ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಎಚ್ ಶಿವರಾಮೇಗೌಡ ಬಣ* ಕಾರಟಗಿ ತಾಲ್ಲೂಕು ಘಟಕ ವತಿಯಿಂದ *ಗೋಪಿ ರಕ್ತ ಭಂಡಾರ* ಚಾರಿಟೇಬಲ್ ಟ್ರಸ್ಟ್ ಸಮ್ಯುಕ್ತಾಅಶ್ರಯದಲ್ಲಿ ವಿಶ್ವ *ರಕ್ತ ದಾನಿಗಳ ದಿನಾಚರಣೆ* ಅಂಗವಾಗಿ ಕಾರಟಗಿ ಯ *ಡಾ!! ರಾಜಕುಮಾರ ಕಲಾ ಮಂದಿರ* ದಲ್ಲಿ *ಸ್ವಯಂ ಪ್ರೇರಿತ* ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಶಿಬಿರದಲ್ಲಿ *35 ಯುವಕರು* ರಕ್ತ ದಾನವನ್ನು ಮಾಡಿದರು..
ಬಳಿಕ ರಕ್ಷಣಾ ವೇದಿಕೆಯ ಪದಾಧಿಕಾರಿ ಮಾರುತಿ ಮಾತನಾಡಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆಸ್ಪತ್ರೆಗಳ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುವುದರಿಂದ ರಕ್ತದಾನ ಮಾಡುವ ಮೂಲಕ ಅಥವಾ ರಕ್ತದಾನಿಗಳ ಮೂಲಕ ರಕ್ತವನ್ನು ಪಡೆದು ಅವರಿಗೆ ನೀಡಿ ಜೀವ ಉಳಿಸಬಹುದು. ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಯುವ ಜನತೆ ಜೀವನದಲ್ಲಿ ವಿದ್ಯಾಭ್ಯಾಸದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಂಡು ರಕ್ತದಾನದಂತಹ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನದಿಂದ ನಮ್ಮ ದೈಹಿಕ ಅರೋಗ್ಯ ವೃದ್ಧಿಸುವುದರೊಂದಿಗೆ ಮತ್ತೊಬ್ಬರ ಜೀವವನ್ನು ರಕ್ಷಿಸಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಸಂದರ್ಭದಲ್ಲಿ ಕರವೆ ತಾ ಅದ್ಯಕ್ಷ ಮಾರುತಿ ಉಪಾಧ್ಯಕ್ಷ ಕಿರಣ್ ಸಿಂಗ ಕಾರ್ಯದ್ಯಕ್ಷ ವೀರೇಶ್ ದೇವರಮನಿ ಪ್ರ ಕಾ ವೆಂಕಟೇಶ ಎಮ್ ಖಜಾಂಚಿ ನೀಲಪ್ಪ ವೀರುಪಾಕ್ಷಿ ಸಜ್ಜಿವಲ,ಲಕ್ಷ್ಮಣ, ಸತೀಶ್,ಗೋವಿಂದ, ವೀರನ ಗೌಡ, *ನಾಗರಾಜ್ ಬೋವಿ* ಕೀಶೋರ್ ಪ್ರಭು
ಡಾ!! ಶರಣಪ್ಪ ಮಾವಿನ ಮಡ್ಗು ಯಮನೂರಪ್ಪ
ವೆಂಕಟೇಶ ಪೆಂಟರ್
ವಿರುಪಾಕ್ಷಿ ಸಾಲಿಮಠ ಮೈಬು.ಮತ್ತಿತರರು ಇದ್ದರು..