ಶ್ರೀಮದುತ್ತರಾಧಿಮಠದ ಪೀಠವನ್ನು ಅಲಂಕರಿಸಿದ್ದ ಶ್ರೀಸತ್ಯವರತೀರ್ಥರಿಂದ ‘ಶ್ರೀವಿಷ್ಣುತೀರ್ಥರು’ ಎಂಬ ನಾಮದೊಂದಿಗೆ ಪರಮಹಂಸಾಶ್ರಮ ಸ್ವೀಕರಿಸಿದರು. ಹರಿ-ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾದ ಶ್ರೀವಿಷ್ಣುತೀರ್ಥರು ಅವರ ಜೀವನದುದ್ದಕ್ಕೂ ಅನೇಕ ಮಹಿಮೆಗಳನ್ನು ತೋರಿರುವರು. ಇವರ ಪವಾಡಗಳು ಭಗವಂತನ ಮಹಾತ್ಮೆ÷್ಯ ತಿಳಿಸುವುದರ ಜೊತೆಗೆ ಲೋಕೋಪಕಾರಕವೂ ಆಗಿವೆ. ಅವಿರತ ಸಾಧನೆಯಿಂದಾಗಿ ತಪಸ್ಸಿದ್ಧಿ–ಮಂತ್ರಸಿದ್ಧಿಯನ್ನು ಪಡೆದ ಯೋಗಿಗಳಾಗಿದ್ದರು. ಇವರ ಅವತಾರದ ಹಿನ್ನೆಲೆ ಶ್ರೀಜಯತೀರ್ಥರ ಪರಮಾನುಗ್ರಹವಾದರೆ ಬಾಲ್ಯದಲ್ಲಿ, ಯೌವನದಲ್ಲಿ ವಿದ್ಯಾಗುರುಗಳ ಅನುಗ್ರಹ, ನಂತರ ಆಶ್ರಮಗುರುಗಳ ಅನುಗ್ರಹವಾದರೆ ಕಡೆಯಲ್ಲಿ ಭಗವಂತನ ಪೂರ್ಣಾನುಗ್ರಹ ಹೀಗೆ ಹರಿ-ಗುರುಗಳ ಕರುಣೆಗೆ ಪಾತ್ರರಾದರು.
ಶ್ರೀವಿಷ್ಣುತೀರ್ಥರು ಪೂರ್ವಾಶ್ರಮದಿಂದಲೂ ವಿದ್ಯಾದಾನ-ಅನ್ನದಾನಗಳಿಗೆ ಪ್ರಸಿದ್ಧರಾಗಿದ್ದರು. ಇದು ಅವಿಚ್ಛೆನ್ನವಾಗಿ ನಡೆಯಲೆಂದು ಬದರೀನಾರಾಯಣ ಪ್ರತ್ಯಕ್ಷನಾದ. ಶಿಲಾರೂಪದಿಂದ ಬಳೀಗೆ ಬಂದ. ಸಂನ್ನಾ÷್ಯಸ ಧರ್ಮವನ್ನು ಚಾಚೂತಪ್ಪದೆ ನಿರ್ವಹಿಸಿ ೧೦೮ ಸಲ ಸುಧಾಮಂಗಳ ಮಾಡಿದ ಪುಣ್ಯಾತ್ಮರು. ಇವರಲ್ಲಿದ ಭೂತದಯೆ, ಶಿಷ್ಯವಾತ್ಸಲ್ಯ ಅನ್ಯಾದೃಶವಾದದ್ದು. ಕಿನ್ನಾಳದ ದೇಸಾಯಿಗೆ ವಿಚಿತ್ರ ಕಾಯಿಲೆ ಇತ್ತು. ಉಣ್ಣುವ ಅನ್ನ ಕ್ರಿಮಿಗಳಾಗಿ ಕಾಣುತ್ತ್ತಿದ್ದವು. ಒಮ್ಮೆ ಈ ದೇಸಾಯಿ ಮನೆಯಲ್ಲಿ ಶ್ರೀಗಳವರ ಭಿಕ್ಷೆ. ನೈವೇದ್ಯಾ ನಂತರ ಶ್ರೀಗಳು ದೇಸಾಯಿಯನ್ನು ತಮ್ಮ ಬಳಿಯಲ್ಲಿ ಕುಳ್ಳರಿಸಿ ಗೋಪಾಲಕೃಷ್ಣನಿಗೆ ನಿವೇದಿಸಿದ ಅನ್ನವನ್ನು ಭುಂಜಿಸಲು ಆಜ್ಞಾಪಿಸಿದರು. ಅಂದೇ ಕಾಯಿಲೆ ಮಾಯವಾಯಿತು. ಪರಮ ಶಿಷ್ಯನಾದ ದೇಸಾಯಿ ಶ್ರೀಗಳನ್ನು ಪ್ರಾಥಿಸಿಕೊಂಡು ಕುಶನದೀ ತೀರದಲ್ಲಿಯ ಸ್ಥಳವನ್ನು ಸಮರ್ಪಿಸಿದ. ಶ್ರೀಗಳವರಿದ್ದ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗದೆ ಬರಗಾಲ ಒದಗಿತು. ದಯಾಮಯರಾದ ಶ್ರೀಪಾದಂಗಳವರು ರಮಾಸ್ತೋತ್ರ ರಚಿಸಿ ಪ್ರಾರ್ಥಿಸಿಕೊಂಡು ಪ್ರತಿನಿತ್ಯ ತಾಮ್ರದ ನಾಣ್ಯ ಒಂದನ್ನು ಆರಾಧ್ಯಮೂರ್ತಿಯ ಕೆಳಗಿಟ್ಟು ಪೂಜಿಸುತ್ತಿದ್ದರು. ಪೂಜಾನಂತರ ಆ ನಾಣ್ಯವು ಬಂಗಾರದ ನಾಣ್ಯವಾಗಿ ಪರಿವರ್ತನೆಯಾಗುತ್ತಿತ್ತು. ಅದನ್ನು ಆರ್ತರಿಗೆ ಅನುಗ್ರಹಿಸುತ್ತಿದ್ದರು. ಒಂದು ವರುಷಕಾಲ ವಿತರಿಸಿ ನಂತರ ಆ ದೇಶದಲ್ಲಿ ಮಳೆ ಆಗುವಂತೆ ಅನುಗ್ರಹಿಸಿದರು. ಶಿಷ್ಯರ ಅಪೇಕ್ಷೆಯಂತೆ ಒಮ್ಮೆ ಕಲಿಪುರುಷನನ್ನು ನೋಡಿಸಿದರು. ಶ್ರೀಗಳವರು ಸೂಚಿಸಿದ ಸಮಯಕ್ಕೆ ಕಪ್ಪಾದ ನಾಯಿಗಳಿಂದ ಕೂಡಿದ ವ್ಯಕ್ತಿ ಗೋಚರನಾದ. ಅವನೇ ಕಲಿ ಎಂದು ತಿಳಿಯಿತು. ತಮ್ಮ ಪೂರ್ವಾಶ್ರಮದ ಮಕ್ಕಳಾದ ಕೃಷ್ಣಾಚಾರ್ಯರಿಗೆ ಮಕ್ಕಳಾಗದಿದ್ದಾಗ, ಸೊಸೆ ಸತ್ಯಭಾಮಾಗೆ ಪ್ರತಿನಿತ್ಯ ಪ್ರವಚನದ ಮಂದಿರದಲ್ಲಿ ದೀಪ ಹಚ್ಚುವಂತೆ ಹೆಳಿದರು. ಹಾಗೆ ಮಾಡಿಸಿ ಆದೇವರುಷ ಪುತ್ರಪ್ರಾಪ್ತಿಯಾಗುವಂತೆ ಅನುಗ್ರಹಿಸಿದರು. ಹೀಗೆ ಇನ್ನೊಂದು ಪ್ರಸಂಗದಲ್ಲಿ ಒಬ್ಬ ಸುಂಕದ ಅಧಿಕಾರಿಯ ಧರ್ಮಪತ್ನಿಗೆ ತುಳಿಸಿ ಗಿಡಗಳಿಗೆ ಪ್ರತಿನಿತ್ಯ ನೀರನ್ನು ಹಾಕಲು ಹೇಳಿ ಸಂತಾನ ಭಿಕ್ಷೆಯನ್ನು ಅನುಗ್ರಹಿಸಿದರು. ಅಪರೋಕ್ಷಜ್ಞಾನಿಗಳಾದ ಇವರ ಅಚಲ ಭಕ್ತಿಯಿಂದ ಕೂಡಿದ ಪ್ರಾರ್ಥನೆಗೆ ಒಂದು ದಿನ ವಾಯುದೇವರು ಮತ್ತು ರುದ್ರದೇವರು ಪ್ರತ್ಯಕ್ಷರಾಗಿ ದರ್ಶನ ಕೊಟ್ಟರು.
ಸ್ವಪ್ನದಲ್ಲಿ ಅವರಿಗೆ ಶ್ರೀಬದರಿನಾರಾಯಣನ ದರ್ಶನವಾದದ್ದಲ್ಲದೆ ಮಾದನೂರಿನ ಒಂದು ಸ್ವಪ್ನಸೂಚಿತ ಸ್ಥಳದಲ್ಲಿ ಬದರಿನಾರಾಯಣನ ಶಿಲಾಮಯ ವಿಗ್ರಹವು ದೊರತಿದೆ(ಇದು ಅದ್ಯಾಪಿ ಅವರ ವೃಂದಾವನದ ಮೇಲ್ಭಾಗದಲ್ಲಿ ಪೂಜೆಗೊಳ್ಳುತ್ತಲಿದೆ).
ಆಶ್ರಮದ ಅನಂತರ ಅಖಂಡ ೧೦ ವರ್ಷಗಳವರೆಗೆ ಜ್ಞಾನ ಯಜ್ಞವನ್ನು ವಿಶೇಷವಾಗಿ ಮುಂದುವರೆಸಿ ಸಹಸ್ರಾರು ಜನರ ಬಾಳಿಗೆ ಬೆಳಕನ್ನು ತೋರಿ ಕೊನೆಗೆ ತಮ್ಮ ೫೧ನೇ ವಯಸ್ಸಿನಲ್ಲಿ ಕಿಹ್ನಾಳು ಗ್ರಾಮದ ಬಳಿಯ ಕುಶನದೀ ತೀರದ ಮಾದನೂರಿನಲ್ಲಿ ಬೃಂದಾವನಸ್ಥರಾದರು. (ಕ್ರಿ.ಶ. ೧೮೦೬ ಮಾಘ ಬಹುಳ ತ್ರಯೋದಶಿ-ಶಿವರಾತ್ರಿ) ಶ್ರೀಕೃಷ್ಣ ಜಯಂತಿಯAದು ಜನಿಸಿದ ಅವರು ಶಿವಜಯಂತಿಯAದು ಬೃಂದಾವನಸ್ಥರಾದದ್ದು ಒಂದು ವಿಶೇಷ.

