ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ವಿವಿಧೆಡೆ ದಾಳಿ; ೫ ಪ್ರಕರಣ ದಾಖಲು

Vijayanagara Vani
ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ವಿವಿಧೆಡೆ ದಾಳಿ; ೫ ಪ್ರಕರಣ ದಾಖಲು

ಬಳ್ಳಾರಿ, ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ

ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆವ್ಯಾಪ್ತಿಯಲ್ಲಿ ಗುರುವಾರದಂದು ಅಬಕಾರಿ ಪೊಲೀಸ್ಅಧಿಕಾರಿಗಳಿಂದ ವಿವಿಧೆಡೆ ದಾಳಿ ನಡೆಸಿ ಅಕ್ರಮಮದ್ಯ ಸಾಗಾಣಿಕೆ ಸಂಬAಧಿಸಿದAತೆ ೦೪ ಮತ್ತುಅಕ್ರಮವಾಗಿ ಗಾಂಜಾ ಸಾಗಾಣಿಕೆ ಸಂಬAಧಿಸಿದAತೆ ೦೧ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ.ಬಳ್ಳಾರಿ ನಗರದ ಹಳೇ ಬೆಂಗಳೂರು ರಸ್ತೆಯಲ್ಲಿನ ಸ್ಟೇಟ್ ಲಿಕ್ಕರ್ಸ್ ಮುಂದೆ ಕ್ರಾಸ್‌ನಲ್ಲಿರಸ್ತೆಗಾವಲು ಸಂದರ್ಭದಲ್ಲಿ ನೋಂದಣಿ ಇಲ್ಲದ ಹಸಿರು ಬಣ್ಣದ ದ್ವಿಚಕ್ರ ವಾಹನದಲ್ಲಿ ೧೨.೯೬೦ ಲೀ.(ಅಂದಾಜು ಮೌಲ್ಯ ರೂ.೨೬,೭೬೯) ಮದ್ಯವನ್ನುಸಾಗಾಣಿಕೆ ಮಾಡುತ್ತಿರುವ ವಾಹನ ಸವಾರಮತ್ತು ಮದ್ಯವನ್ನು ಜಪ್ತಿ ಮಾಡಿ ಪ್ರಕರಣದಾಖಲಿಸಲಾಗಿದೆಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದವ್ಯಕ್ತಿಯೊಬ್ಬರ ಮನೆಯಲ್ಲಿ ಶೋಧನೆ ಮಾಡಿಅಕ್ರಮವಾಗಿ ೯.೭೨೦ ಲೀ. ಮದ್ಯ (ಅಂದಾಜು ಮೌಲ್ಯರೂ.೭,೫೬೭) ಹೊಂದಿರುವುದನ್ನು ವಶಕ್ಕೆಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ

.ಸಿರುಗುಪ್ಪ ತಾಲ್ಲೂಕಿನಮಾಟಸೂಗೂರುಗ್ರಾಮದಿಂದ  ಉತ್ತನೂರು ಗ್ರಾಮಕ್ಕೆಹೋಗುವ ಕ್ರಾಸ್ ಹತ್ತಿರ ರಸ್ತೆಗಾವಲು ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ೮.೬೪೦ ಲೀ(ಅಂದಾಜು ಮೌಲ್ಯ ರೂ.೨೮೮೪೧) ಮದ್ಯ ಹಾಗೂವಾಹನವನ್ನು ಜಪ್ತುಪಡಿಸಿ, ಪ್ರಕರಣ ದಾಖಲಿಸಲಾಗಿದೆ.

ಬಳ್ಳಾರಿ ನಗರದ ಕೊಲ್ಮಿ ಚೌಕ್ ರಸ್ತೆಯಿಂದಬಾಪೂಜಿ ನಗರಕ್ಕೆ ಹೋಗುವ ರಸ್ತೆಯಲ್ಲಿರಸ್ತೆಗಾವಲು ವೇಳೆ ದ್ವಿಚಕ್ರ ವಾಹನದಲ್ಲಿ ೨೧.೬೦೦ಲೀ. (ಅಂದಾಜು ಮೌಲ್ಯ ರೂ.೫೪೬೦೦) ಮದ್ಯ ಸಾಗಾಣಿಕೆಮಾಡುವ ವೇಳೆ ಮದ್ಯ ಮತ್ತು ವಾಹನಸವಾರನನ್ನು ವಶಕ್ಕೆ ಪಡೆದು ಪ್ರಕರಣ

ದಾಖಲಿಸಲಾಗಿದೆ.ಬಳ್ಳಾರಿ ನಗರದ ಸ್ಟೇಡಿಯಂ ಹೋಗುವರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟಮಾಡುತ್ತಿದ್ದ ದ್ವಿಚಕ್ರ ವಾಹನದಲ್ಲಿ ೧.೫೧೦ ಗ್ರಾಂಎಲೆ, ಹೂವು, ಮೊಗ್ಗು, ಬೀಜ ಸೇರಿದ ಒಣ ಗಾಂಜಾ(ಅಂದಾಜು ಮೌಲ್ಯ ರೂ.೧ ಲಕ್ಷ) ಸಾಗಾಣಿಕೆಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹಸವಾರನ್ನು ವಶಕ್ಕೆ ಪಡೆದುಕೊಂಡು ಗಾಂಜಾಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!