ಶ್ರೀವಿಷ್ಣುತೀರ್ಥರು ರಚಿಸಿರುವ ಕೆಲವು ಪ್ರಮುಖ ಗ್ರಂಥಗಳು ಇಂತಿವೆ :

ಶ್ರೀಸುಮಧ್ವವಿಜಯಪ್ರಮೇಯಫಲಮಾಲಿಕಾ, ಅಧ್ಯಾತ್ಮಾಮೃತರಸರಂಜನೀ, ಬಿಂಬಸ್ತುತಿ, ಬಿಂಬಾರ್ಪಣವಿದಿ, ಶ್ರೀಕೃಷ್ಣಾಷ್ಟಕ, ಮುಕ್ತಾಮಾಲ (ಗೀತಾಸಾರೋದ್ಧಾರ), ಶ್ರೀರಮಾಸ್ತೋತ್ರ, ಶ್ರೀಭಾಗವತ ಸಾರೋದ್ಧಾರ, ಷೋಡಶಿ, ಚತುರ್ಧಶಿ, ಶ್ರೀಮನ್ಯಾಯಸುಧಾ, ರಸರಂಜನಿ, ಆತ್ಮಸುಖಬೋಧಿನಿ-ಉಪದೇಶಪತ್ರ, ಮುಂತಾದ ಗ್ರಂಥಗಳನ್ನು ರಚಿಸಿ ಆಸ್ತಿಕ ವೃಂದಕ್ಕೆ ಮಹೋಪಕಾರ ಮಾಡಿದ್ದಾರೆ.

ಪ್ರಕಾಶ್ ಹುಣಸಗಿ,
ಬಳ್ಳಾರಿ.

Share and Enjoy !

Shares